Vijay Devarakonda: ಪಾಕ್ ವಿರುದ್ಧ ಭಾರತ ಯುದ್ಧ ಮಾಡುವ ಅಗತ್ಯವಿಲ್ಲ, ನಾವು ಮನುಷ್ಯರಾಗಿರಬೇಕು: ವಿಜಯ್ ದೇವರಕೊಂಡ!

Vijay Devarakonda: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರತೀಕಾರದ ಕೂಗು ಜೋರಾಗಿದೆ. ಉಗ್ರರನ್ನು ಸದೆಬಡಿಯಬೇಕು ಹಾಗೂ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ಭಾರತೀಯರು ಆಗ್ರಹಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಅದೇ ರೀತಿ ಇದೀಗ ನಟ ವಿಜಯ್ ದೇವರಕೊಂಡ ಕೊಟ್ಟಿರುವ ಹೇಳಿಕೆಯೂ ಟೀಕೆಗೆ ಗುರಿಯಾಗಿದೆ. ಇನ್ನೂ ಈ ವಿಚಾರ ಪರ - ವಿರೋಧ ಚರ್ಚೆಗೂ ಕಾರಣವಾಗಿದೆ. ಪಾಕಿಸ್ತಾನದ ಹಾಗೂ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿಗೆ ಸಂಬಂಧಿಸಿದಂತೆ ನಟ ವಿಜಯ್‌ ದೇವರಕೊಂಡ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರರು ನಡೆಸಿರುವ ದಾಳಿಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿಯು ಅತ್ಯಂತ ಭೀಕರವಾಗಿತ್ತು. ಈ ದಾಳಿಯಲ್ಲಿ ಉಗ್ರರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಇದು ವ್ಯಾಪಕ ಆಕ್ರೋಕ್ಕೆ ಹಾಗೂ ಪ್ರತೀಕಾರದ ಕೂಗಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ರೀತಿ ಇರುವಾಗಲೇ ದೇಶದಲ್ಲಿ ಕೆಲವರು ಯುದ್ಧ ಬೇಡ ಅಂತ ಹೇಳುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ವಿಜಯ್‌ ದೇವರಕೊಂಡ ಅಂತದ್ದು ಏನಂದ್ರು ಅಂತ ನೋಡೋಣ...

india-war-pakistan-vijay-deverakonda-comments

ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ವಿಚಾರವಾಗಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ರೆಟ್ರೋ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ್ದಾರೆ. ಭಾರತೀಯರಾದ ನಾವು ಮನುಷ್ಯರಾಗಿರಬೇಕು ಅಂತ ಅವರು ಅಭಿಪ್ರಾಯಪಟ್ಟಿದ್ದು. ಮುಂದುವರಿದು ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವ ಅವಶ್ಯಕತೆ ಸಹ ಇಲ್ಲ ಅಂತ ನನಗೆ ವೈಯಕ್ತಿಕವಾಗಿ ಅನಿಸುತ್ತದೆ. ಇದೇ ರೀತಿ ಪರಿಸ್ಥಿತಿ ಅಲ್ಲಿ ಮುಂದುವರಿದರೆ, ಪಾಕಿಸ್ತಾನದ ಜನರೇ ಬೇಸರದಿಂದ ಒಂದು ದಿನ ಅಲ್ಲಿನ ಸರ್ಕಾರದ ವಿರುದ್ಧವೇ ತಿರುಗಿ ಬೀಳುತ್ತಾರೆ ಅಂತ ಹೇಳಿದ್ದಾರೆ.

Take a Poll

ಈ ದಾಳಿ ಮಾಡಿರುವ ಉಗ್ರರಿಗೆ ಬುದ್ಧಿ ಇಲ್ಲ. ಅವರಿಗೆಲ್ಲ ಸರಿಯಾದ ಶಿಕ್ಷಣ ಸಿಕ್ಕಿಲ್ಲ... ಇನ್ನು ಪಾಕಿಸ್ತಾನದವರಿಗೆ ಕನಿಷ್ಠ ಮೂಲಸೌಕರ್ಯವೂ ಸಿಕ್ಕಿಲ್ಲ. ಅವರದ್ದೇ ಸಮಸ್ಯೆಗಳನ್ನು ಅವರಿಂದ ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಅವರು ಕಾಶ್ಮೀರದ ಮೇಲೆ ದಾಳಿ ಮಾಡುವ ಉದ್ಧಟತನವನ್ನು ಪ್ರದರ್ಶನ ಮಾಡಿದ್ದಾರೆ ಅಂತ ಅವರು ಹೇಳಿದ್ದಾರೆ. ಇನ್ನು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತರಾದವರ ಕುಟುಂಬದವರಿಗೆ ವಿಜಯ್ ದೇವರಕೊಂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಪರ - ವಿರೋಧ ಚರ್ಚೆ: ಇನ್ನು ನಟ ವಿಜಯ್ ದೇವರಕೊಂಡ ಅವರ ಹೇಳಿಕೆಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ರೀತಿ ಹೇಳಿಕೆಯನ್ನು ವಿಜಯ್‌ ಕೊಡಬಾರದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನೂ ಕೆಲವರು ಅದು ಅವರ ವೈಯಕ್ತಿಕ ಅಭಿಪ್ರಾಯ ಬಿಡಿ ಅಂತಲೂ ಹೇಳಿದ್ದಾರೆ... ಸೋಷಿಯಲ್‌ ಮೀಡಿಯಾದಲ್ಲಿ ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+