Hanumantha: ಬಿಗ್‌ಬಾಸ್‌ ಮನೆಗೆ ಹೋಗುವಾಗ ಹನುಮಂತ ತೆಗೆದುಕೊಂಡು ಹೋಗಿದ್ದ ಬಟ್ಟೆ ಎಷ್ಟು ಗೊತ್ತಾ?

ಗಾಯಕ ಹನುಮಂತ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿಜೇತರಾಗಿ ಕರ್ನಾಟಕದ ಜನತೆಯ ಮನೆ ಮಗನಾಗಿದ್ದಾರೆ. ಬಿಗ್‌ಬಾಸ್‌ ಇತಿಹಾಸದಲ್ಲಿ ಅತ್ಯಂತ ಸರಳ ಸ್ಪರ್ಧಿ ಎಂದೇ ಹನುಮಂತ ಖ್ಯಾತಿ ಪಡೆದಿದ್ದಾರೆ. ತಳುಕು ಬಳುಕು, ಶೋಕಿ, ಬಣ್ಣದ ಜಗತ್ತನ್ನು ನೋಡದ ಹನುಮಂತ ಅವರು ಬಿಗ್‌ಬಾಸ್‌ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗಿದ್ದ ಬಟ್ಟೆಗಳ ಸಂಖ್ಯೆ ಕೇಳಿದರೆ ನಿಮಗೆ ಒಂದು ಕ್ಷಣ ಅಚ್ಚರಿ ಮೂಡುವುದು ಗ್ಯಾರಂಟಿ.

ಹೌದು... ಬಿಗ್‌ಬಾಸ್‌ ಮನೆಯಲ್ಲಿ ಹನುಮಂತ ಕನ್ನಡಿಗರ ಮನದ ಬಾಗಿಲು ತಟ್ಟಿದ್ದು ಅವರ ಸರಳತೆ ಹಾಗೂ ಮುಗ್ಧತೆಯಿಂದ. ಅವರ ನಡೆ, ನುಡಿ, ವಿನಯಕ್ಕೆ ಜನ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ. ಪುಟ್ಟ ಮಕ್ಕಳು ಶಾಲೆಯಲ್ಲಿ ಶಿಕ್ಷಕರ ಮುಂದೆ ಕೈ ಕಟ್ಟಿ ನಿಲ್ಲುವಂತೆ ಹನುಮಂತ ಯಾರೇ ಮಾತನಾಡಿಸಿದರೂ ಕೈ ಕಟ್ಟಿ ನಿಂತು ಮಾತನಾಡುತ್ತಾರೆ. ಅವಶ್ಯಕತೆಯಿದ್ದಲ್ಲಿ ಮಾತು, ಕಾಮಿಡಿ, ಹಾಡು ಇವೆಲ್ಲವೂ ಹನುಮಂತ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

How much clothes did hanumantha take to the bigg boss house

ಬಿಗ್‌ಬಾಸ್‌ ಮನೆಗೆ ಹನುಮಂತ ತೆಗೆದುಕೊಂಡು ಹೋಗಿದ್ದ ಬಟ್ಟೆ ಎಷ್ಟು ಗೊತ್ತಾ?

ಬಿಗ್‌ಬಾಸ್‌ ಕನ್ನಡದ ಬಿಗ್‌ ರಿಯಾಲಿಟಿ ಶೋ. ಇದರಲ್ಲಿ ತಾವೊಬ್ಬ ಸ್ಪರ್ಧಿ ಆಗಬೇಕು ಅನ್ನೋದು ಹಲವರ ಕನಸು. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಎಷ್ಟೇ ಬಡತನದಿಂದ ಬಂದಿದ್ದರೂ ಕೂಡ ಒಳ್ಳೆ ಒಳ್ಳೆ ಬಟ್ಟೆ ಧರಿಸುತ್ತಾರೆ. ರಾತ್ರಿಗೊಂದು, ಆಟ ಆಡುವಾಗ ಒಂದು, ಮನೆಯಲ್ಲಿ ಇರುವಾಗ ಒಂದು ಹಾಗೂ ಮಲಗುವಾಗ ಒಂದು ಜೊತೆ ಬಟ್ಟೆಗಳನ್ನು ಧರಿಸುತ್ತಾರೆ. ಇನ್ನೂ ವಾರಾಂತ್ಯಕ್ಕೆ ತುಂಬಾ ದುಬಾರಿ ಬಟ್ಟೆಗಳನ್ನು ಸ್ಪರ್ಧಿಗಳು ಧರಿಸುತ್ತಾರೆ. ಕೆಲವರು ಇದಕ್ಕೂ ಹೆಚ್ಚು ಬಟ್ಟೆಗಳನ್ನು ಬದಲಾಯಿಸುವವರು ಬಿಗ್‌ಬಾಸ್‌ ಮನೆಯಲ್ಲಿ ಇದ್ದರು. ವಾರ ಕಳೆದರೆ ಸಾಕು ಪ್ರತೀಯೊಬ್ಬ ಸ್ಪರ್ಧಿಗಳ ಮನೆಯಿಂದ ಬಟ್ಟೆಗಳು ಬರುತ್ತವೆ. ಹೀಗಿರುವಾಗ ಗಾಯಕ ಹನುಮಂತ ಬಿಗ್‌ಬಾಸ್‌ ಮನೆಗೆ ಬರುವಾಗ ತಂದ ಬಟ್ಟೆಗಳ ಸಂಖ್ಯೆ ಕೇಳಿದರೆ ತುಂಬಾ ಅಚ್ಚರಿಯಾಗುತ್ತದೆ.

ಹೌದು... ಬಿಗ್‌ಬಾಸ್‌ ಮನೆಗೆ ಹೋಗುವಾಗ ಹನುಮಂತ ತೆಗೆದುಕೊಂಡು ಹೋದ ಬಟ್ಟೆಗಳ ಸಂಖ್ಯೆ ಕೇವಲ 5 ಜತೆ ಮಾತ್ರ. ಅಂದರೆ 5 ಶರ್ಟ್ ಹಾಗೂ 5 ಲುಂಗಿ. ಇದೇ 5 ಜತೆ ಬಟ್ಟೆಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಹನುಮಂತ ಕಳೆದಿದ್ದಾರೆ. ಈ ವಿಷಯವನ್ನು ಹನುಮಂತ ಸ್ವತ: ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹನುಮಂತ ತಂದ ಬಟ್ಟೆ ನೋಡಿ ದೋಸ್ತಾ ಧನ್‌ರಾಜ್ ಶಾಕ್

ಹನುಮಂತ ಬಿಗ್‌ಬಾಸ್‌ ಮನೆಗೆ ತಂದ ಬಟ್ಟೆಗಳ ಸಂಖ್ಯೆ ನೋಡಿ ಧನ್‌ರಾಜ್‌ ಶಾಕ್ ಆಗಿದ್ದರು. ಧನ್‌ರಾಜ್‌ ಹನುಮಂತನನ್ನು ಯಾಕಿಷ್ಟು ಕಡಿಮೆ ಬಟ್ಟೆ ತಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರಂತೆ. ಆಗ ಹನುಮಂತ ನನ್ನ ಬಳಿ ಇರೋದೇ ಇಷ್ಟು ಬಟ್ಟೆ ಇನ್ನೆಷ್ಟು ಬಟ್ಟೆ ತರ್ಲಿ ದೋಸ್ತಾ? ಇದನ್ನು ತೊಳೆದು ಹಾಕಿಕೊಂಡರೆ ಆಯ್ತು ಅಂತ ಹನುಮಂತ ಧನ್‌ರಾಜ್‌ ಅವರಿಗೆ ಹೇಳಿದ್ದರಂತೆ.

ಇದನ್ನು ನೋಡಿ ಕಿಚ್ಚ ಸುದೀಪ್ ಅವರು ಹನುಮಂತ ಅವರಿಗೆ ಬಟ್ಟೆಗಳನ್ನು ಕೊಡಿಸಿದ್ದರಂತೆ. ಆದರೆ ಆ ಬಟ್ಟೆಗಳ ಬಾಕ್ಸ್‌ ಅನ್ನು ಓಪನ್ ಮಾಡಲಿಕ್ಕೆ ಆಗಿಲ್ಲ. ಸುದೀಪ್ ಅವರು ನನಗೆ ಬಟ್ಟೆ ಕೊಡಿಸಿದ್ದು ತುಂಬಾ ಖುಷಿ ಆಯ್ತು ಎಂದಿದ್ದಾರೆ ಹನುಮಂತ. ಫಿನಾಲೆಯಲ್ಲಿ ಮಾತ್ರ ನಾನು ಹೊಸ ಲುಂಗಿ ಹಾಗೂ ಹೊಸ ಶರ್ಟ್ ಧರಿಸಿದ್ದೆ ಎಂದು ಹನುಮಂತ ಹೇಳಿದ್ದಾರೆ.

ಹನುಮಂತನಿಗೆ ಬಟ್ಟೆ ಕಳುಹಿಸಿದ ಸುದೀಪ್

ಕಿಚ್ಚ ಸುದೀಪ್ ಅವರು ಹನುಮಂತನಿಗೆ ಶೂಟ್, ಬೂಟ್, 10 ಲುಂಗಿ, 10 ಅಂಗಿ, ಕೋಟ್ ಎಲ್ಲವನ್ನೂ ಕಳುಹಿಸಿದ್ದರು. ಬಿಗ್‌ಬಾಸ್‌ ಮನೆಗೆ ಹೋಗುವಾಗ ಒಂದು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿದ್ದ ಹನುಮಂತ, ಹೊರ ಬರುವಾಗ ಸುಮಾರಷ್ಟು ಬ್ಯಾಗ್ ತೆಗೆದುಕೊಂಡು ಬಂದಿದ್ದಾರೆ. ಸುದೀಪ್ ಅವರು ಹನುಮಂತ ಅವರಿಗೆ ಬಟ್ಟೆ ಕೊಡಿಸಿದ್ದಕ್ಕೆ ಹನುಮಂತನಿಗೆ ತುಂಬಾ ಖುಷಿ ಆಗಿದೆ.

ಒಟ್ಟಿನಲ್ಲಿ ಹನುಮಂತನ ಸರಳತೆಗೆ ಬಿಗ್‌ಬಾಸ್‌ ತಂಡ, ಕಿಚ್ಚ ಸುದೀಪ್ ಹಾಗೂ ಬಿಗ್‌ಬಾಸ್‌ ವೀಕ್ಷಕರು ಕೂಡ ತುಂಬಾ ಇಷ್ಟಪಟ್ಟಿದ್ದಾರೆ. ಹನುಮಂತನ ಈ ಸರಳತೆ, ಮುಗ್ಧತೆ, ನಾವು ನಮ್ಮವರು ಎನ್ನುವ ಭಾವನೆಯೇ ಹನುಮಂತನನ್ನು ಗೆಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+