Get Updates
Get notified of breaking news, exclusive insights, and must-see stories!

Bigg Boss: ಲಾಯರ್ ಜಗದೀಶ್‌ಗೆ ಭಾರಿ ಬೆಂಬಲ; ಗಂಡಸರಿಗೆ ಮಾತ್ರ ಯಾಕಿಂಗೆ ಅಂತಿದ್ದಾರೆ ನೆಟ್ಟಿಗರು

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಹಲವು ವಿವಾದಗಳಿಗೆ ಕಾರಣವಾಗಿದೆ. ಸ್ವರ್ಗ ನರಕ ಪರಿಕಲ್ಪನೆ ಬಗ್ಗೆ ಮಹಿಳಾ ಆಯೋಗ ದೂರು ಕೊಟ್ಟಿದ್ದು, ಮಹಿಳಾ ಸ್ಪರ್ಧಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ನುಗ್ಗಿದ್ದ ಕ್ರೇನ್‌ ಜೈಲು ಸೆಟ್‌ ರೀತಿ ಇದ್ದ ಗೋಡೆಯನ್ನು ಕಿತ್ತುಕೊಂಡು ಹೋಗಿತ್ತು. ಇದೀಗ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಒಂದೇ ಬಾರಿ ಇಬ್ಬರು ಅಭ್ಯರ್ಥಿಗಳನ್ನು ಶೋನಿಂದ ಹೊರಹಾಕಲಾಗಿದೆ.

ವಕೀಲ್ ಸಾಬ್ ಎಂದೇ ಖ್ಯಾತರಾಗಿರುವ ಜಗದೀಶ್ ಮತ್ತು ರಂಜಿತ್‌ರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳಿಸಲಾಗಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಉಳಿದ 15 ಅಭ್ಯರ್ಥಿಗಳು ಒಟ್ಟಾಗಿ ಜಗಳವಾಡಿದ್ದು, ಎಲ್ಲರಿಗೂ ಜಗದೀಶ್ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಮಹಿಳಾ ಅಭ್ಯರ್ಥಿಗಳಿಗೆ ಗೌರವ ಕೊಡದೆ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

Huge Support to Lawyer jagadish after involved fighting in Big Boss kannada

ಜಗಳ ವಿಕೋಪಕ್ಕೆ ಹೋಗಿದ್ದು, ರಂಜಿತ್ ಜಗದೀಶ್‌ರನ್ನು ತಳ್ಳಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿದೆ. ಇದೀಗ ಲಾಯರ್ ಜಗದೀಶ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಮಹಿಳೆಯಾದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಚೈತ್ರಾ ಕುಂದಾಪುರ ಮಾಡಿದ್ದೇನು?

ಜಗಳವಾಡುವ ಸಂದರ್ಭದಲ್ಲಿ ಸ್ಪರ್ಧಿ ಚೈತ್ರಾ ಕುಂದಾಪುರ ಲಾಯರ್ ಜಗದೀಶ್ ಅವರಿಗೆ ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಎನ್ನುವ ಪದ ಬಳಕೆ ಮಾಡಿದ್ದಾರೆ. ಇದು ಜಗದೀಶ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಜೊತೆಗೆ ಜಗದೀಶ್‌ರನ್ನು ಹೋಗಲೋ ಎಂದು ಏಕವಚನದಲ್ಲಿ ಕರೆಯಲಾಗಿದೆ, ಜಗದೀಶ್ ಕೂಡ ಮಹಿಳಾ ಅಭ್ಯರ್ಥಿಗಳನ್ನು ಏಕವಚನದಲ್ಲೇ ಮಾತನಾಡಿಸಿದ್ದಾರೆ. ಆದರೆ ಜಗದೀಶ್‌ರನ್ನು ಮಾತ್ರ ಶೋದಿಂದ ಹೊರಹಾಕಿದ್ದು, ಮಹಿಳಾ ಅಭ್ಯರ್ಥಿಗಳು ಮಾಡಿದ್ದು ಸರೀನಾ ಎಂದು ಪ್ರಶ್ನೆ ಮಾಡಲಾಗುತ್ತಿದೆ.

ಮಹಿಳೆ ಎಂದ ಮಾತ್ರಕ್ಕೆ ಗಂಡಸರಿಗೆ ಗೌರವ ಕೊಡದೇ ಮಾತನಾಡಬಹುದಾ, ಮಹಿಳಾ ಸ್ಪರ್ಧಿ ಮಾನಸಾ ಮೊದಲು ಜಗದೀಶ್ ಅವರಿಗೆ ಏಕವಚನದಲ್ಲಿ ಮಾತನಾಡಿದರು, ಜಗದೀಶ್ ಕೂಡ ಅದನ್ನೇ ತಿರುಗಿಸಿ ಕೊಟ್ಟರು. ಆದರೆ ಇಲ್ಲಿ ಜಗದೀಶ್‌ರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ ಎಂದು ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಲಾಯರ್ ಜಗದೀಶ್ ಮಾತನಾಡಿದ ರೀತಿ ತಪ್ಪಾಗಿರಬಹುದು ಆದರೆ ಉಳಿದ ಅಭ್ಯರ್ಥಿಗಳು ಮಾಡಿದ್ದು ಸರಿನಾ ಎಂದು ಕೇಳಿರುವ ವೀಕ್ಷಕರು, ಜಗದೀಶ್‌ರನ್ನು ಹೊರ ಹಾಕುವುದಾದರೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಹಿಳಾ ಅಭ್ಯರ್ಥಿಗಳನ್ನು ಕೂಡ ಹೊರ ಹಾಕಿ ಎಂದು ಒತ್ತಾಯಿಸಿದ್ದಾರೆ.

ಜಗದೀಶ್ ಇಲ್ಲದೇ ಇದ್ದರೆ ಬಿಗ್ ಬಾಸ್ ಕಾರ್ಯಕ್ರಮ ಫ್ಲಾಪ್ ಆಗಲಿದೆ. ಅವರು ಕಾರ್ಯಕ್ರಮಕ್ಕೆ ವಾಪಸ್ ಬರಬೇಕು ಎಂದು ಕೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+