ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಯಶ್​ ತಾಯಿಗೆ ಇಲ್ಲ: ಪುಷ್ಪಾ ವಿರುದ್ಧ ಕೆಂಡ ಕಾರಿದ ದೀಪಿಕಾ ದಾಸ್

ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ​ಸಿನಿಮಾದ ರಾಕಿಭಾಯ್ ಯಶ್​ ಈಗ ಗ್ಲೋಬಲ್ ಸ್ಟಾರ್​ ಮಿಂಚಲು ರೆಡಿಯಾಗಿದ್ದಾರೆ. ಆರಂಭದ ದಿನಗಳಲ್ಲಿ ಚಿತ್ರರಂಗಕ್ಕೆ ಆಗಮಿಸಿದಾಗ ನಟ ಯಶ್‌ ಅವರು ಸಾಕಷ್ಟು ಕಷ್ಟ, ಸವಾಲು ಹಾಗೂ ಅವಮಾನಗಳನ್ನ ಎದುರಿಸಿದ್ದಾರೆ. ಅವಮಾನ ಆದ ಜಾಗದಲ್ಲಿಯೇ ಸನ್ಮಾನ ಸ್ವೀಕರಿಸಿ ಇಂದು ಕನ್ನಡ ಚಿತ್ರರಂಗವನ್ನು ಎಲ್ಲಿಂದ ಎಲ್ಲೋ ಕೊಂಡೊಯ್ದವರ ಸಾಲಿನಲ್ಲಿ ಯಶ್ ಕೂಡ ನಿಲ್ತಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅಖಂಡ ಭಾರತದ ಚಿತ್ರರಸಿಕರ ವರ್ಗ ಇಂದು ಯಶ್ ಅವರ ನಾಮಸ್ಮರಣೆ ಮಾಡುತ್ತಿದೆ. ಇಡೀ ದೇಶವನ್ನೇ ಗೆದ್ದು, ತನ್ನ ಕೆಲಸ ಹಾಗೂ ನಟನೆಯ ಮೂಲಕ ಎಲ್ಲಾರ ಬಾಯಿಯನ್ನೂ ಕೂಡ ಮುಚ್ಚಿಸಿದ ಯಶ್‌ ಅವರಿಗೆ ಸದ್ಯ ಅವರ ತಾಯಿಯೇ ಅಡ್ಡಗಾಲು ಹಾಕುತ್ತಿರುವಂತೆ ಇದೆ. ಇತ್ತೀಚೆಗೆ ಕೊತ್ತಲವಾಡಿ ಚಿತ್ರದ ಮೂಲಕ ನಿರ್ಮಾಪಕಿಯಾದ ಯಶ್‌ ಅವರ ತಾಯಿ ಪುಷ್ಪಾ ಅವರು ವಿವಾದಕ್ಕೀಡಾಗುವ ಮಾತುಗಳನ್ನೇ ಆಡುತ್ತಿದ್ದಾರೆ.

I Deserve Respect Even If I m Not Big Actress Deepika Das Slams Yash s Mom Pushpa

ಯಶ್‌ ಅವರ ತಾಯಿ ಕೆಲ ವಿವಾದಕ್ಕೀಡಾಗುವ ಮಾತುಗಳು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೋಲ್‌ ಆಗುತ್ತಿದ್ದು, ಯಶ್‌ ಬಾಸ್‌ ಇದಕ್ಕೆ ಬ್ರೇಕ್‌ ಹಾಕಿ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ. ಯಶ್‌ ಅವರ ಪಾಲಿಗೆ ಇವತ್ತು ಅವರ ತಾಯಿಯೇ ಖಳನಾಯಕಿಯಾಗಿದ್ದಾರೆ ಎಂಬ ಮಾತುಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೊತ್ತಲವಾಡಿ ಎಂಬ ಚಿತ್ರವನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಇವರದ್ದೇ. ಈ ಚಿತ್ರದ ಸೋಲಿಗೆ ಬೇರೆ ಯಾರು ಅಲ್ಲ ಬದಲಿಗೆ ಇವರೇ ನೇರವಾಗಿ ಕಾರಣವಾಗಿರುವುದು ದುರದೃಷ್ಟಕರ. ಯಾಕೆಂದರೆ ಕೊತ್ತಲವಾಡಿ ಚಿತ್ರದ ಪ್ರಚಾರದ ಸಮಯದಲ್ಲಿ ಚಿತ್ರಕ್ಕಿಂತ ಅನಗತ್ಯ ವಿಚಾರಗಳ ಕುರಿತೇ ಹೆಚ್ಚು ಮಾತನಾಡಿಕೊಂಡು ಬಂದ ಯಶ್‌ ತಾಯಿ ಪುಷ್ಪಾ ಅವರಿಗೆ ಅದ್ಯಾಕೋ ಅವರದ್ದೇ ಸಂಬಂಧಿ ದೀಪಿಕಾ ದಾಸ್ ಕಂಡರೆ ಮೈಯೆಲ್ಲಾ ಉರಿಯುತ್ತೆ. ಅದಕ್ಕೆ ಕಾರಣಗಳು ವ್ಯೆಯಕ್ತಿಕವಾಗಿ ಹಲವು ಇರಬಹುದಾದರೂ ಎಲ್ಲವನ್ನು ಮಾಧ್ಯಮದವರ ಮುಂದೆ ಹೇಳುವ ಅವಶ್ಯಕತೆ ಇರಲಿಲ್ಲ.

ಯಶ್‌ ನನ್ನ ಅಣ್ಣ ಅಥವಾ ದೊಡ್ಡಮ್ಮನ ಮಗ ಅಂತ ದೀಪಿಕಾ ದಾಸ್‌ ಎಲ್ಲಿಯೂ ಹೇಳದಿದ್ದರೂ ಕೂಡ ದೀಪಿಕಾ ದಾಸ್ ವಿರುದ್ಧ ಇತ್ತೀಚ್ಚಿಗೆ ಯಶ್ ಅವರ ತಾಯಿ ಪುಷ್ಪಾ ಅವರು ''ಅಶ್ವವೇಗ'' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಟಿ ದೀಪಿಕಾ ದಾಸ್ ಅವರ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದರು. ನನ್ನ ಕಂಡ್ರೆ ಭಯ.. ಯಶ್ ಕಂಡ್ರೆ ಅವಳಿಗೆ ಭಯ ಎಂದೆಲ್ಲಾ ಮಾತನಾಡಿದ್ದರು. ದೀಪಿಕಾ ದಾಸ್‌ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು, ಆಯ್ಕೆ ಮಾಡಿಕೊಳ್ಳಲು, ಯಾವ ಸಾಧನೆ ಮಾಡಿದ್ದಾಳೆ ಎಂದು ಕರೆದು ಅವಕಾಶ ಕೊಡುವುದು.

ಸಂಬಂಧ ಆದರೂ ಅವರನ್ನು ದೂರದಲ್ಲೇ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಕೇಳಿ ಎಂದು ಹೇಳಿದ್ದರು. ಸಾಕಷ್ಟು ಜನ ಹೀರೊಯಿನ್ ಇದ್ದಾರೆ, ಎಲ್ಲರನ್ನು ಬಿಟ್ಟು ದೀಪಿಕಾ ದಾಸ್ ಹೆಸರು ಯಾಕೆ ತಗೋಳ್ತೀರಾ ಎಂದು ಪ್ರಶ್ನೆ ಮಾಡಿದ್ದ ಯಶ್ ತಾಯಿ ಪುಷ್ಪಾ, ಅವಳೇನು ರಮ್ಯಾನಾ? ರಕ್ಷಿತಾನಾ? ಒಂದು ವೇಳೆ ದೊಡ್ಡದಾಗಿ ಸಾಧನೆ ಮಾಡಿದ್ದರೆ ಅವರ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಯಾಕೆ? ಎಂದು ಕೆಂಡ ಕಾರಿದ್ದರು.

ಇನ್ನೂ ಯಶ್ ಅವರ ತಾಯಿ ಮಾಡುತ್ತಿರುವ ನಿಂದನೆಗಳಿಂದ ಕೆರಳಿ ಕೆಂಡವಾಗಿರುವ ನಟಿ ದೀಪಿಕಾ ದಾಸ್ ಕೊನೆಗೂ ಮೌನ ಮುರಿದಿದ್ದಾರೆ. ಯಶ್ ತಾಯಿ ಪುಷ್ಪಾ ಅವರ ಮಾತುಗಳಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖಾರವಾದ ಪ್ರತಿಕ್ರಿಯೆ ನೀಡಿರುವ ದೀಪಿಕಾ ದಾಸ್, ಹೊಸ ಕಲಾವಿದರನ್ನ ಬೆಳಿಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನ ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ. ಮುಂದೇನು ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್‌ ಡ್ಯೂರೆಸ್ಪೆಕ್‌ ಟು ಸ್ಟಾರ್‌ ಆಫ್‌ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಶ್‌ ತಾಯಿಗೆ ದೀಪಿಕಾ ದಾಸ್ ತಿರುಗೇಟನ್ನು ನೀಡಿದ್ದಾರೆ. ‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+