Bigg Boss Kannada: ಕಿಚ್ಚನ ಎದುರಲ್ಲೇ ರಗಡ್ ರಜತ್‌ಗೆ ರೋಸ್ಟ್ ಮಾಡಿದ ಹನುಮಂತು
ಕನ್ನಡ ಬಿಗ್‌ಬಾಸ್ ಶೋ ಗ್ರ್ಯಾಂಡ್ ಫಿನಾಲೆ ಸಮೀಪಿಸುತ್ತಿದೆ. ಇತ್ತ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಇಂದು ಕೂಡ ಸ್ಪರ್ಧಿಗಳೊಂದಿಗೆ ಕಿಚ್ಚನ ಮಾತು ಮುಂದುವರಿಯಲಿದೆ. ಇನ್ನು ಹಳ್ಳಿಹೈದ ಹನುಮಂತ ಅವರು ರಜತ್ ಅವರಿಗೆ ಟಕ್ಕರ್ ಕೊಡುವ ಕೆಲಸ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಹನುಮಂತ ರಜತ್‌ಗೆ ಉರಿಸುವ ರೀತಿ ಮಾತನಾಡಿದ್ದಾರೆ.
ಕಿಚ್ಚನ ಮುಂದೆಯೇ ರಜತ್‌ಗೆ ಹನುಮಂತು ಮಾತಿನಿಂದಲೇ ತಿರುಗೇಟು ಕೊಟ್ಟಿದ್ದಾರೆ. ಇದನ್ನು ಕಂಡು ರಜತ್ ಕೂಡ ಫುಲ್ ದಂಗಾಗಿದ್ದಾರೆ. ಹನುಮಂತು ಅವರನ್ನು ಸಾಮಾನ್ಯವಾಗಿ ಉಳಿದ ಸ್ಪರ್ಧಿಗಳು ಕಾಲೆಳೆಯುತ್ತಿದ್ದರು. ಇದರಲ್ಲಿ ರಜತ್ ಕೂಡ ಒಬ್ಬರು. ಆದರೆ ಸೈಲೆಂಟಾಗಿದ್ದ ಹಳ್ಳಿಹೈದ ಮಾತಿನಲ್ಲೇ ಅಲ್ಲಿದ್ದವರಿಗೆ ಟಕ್ಕರ್ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಯಾರ ಕತೆ ಹಿಟ್, ಯಾರ ಕತೆ ಫ್ಲಾಪ್? ಎನ್ನುವ ಟಾಸ್ಕ್ ಕೊಟ್ಟರು. ಇದರಲ್ಲಿ ಹುರುಪಿನಿಂದ ಮಾತನಾಡಿದ ಹನುಮಂತು ನೇರವಾಗಿ ರಜತ್ ಬುಡಕ್ಕೆ ಬೆಂಕಿ ಇಟ್ಟಿದ್ದಾರೆ. ರಜತ್ ಅಣ್ಣ ಸಿಲ್ಲಿ ರೀಸನ್, ಜುಟ್ಟು ರೀಸನ್ ಅಂತೆಲ್ಲ ಅದ್ದಾಡ್ತಾನ್ ರೀ.. ಆದರೆ, ಸಿಲ್ಲಿ ರೀಸನ್ ಕೊಡೋಕೆ ನೆಟ್ಟಗೆ ಬರೋದಿಲ್ಲ ಎಂದು ಹನುಮಂತು ಹೇಳಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟ ರಜತ್, ಮಾವ ಮಾವ ಅನ್ಕೊಂಡು ಮಾವನಿಗೇ ಚುಚ್ತೀಯ. ಇಂತಹ ಡವ್‌ಗಳನ್ನ ನಾನು ಬೇಜಾನ್ ನೋಡಿದ್ದೀನಿ. ನೀನು ಸ್ಟ್ರಾಂಗ್ ರೀಸನ್ ಕೊಟ್ಟಿರೋದು ನಾನಂತೂ ನೋಡಿಲ್ಲ ಎಂದು ರಜತ್ ಕೂಡ ಗರಂ ಆಗಿದ್ದಾರೆ. ಇದಕ್ಕೆ ಮತ್ತೆ ಅಖಾಡಕ್ಕಿಳಿದ ಹನುಮಂತು, ಮೊದಲು ಸಿಲ್ಲಿ ರೀಸನ್ ಅರ್ಥ ಮಾಡಿಕೋ, ಆ ಮೇಲೆ ಸ್ಟ್ರಾಂಗ್ ರೀಸನ್ ಕೊಡುವಂತೆ ಎಂದು ಟಕ್ಕರ್ ಕೊಟ್ಟಿದ್ದಾರೆ.
ಮಾತು ಕಲೀತಿನಂತ ನೀನು ಮಾತನಾಡಬೇಡ.. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋದು ಮರಿಬೇಡ ಎಂದು ಹಾಡುವ ಮೂಲಕ ಹನುಮಂತು ರಜತ್‌ಗೆ ಉರಿಸಿದ್ದಾರೆ. ಇದನ್ನು ಕಂಡು ರಜತ್ ಫುಲ್ ಶಾಕ್‌ಗೆ ಒಳಗಾದರೆ, ಕಿಚ್ಚ ಸುದೀಪ್ ವೇದಿಕೆಯಲ್ಲೇ ಜೋರಾಗಿ ನಕ್ಕಿದ್ದಾರೆ. ಇಂದು ರಾತ್ರಿ ಈ ಎಪಿಸೋಡ್ ಪ್ರಸಾರವಾಗಲಿದೆ.

ಸದಾ ಹನುಮಂತು ಕಾಲೆಳೆಯುತ್ತಿದ್ದ ರಜತ್‌ಗೆ ಈ ಬಾರಿ ಹಳ್ಳಿಹೈದ ಸಖತ್ ಆಗಿಯೇ ತಿರುಗೇಟು ನೀಡಿದ್ದಾನೆ. ಮಾತು ಮಾತಿಗೂ ಸಿಲ್ಲಿ ರೀಸನ್, ಜುಟ್ಟು ರೀಸನ್ ಅಂತೆಲ್ಲಾ ಮಾತಾಡ್ತಾ ಓಡಾಡುವ ರಜತ್ ಅಣ್ಣ ಕಥೆ ಬಿಗ್ ಫ್ಲಾಪ್ ಎಂದು ಹನುಮಂತ ಹೇಳಿದ್ದಾನೆ. ಹನುಮಂತನ ಮಾತು ಕೇಳಿ ರಜತ್ ಕೂಡ ಶಾಕ್ ಆಗಿದ್ದಾರೆ.
ಇನ್ನು ಬಿಗ್‌ಬಾಸ್ ಮನೆಯಲ್ಲಿ ಈ ವಾರ ಮಿಡ್‌ವೀಕ್ ಎಲಿಮಿನೇಷನ್ ನಡೆಯುತ್ತಿದೆ. ಆದರೆ ಈ ಬಾರಿ ಡಬಲ್ ಎಲಿಮಿನೇಷನ್ ನಡೆಯುತ್ತಿದ್ದು, ಈಗಾಗಲೇ ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಗೌತಮಿ ಜಾಧವ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಂದು ಮತ್ತೊಬ್ಬ ಸ್ಪರ್ಧಿ ಬಿಗ್‌ಬಾಸ್ ಪಯಣ ಕೊನೆಗೊಳಿಸಲಿದ್ದಾರೆ. ಯಾರು ಆ ಸ್ಪರ್ಧಿ ಎನ್ನುವ ಕುತೂಹಲ ಎಲ್ಲರಲ್ಲಿದೆ.












Click it and Unblock the Notifications