Darshan Attacked Time: ದರ್ಶನ್ ಶೆಡ್‌ನಲ್ಲಿ ಕಳೆದ ನಿಮಿಷಗಳು ಎಷ್ಟು? ವಿಡಿಯೋ ರಿವೀಲ್...
ಬೆಂಗಳೂರು ಜೂನ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆರಂಭದಲ್ಲಿ ತಮಗೂ ಈ ಕೊಲೆಗೂ ಸಂಬಂಧವಿಲ್ಲ ಎಂದು ಹೇಳಿದ್ದ ದಾಸ ಎಷ್ಟು ಸಮಯ ಶೆಡ್ಡಿನಲ್ಲಿ ಕಳೆದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲದೆ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಸಮಯ, ಇದರ ವಿಡಿಯೋ ಕೂಡ ರಿವೀಲ್ ಆಗಿದೆ.
ಹೌದು... ವಿಡಿಯೋದಲ್ಲಿ ದರ್ಶನ್ ಶೆಡ್ಡಿಗೆ ತೆರಳಿ ಎಷ್ಟು ನಿಮಿಷ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆನ್ನುವುದು ತಿಳಿದು ಬಂದಿದೆ. ದರ್ಶನ್ ಸಂಜೆ 4.30ಕ್ಕೆ ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಆಗಮಿಸಿದ್ದರು. ಬಳಿಕ ಅವರು ಸಂಜೆ 5.20ಕ್ಕೆ ಶೆಡ್ಡಿನಿಂದ ತೆರಳಿರುವುದು ಶೆಡ್ಡಿನಲ್ಲಿ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದರ್ಶನ್ ಶೆಡ್ಡಿನಲ್ಲಿ ಇದ್ದ ಅಷ್ಟೂ ಸಮಯದಲ್ಲಿ ಬರೋಬ್ಬರಿ 30 ನಿಮಿಷ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಮನ ಬಂದಂತೆ ಥಳಿಸಿದ್ದಾರೆ. ವಿಡಿಯೋದಲ್ಲಿ ದರ್ಶನ್ ಹಲ್ಲೆ ಮಾಡಿದ ರೀತಿ ನಿಜಕ್ಕೂ ಭಯಾನಕವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ ದಾಸ ತನ್ನ ಸ್ನೇಹಿತ ಪವನ್‌ಗೆ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಕಾಮೆಂಟ್ ಓದಲು ಹೇಳಿದ್ದಾರೆ. ಪವನ್ ಮೆಸೇಜ್ ಓದುತ್ತಿರುವಾಗ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ವಾಹನಕ್ಕೆ ಅವರ ಎತ್ತಿ ಎಸೆದಿದ್ದಾರೆ. ಒಳ್ಳೆ ಆಟವಾಡುವ ಬಾಲ್ ಅನ್ನು ಎತ್ತಿ ಎಸೆಯುವಂತೆ ರೇಣುಕಾಸ್ವಾಮಿಯನ್ನು ಎತ್ತಿ ಎಸೆದಿದ್ದಾರೆ ದರ್ಶನ್. ದರ್ಶನ್ ಕ್ರೌರ್ಯಕ್ಕೆ ವಾಹನಗಳೇ ನಡುಗಿ ಹೋಗಿವೆ.

ಬೂಟ್ ಕಾಲಿನಲ್ಲಿ ಒದ್ದು, ಎಳೆದಾಡಿದ್ದಾರೆ. ಖಾಸಗಿ ಭಾಗಕ್ಕೂ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಶೆಡ್ಡಿನಲ್ಲಿ ಇದ್ದ ವಿಡಿಯೋದಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ. ದಾಸನ ಈ ಕೃತ್ಯಕ್ಕೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಶೆಡ್ಡಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯದಲ್ಲಿ ದರ್ಶನ್ ಅವರ ಇನ್ನೊಂದು ಮುಖ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಸಿನಿಮಾ ಶೈಲಿಯಲ್ಲಿ ದರ್ಶನ್ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆರಂಭದಲ್ಲಿ ದರ್ಶನ್ ಹೇಳಿದ್ದೇನು?
ದರ್ಶನ್ ಪೊಲೀಸ್ ವಿಚಾರಣೆ ವೇಳೆ ಆರಂಭದಲ್ಲಿ ತಾವು ಶೆಡ್ಡಿಗೆ ಹೋಗಿಲ್ಲ ಎಂದಿದ್ದರು. ಬಳಿಕ ರೇಣುಕಾಸ್ವಾಮಿಗೆ ಬುದ್ಧಿ ಹೇಳಿ ಊರಿಗೆ ಹೋಗಲು ಹಣ ಕೊಟ್ಟು ಬಂದೆ ಬಳಿಕ ಅಲ್ಲೇನಾಯ್ತು ಅಂತ ನನಗೆ ಗೊತ್ತಿಲ್ಲ ಅಂದಿದ್ದರು. ಆದರೆ ಶೆಡ್ಡಿನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದರ್ಶನ್ ಹಲ್ಲೆಯ ದೃಶ್ಯ ಮುಂದಿಟ್ಟಾಗ ದಾಸ ಸೈಲೆಂಟಾಗಿದ್ದಾರೆ.
ದರ್ಶನ್ ತಾವು ಈ ರೀತಿ ಹಲ್ಲೆ ಮಾಡಿದರಾ ಎನ್ನುವುದನ್ನು ದರ್ಶನ್ನೇ ಅರಗಿಸಿಕೊಳ್ಳಲು ಆಗಿಲ್ಲ. ಅವರ ಹಲ್ಲೆಯನ್ನು ನೋಡಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದಾರೆ. ಸಿನಿಮಾದಲ್ಲಿ ನಟ ಖಳನಟರ ಮೇಲೆ ಹಲ್ಲೆ ಮಾಡುವಂತೆ ನಿಜಜೀವನದಲ್ಲಿ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ.
ಕ್ರೂರವಾಗಿ ಹಲ್ಲೆ ಮಾಡಿದ ದರ್ಶನ್ ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರ ಈ ಕೃತ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ದಾಸನಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications