Rihanna: ಅಂಬಾನಿ ಮಗನ ಮದುವೆಯಲ್ಲಿ ಪಾಪ್ ಗಾಯಕಿ ರಿಹಾನ್ನಾ: ಸಂಭಾವನೆ ಕೇಳಿದರೇ ಶಾಕ್ ಆಗೋದು ಗ್ಯಾರಂಟಿ!
ಜೈಪುರ, ಮಾರ್ಚ್ 01: ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಶೀಘ್ರದಲ್ಲೇ ವಿರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಜುಲೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹಕ್ಕೂ ಮುನ್ನ, ಅಂಬಾನಿ ಕುಟುಂಬವು ಮಾರ್ಚ್ 1 ರಿಂದ ಮೂರು ದಿನಗಳು ಗುಜರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿ ವಿವಾಹ ಪೂರ್ವ ಉತ್ಸವ ಆಯೋಜಿಸುತ್ತಿದೆ.
ಈ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಿಗೆ ಬಾಲಿವುಡ್, ಹಾಲಿವುಡ್ ಸೆಲಬ್ರಿಟಿಗಳು ಮಾತ್ರವಲ್ಲ ಪಾಪ್ ತಾರೆಯರ ದಂಡು ಭಾಗವಹಿಸುತ್ತಿದೆ. ಇನ್ನು, ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುದ್ದಿಯಾಗಿದ್ದ ಪಾಪ್ ತಾರೆ ರಿಹಾನ್ನಾ ಕೂಡ ಮದುವೆಗೆ ಬಂದಿಳಿದಿದ್ದಾರೆ. ರಾಧಿಕಾ ಮರ್ಚೆಂಟ್ - ಅನಂತ್ ಅಂಬಾನಿ ಮದುವೆಯಲ್ಲಿ ತಮ್ಮ ಕಲೆ ಪ್ರದರ್ಶಿಸಲಿದ್ದಾರೆ. ಆದರೆ, ಇಲ್ಲಿ ಸುದ್ದಿಯಾಗಿರುವುದು ಅವರು ಪಡೆದಿರುವ ಸಂಭಾವನೆ!.

ಕೋಟಿ ಕೋಟಿ ಸಂಭಾವನೆ ಪಡೆದ ರಿಹಾನ್ನಾ!
ಗಾಯಕಿ ರಿಹಾನ್ನಾ ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದಿದ್ದಾರೆ. ಈವೆಂಟ್‌ನಲ್ಲಿ ಪ್ರದರ್ಶನ ನೀಡಲು ಭಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ತಮ್ಮ ಲೈವ್ ಶೋಗಳಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಈ ಚೆಲುವೆಗೆ ಭಾರತದಲ್ಲಿಯೂ ಅಭಿಮಾನಿಗಳಿದ್ದಾರೆ. ತಮ್ಮ ಶೋಗಳನ್ನು ಎಷ್ಟು ಸುಂದರವಾಗಿ ನಡೆಸಿಕೊಡುತ್ತಾರೋ ಅವರ ಸಂಭಾವನೆ ಕೂಡ ಅಷ್ಟೇ ಸುಂದರ!.
ಹೌದು.. ಪಾಪ್ ತಾರೆ, ನಟಿ ರಿಹಾನ್ನಾ ತಮ್ಮ ಶೋಗಳಿಗಾಗಿ 8-9 ಮಿಲಿಯನ್ ಡಾಲರ್ ಪಡೆಯುತ್ತಾರೆ. ಭಾರತೀಯ ರೂಪಾಯಿಯಲ್ಲಿ ಇದು 66 ಕೋಟಿಯಿಂದ 74 ಕೋಟಿ ರೂಪಾಯಿಯಾಗುತ್ತದೆ. ಹೀಗಾಗಿ ಅವರು ಮದುವೆಯಲ್ಲಿ ಶೋ ನೀಡಲು 74 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ರಿಹಾನ್ನಾ ಗುಜರಾತ್‌ನ ಜಾಮ್‌ನಗರಕ್ಕೆ ಬರುವ ಮುನ್ನ ಅವರ ಲಗೇಜ್ ಬಂದಿಳೀದಿತ್ತು. ಇದನ್ನು ನೋಡಿ ಭಾರತೀಯರು ಕಣ್ಣೂ ಅರಳಿಸಿದ್ದರು. ಏಕೆಂದರೆ ಅವರ ಲಗೇಜ್ ಬರೋಬ್ಬರಿ ನಾಲ್ಕು ಟ್ರಕ್‌ಗಳಲ್ಲಿ ತುಂಬುವಷ್ಟಿತ್ತು. ಇದಾದ ಬಳಿಕ ನಟಿ, ಗಾಯಕಿ ರಿಹಾನ್ನಾ ಭಾರತಕ್ಕೆ ಬಂದಿಳಿದಿದ್ದಾರೆ. ರಿಹಾನ್ನಾ ಅವರು ಗರ್ಭಿಣಿಯಾಗಿದ್ದಾಗ 2023 ರ ಸೂಪರ್ ಬೌಲ್‌ನಲ್ಲಿ ನಡೆಸಿದ್ದ ಶೋ ಕೊನೆಯದಾಗಿದ್ದು, ಈ ಈವೆಂಟ್‌ನ ವೀಡಿಯೊಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

2018 ರಲ್ಲಿ ಇಶಾ ಅಂಬಾನಿ ಅವರ ಮದುವೆಯಲ್ಲಿ ಅಂಬಾನಿ ಕುಟುಂಬ ಕ್ವೀನ್ ಬೇ ಎಂದೇ ಖ್ಯಾತಿಗಳಿಸಿರುವ ಗಾಯಕಿ ಬೆಯೋನ್ಸ್ ಅವರನ್ನು ಭಾರತಕ್ಕೆ ಕರೆಸಿ ಶೋ ನಡೆಸಿತ್ತು. ಆ ವೇಳೆಯು ಅವರಿಗೆ ಭಾರಿ ಮೊತ್ತವನ್ನು ವೆಚ್ಚಮಾಡಿತ್ತು. ಈ ಬಾರಿ ಪಾಪ್ ತಾರೆ ರಿಹಾನ್ನಾ ಅವರನ್ನು ಕರೆಸಿದೆ.
ಮದುವೆಗೆ ಸಾಕ್ಷಿಯಾಗಲಿದ್ದಾರೆ ತಾರೆಯರು
ಮದುವೆ ಸಂಭ್ರಮಾಚರಣೆಗಳಿಗೆ ಅಂಬಾನಿ ಕುಟುಂಬ 120 ಮಿಲಿಯನ್ ಪೌಂಡ್‌ಗಳನ್ನು ಖರ್ಚು ಮಾಡುತ್ತಿದೆ. ಕೇವಲ ಅಡುಗೆಗೆ 20 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎನ್ನಲಾಗಿದೆ. ಇನ್ನು, ಇಡೀ ಬಾಲಿವುಡ್ ಇಂಟಸ್ಟ್ರೀಯೆ ಅಂಬಾನಿ ಮನೆಯಲ್ಲಿ ಹಾಜರಾಗಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಾಣಿ ಮುಖರ್ಜಿ, ಸಲ್ಮಾನ್ ಖಾನ್, ಅರ್ಜುನ್ ಕಪೂರ್, ಅಟ್ಲಿ, ಅಯನ್ ಮುಖರ್ಜಿ, ಅಮಿತಾಬ್ ಬಚ್ಚನ್, ರಜನಿಕಾಂತ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ಅಜಯ್ ದೇವಗನ್, ಕಾಜೋಲ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮತ್ತು ಹೆಚ್ಚಿನವರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಲ್ ಗೇಟ್ಸ್, ಗೌತಮ್ ಅದಾನಿ ಮತ್ತು ಕುಮಾರ್ ಮಂಗಲಂ ಬಿರ್ಲಾ ಮತ್ತು ಅನೇಕ ಕ್ರಿಕೆಟಿಗರು ಮತ್ತು ರಾಜಕಾರಣಿಗಳು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.












Click it and Unblock the Notifications