Bigg Boss: ಉತ್ತರದ ಹುಲಿ ಹನುಮಂತು ಅವಾಜ್‌ಗೆ ತಂಡಾಹೊಡೆದ ರಜತ್!

ಬಿಗ್‌ಬಾಸ್‌ ಕನ್ನಡ ದಿನದಿಂದ ದಿನಕ್ಕೆ ಭಾರೀ ಕುತೂಹಲವನ್ನು ಮೂಡಿಸುತ್ತಿದೆ. ರಜತ್ ಗಲಾಟೆ ಹಾಗೂ ಹನುಮಂತು ಕಾಮಿಡಿ ವಿತ್‌ ಸಾಂಗ್ ಎಲ್ಲವೂ ಮಿಕ್ಸ್ ಆಗಿ ದೊಡ್ಮನೆ ಒಂದು ರೀತಿ ವಿಭಿನ್ನವಾದ ಕಳೆ ಪಡೆದುಕೊಂಡಿದೆ. ಕುರಿಗಾಯಿ ಹನುಮಂತ ತನ್ನ 'ಗೆಳತಿ' ಹಾಡಿನೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದರೆ, ಇತ್ತ ರಜತ್ ಅವಾಚ್ಯ ಪದ ಬಳಕೆಯಿಂದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ನಡುವೆ ಉತ್ತರದ ಹುಲಿ ಹನುಮಂತು ಹಾಕಿದ ಅವಾಜ್‌ಗೆ ರಜತ್ ತಂಡಾ ಹೊಡೆದಿದ್ದಾರೆ.

ಹೌದು... ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಆಗಿ ಎಂಟ್ರಿ ಕೊಟ್ಟ ರಜತ್ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಅವರು ಬಳಕೆ ಮಾಡುವ ಪದಗಳು ಮನೆ ಮಂದಿಗೆ ಮಾತ್ರವಲ್ಲ ಬಿಗ್‌ಬಾಸ್‌ ವೀಕ್ಷಕರಿಗೂ ಕೋಪ ನೆತ್ತಿಗೇರುವಂತೆ ಮಾಡಿದೆ. ಗೋಲ್ಡ್‌ ಸುರೇಶ್ ಅವರೊಂದಿಗೆ ಜಗಳವಾಡಿದ ರಜತ್ ಸಿಕ್ಕಾಪಟ್ಟೆ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ಅವರ ಬೀಪ್... ಬೀಪ್.. ಬೀಪ್... ಪದಗಳಿಗೆ ಸುರೇಶ್ ಕೆಂಡಮಂಡಲರಾಗಿ ಬಿಗ್‌ಬಾಸ್‌ ಮನೆಯಿಂದ ಹೊರಬರುವ ನಿರ್ಧಾರ ಮಾಡಿದ್ದರು. ಆದರೀಗ ಮನೆ ಮಂದಿ ಎಲ್ಲಾ ಸೇರಿಕೊಂಡು ರಜತ್‌ ಅವಾಚ್ಯ ಪದ ಬಳಕೆಗೆ ಬ್ರೇಕ್ ಹಾಕಿದ್ದಾರೆ.

hanumantha voices for rajat in bigg boss kannada house video Viral on social media

ಕಳೆದ ದಿನದ ಸಂಚಿಕೆಯಲ್ಲಿ ರಜತ್‌ ಅವರಿಗೆ ಕಳಪೆ ಪಟ್ಟ ನೀಡಿದ ಸ್ಪರ್ಧಿಗಳು ಜೈಲಿಗೆ ಕಳುಹಿಸಿದ್ದಾರೆ. ಇದರಿಂದಾಗಿ ರಜತ್ ಕೋಪ ಇನ್ನಷ್ಟು ಜಾಸ್ತಿ ಆಗಿದೆ. ಇದೇ ಕೋಪದಲ್ಲಿ ಮುಂದೇನು ಮಾಡ್ತಾರೆ ರಜತ್ ಅನ್ನೋ ಭಯ ಸ್ಪರ್ಧಿಗಳಲ್ಲಿ ಕಾಡತೊಡಗಿದೆ. ಆದರೆ ಇನ್ಮುಂದೆ ಕಾಮಿಡಿಯಾಗಿ ರಿವೇಂಜ್‌ ತೀರಿಸಿಕೊಳ್ಳಲು ರಜತ್‌ ನಿರ್ಧರಿಸಿದಂತೆ ಕಾಣಿಸುತ್ತಿದೆ. ಹೀಗಾಗಿ ಜೈಲಿನಲ್ಲಿದ್ದುಕೊಂಡು ರಜತ್ ಕಾಮಿಡಿಯಲ್ಲಿ ಟಾಂಗ್‌ ಕೊಡುತ್ತಿದ್ದಾರೆ.

ತರಕಾರಿ ಕಟ್ ಮಾಡಲು ಎರಡು ಗಂಟೆ ಬೇಕು ಎಂದ ರಜತ್

ಬಿಗ್‌ಬಾಸ್‌ ನಿಯಮದ ಪ್ರಕಾರ ಜೈಲಿನಲ್ಲಿರುವ ಸ್ಪರ್ಧಿ ಕಟ್‌ ಮಾಡಿ ಕೊಟ್ಟ ತರಕಾರಿಯಿಂದಲೇ ಅಡುಗೆಯನ್ನು ತಯಾರಿಸಬೇಕು. ಆದರೆ ಭವ್ಯ ಅವರು ತಂದು ಕೊಟ್ಟ ತರಕಾರಿಯನ್ನು ಕಟ್ ಮಾಡಲು ರಜತ್ ಬರೋಬ್ಬರಿ ಎರಡು ಗಂಟೆ ಬೇಕು ಎಂದಿದ್ದಾರೆ. ನನಗೆ ಕಳಪೆ ಕೊಡ್ತಾರಾ? ಈಗ ನಾನು ಮಾಡ್ತೀನಿ ಅಂತ ಹೇಳ್ತಾ ತರಕಾರಿ ಕಟ್ ಮಾಡಲು ಎರಡು ಗಂಟೆ ಬೇಕಾಗುತ್ತದೆ. ಬೇಗ ಕಟ್ ಮಾಡಿಕೊಟ್ಟರೆ ಈ ನನ್ ಮಕ್ಳು ನನಗೇನು ಉತ್ತಮ ಕೊಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ ರಜತ್.

hanumantha voices for rajat in bigg boss kannada house video Viral on social media

ರಜತ್‌ ಹೀಗೆ ಹೇಳುವಾಗ ಮಂಜು, ಹನುಮಂತ, ಧನರಾಜ್, ಗೌತಮಿ ಅವರು ಜೈಲಿನ ಬಳಿ ಇರ್ತಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಹನುಮಂತ, 'ಜಾಸ್ತಿ ಮಾತಾಡಿದ್ರೆ ಬರ್ಲೆನು..?' ಅಂತ ಜೈಲಿನ ಕಂಬಿ ಒಳಗಿಂದ ನುಗ್ಗಲು ನೋಡುತ್ತಾರೆ. ಇದು ಸಖತ್‌ ಕಾಮಿಡಿಯಾಗಿರುವ ಸೀನ್ ಅನ್ನೋದ್ರಲ್ಲಿ ಡೌಟೇ ಇಲ್ಲ.

ಆಳೆತ್ತರದ ರಜತ್‌ಗೆ ಕಾಳೆತ್ತರದ ಹನುಮಂತು ಅವಾಜ್‌!

ಆಳೆತ್ತರದ ರಜತ್‌ಗೆ ಕಾಳೆತ್ತರದ ಹನುಮಂತು ಅವಾಜ್‌ ಹಾಕಿದ್ದು ಭಾರೀ ನಗಪಾಟಲೆಗೆ ಗುರಿಯಾಗಿದೆ. ಹೀಗೆ ಹನುಮಂತ ರಜತ್‌ಗೆ ಅವಾಜ್‌ ಹಾಕಿದ್ದು ಸಖತ್ ಕಾಮಿಡಿಯಾಗಿದ್ದು ವೈರಲ್ ಆಗಿದೆ.

ಆದರೆ ರಜತ್ ಬುದ್ಧಿವಂತಿಕೆಯಿಂದ ತಮಗೆ ಕಳಪೆ ನೀಡಿದವರ ವಿರುದ್ಧ ರಿವೇಂಜ್‌ ತೀರಿಸಿಕೊಳ್ಳಲು ತರಕಾರಿ ಕಟ್ ಮಾಡಲು ತಡವಾಗುತ್ತದೆ ಎನ್ನುತ್ತಿದ್ದಾರೆ. ಹೀಗಾದರೆ ಮನೆ ಮಂದಿಗೆಲ್ಲಾ ಊಟ ಸಿಗುವುದು ಕಷ್ಟ ಇದೆ. ಇದರಿಂದ ಬೆಳಗಿನ ಉಪಾಹಾರ ತಯಾರಿಸಲು ತಡವಾಗಲಿದ್ದು ಮನೆ ಮಂದಿಯ ರಜತ್‌ ಮೇಲಿನ ಕೋಪ ಇನ್ನಷ್ಟು ಜಾಸ್ತಿ ಆಗಲಿದೆ. ಇದು ಯಾವ ಹಂತಕ್ಕೆ ಹೋಗುತ್ತದೆ ಎಂದು ಇಂದಿನ ಸಂಚಿಕೆಯಲ್ಲಿ ಕಾದು ನೊಡಬೇಕಿದೆ.

ಕಳಪೆ ಕೊಟ್ಟು ಟಾಪ್ 5 ಸ್ಪರ್ಧಿ ರಜತ್ ಎಂದರು..

ಬಿಗ್‌ಬಾಸ್‌ನಲ್ಲಿ ಈಗ ಕಿಚ್ಚನ ಜೊತೆ ವಾರದ ಕಥೆ ನಡೆಯುತ್ತಿದೆ. ವೈಲ್ಡ್ ಕಾರ್ಡ್ ರಜತ್ ದೊಡ್ಮನೆಯಲ್ಲಿ ಭಾರೀ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ರಜತ್ ಕಳಪೆ ಪಡೆದು ಮನೆ ಮಂದಿಗೆಲ್ಲಾ ಸಂಜೆ ನಾಲ್ಕು ಗಂಟೆಗೆ ತಿಂಡಿ ಮಾಡುವ ಶಿಕ್ಷೆ ನೀಡಿರುವುದು ಕೂಡ ಸಿಕ್ಕಾಪಟ್ಟೆ ಹೈಲೆಟ್ ಆಗಿದೆ.

ಇದೀಗ ರಜತ್‌ಗೆ ಕಳಪೆ ನೀಡಿದವರೆಲ್ಲಾ ರಜತ್‌ ಟಾಪ್ 5 ಸ್ಪರ್ಧಿ ಎಂದು ಹೇಳಿದ್ದಾರೆ. ಸುರೇಶ್ ಹಾಗೂ ರಜತ್ ಅವರಿಗೆ ಜಗಳಕ್ಕೆ ಸೊಪ್ಪು ಹಾಕಿದವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಟಾಸ್ಕ್‌ ವೇಳೆ ಮೈಮರೆಯುವ ಸ್ಪರ್ಧಿಗಳಿಗೂ ಚಳಿ ಬಿಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ರಜತ್ ಸದ್ಯ ಬಿಗ್‌ಬಾಸ್‌ ಪ್ರೇಕ್ಷಕರ ದೃಷ್ಟಿಯಲ್ಲಿ ಹೀರೋ ಆಗಿದ್ದು, ರಜತ್ ಬಿಗ್‌ಬಾಸ್ ಮನೆಗೆ ಸೂಟೆಬಲ್ ಸ್ಪರ್ಧಿ ಎನ್ನುತ್ತಿದ್ದಾರೆ ಜನ. ಇನ್ನೂ ಕಳೆದ ಬಾರಿ ಕಿಚ್ಚನಿಂದ ಬೈಸಿಕೊಂಡಿದ್ದ ಚೈತ್ರ ಈ ಬಾರಿ ಹೊಗಳಿಸಿಕೊಂಡಿದ್ದಾರೆ. ಮನೆ ಮಂದಿಯಿಂದ ಕಳಪೆ ಪಟ್ಟ ಪಡೆದಿದ್ದ ರಜತ್ ಈಗ ಅವರಿಂದಲೇ ಟಾಪ್ 5 ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೀಗಾಗಿ ಬಿಗ್‌ಬಾಸ್‌ ಮನೆಯಲ್ಲಿ ರಿಯಲ್ ಆಟ ಈಗ ಶುರುವಾಗಿದ್ದು ನೋಡುಗರ ಕೂತೂಹಲವನ್ನು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+