Bigg Boss: ಕಣ್ಣಿನೊಳಗ ಶುರುವಾದ ಪ್ರೀತಿ, ಮನಸಿನೊಳಗ ಮನಿ ಮಾಡೇತಿ..: ಬಿಗ್ ಬಾಸ್ ಹನುಮಂತನ ರೋಮ್ಯಾಂಟಿಕ್ ಸಾಂಗ್ ಫುಲ್ ವೈರಲ್
ಸರಿಗಮಪ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಗಾಯಕ ಹನುಮಂತ ಲಮಾಣಿ ಬಿಗ್‌ಬಾಸ್ ಮನೆಯಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. 'ಬಿಗ್‌ಬಾಸ್' ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿರುವ ಕುರಿಯಾಗಿ ಹನುಮಂತ ತಮ್ಮ ಹಾಡಿನಿಂದ ಭಾರೀ ಸುದ್ದಿಯಾಗುತ್ತಿದ್ದಾರೆ. ಹನುಮಂತನ ಹಾಡುಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿವೆ. ಯುವಪೀಳಿಗೆಯಂತೂ ಹನುಮಂತನ ಹಾಡುಗಳನ್ನು ಗುನುಗುಟ್ಟುತ್ತಿದೆ. ಅಂದಹಾಗೆ ಇತ್ತೀಚೆಗೆ ಹನುಮಂತ ಹಾಡಿದ ರೋಮ್ಯಾಂಟಿಕ್ ಹಾಡು ಸಖತ್ ವೈರಲ್ ಆಗುತ್ತಿದೆ.
ಹೌದು.. ಬಿಗ್‌ಬಾಸ್ ಶೋನಲ್ಲಿ ಭಾರೀ ಸುದ್ದಿಯಾದ ಹನುಮಂತ, ಇತ್ತೀಚೆಗೆ ಪ್ರೇಮಗೀತೆಗಳನ್ನು ಹಾಡಲು ಶುರುಮಾಡಿದ್ದಾರೆ. ತಮ್ಮದೇ ಆದ ಹಳ್ಳಿಗಾಡಿನ ಶೈಲಿಯಲ್ಲಿ ಹಾಡುವ ಹನುಮಂತನ ಹಾಡುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ಹನುಮಂತ ಅವರು ತಮ್ಮ ಹುಡುಗಿಗಾಗಿ ಮತ್ತೊಂದು ಹಾಡು ಹಾಡಿದ್ದಾರೆ. ಹಾಗಾದರೆ ಹನುಮಂತ ಹಾಡಿದ ಆ ಹಾಡು ಯಾವುದು?

ಹನುಮಂತ ಇತ್ತೀಚೆಗೆ ತಮ್ಮ ಹುಡುಗಿಗಾಗಿ ಹೊಸ ಹಾಡನ್ನು ಹಾಡಿದ್ದಾರೆ. 'ಕಣ್ಣಿನೊಳಗ ಶುರುವಾದ ಪ್ರೀತಿ, ಮನಸಿನೊಳಗ ಮನಿ ಮಾಡೇತಿ' ಹನುಮಂತ ಹಾಡಿದ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಹಾಡಿನ ಕ್ಲಿಪ್ ಫೇಸ್‌ಬುಕ್‌ನಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.
ತಮ್ಮ ಹುಡುಗಿಗಾಗಿ ಮತ್ತೊಂದು ಹಾಡು ಹಾಡಿದ ಹನುಮಂತ
'ಕಣ್ಣಿನೊಳಗ ಶುರುವಾದ ಪ್ರೀತಿ, ಮನಸಿನೊಳಗ ಮನಿ ಮಾಡೇತಿ. ಎರಡು ದೇಹ ಒಂದೇ ಜೀವ.. ಪ್ರೇಮವಾಗಿ ಬೆರೆತೈತಿ..
ನನ್ನ ಹೃದಯಾ ರಾಜ್ಯದೊಳಗ ಮಹಾರಾಣಿ ನೀನೇ ಗೆಳತಿ...
ನಿಜ ಹೇಳತೀನಾ ಗೆಳತಿ. ಕಿವಿಗೊಟ್ಟ ಕೇಳ ಗೆಳತಿ.. ಪವಿತ್ರಾ ನಮ್ಮ ಪ್ರೀತಿ.. ನಿನ್ನ ನೆನಪು ನನ್ನ ಕಾಡುತೈತಿ..
ಬೇಗ ಬಾ ನನ್ನ ಸಂಗಾತಿ.. ನಿನ್ನ ನೆನಪು ನನ್ನ ಕಾಡುತೈತಿ.. ಬೇಗ ನನ್ನ ಸಂಗಾತಿ.. ನಿನ್ನ ನೆನಪು ನನ್ನ ಕಾಡುತೈತಿ..
ಬಿಗ್‌ಬಾಸ್ ಮನೆಗೆ ಆಗಮಿಸಿದಾಗಿನಿಂದಲೂ ಹನುಮಂತು ತಮ್ಮ ಹುಡುಗಿಗಾಗಿ ಒಂದಿಲ್ಲಾ ಒಂದು ಹಾಡನ್ನು ಹಾಡುತ್ತಲೇ ಇರುತ್ತಾರೆ. ಆರಂಭದಲ್ಲಿ ಈ ಹಾಡುಗಳನ್ನು ಇಷ್ಟ ಪಡುತ್ತಿದ್ದ್ ಅವರ ಅಭಿಮಾನಿಗಳು, ಈಗ ಈ ಹಾಡುಗಳಿಂದ ಹನುಮಂತ ಅವರಿಗೆ ಪ್ರೇಯಸಿ ಇದ್ದಾಳೆ ಅನ್ನೋದನ್ನು ಅರ್ಥ ಮಾಡಿಕೊಂಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿರುವ ಹನುಮಂತನಿಗೂ ಗೆಳತಿ ಇರುವುದು ಈ ಹಾಡುಗಳಿಂದ ನಿಜವಾಗಿದೆ. ಹೀಗಾಗಿ ಸುದೀಪ್ ಕೂಡ ಹನುಮಂತ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಆಗ ಹನುಮಂತ ಇದಕ್ಕೆ ಉತ್ತರವಾಗಿ ಹಾಡು ಹೇಳಿದ್ದರು. ಆ ಹಾಡು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ತಮ್ಮ ಹುಡುಗಿಗಾಗಿ ಮತ್ತೊಂದು ಹಾಡು ಹಾಡಿದ ಹನುಮಂತ
ನಿನ ಮಾರೀ ನೋಡಂಗ ಆಗೈತಿ
ನಿನ ಮಾರೀ ನೋಡಂಗ ಆಗೈತಿ
ಹೇ ಹುಡುಗಿ ಎಲ್ಲಿ ಸಿಗತೀ
ನಿನ್ನ ಜೋಡಿ ಮಾತಾಡೋದು ಐತಿ
ಭಾಳ ದಿನ ಮಾಡೇವಿ ಪ್ರೀತಿ
ನಿನ್ನ ಬಿಟ್ಟಿರಕೆ ಆಗವಲ್ದೆ ಗೆಳತಿ
ನಿಜ ಹೇಳತೇನ ಗೇಳತಿ
ಕಿವಿಕೊಟ್ಟ ಕೇಳ ಗೆಳತಿ
ಪವಿತ್ರ ನಮ್ಮ ಪ್ರೀತಿ
ನನ್ನ ಮರೆತು ನೀ ಹ್ಯಾಂಗ ಇರತಿ
ಈ ಜೀವನ ಹೆಂಗ ಕಳೀತಿ
ಕಣ್ಣಿನೊಳಗ ಶುರುವಾದ ಪ್ರೀತಿ
ಮನಸಿನೋಲಗ ಮನೀ ಮಾಡೈತಿ
ಎರಡು ದೇಹ ಒಂದೇ ಜೀವ
ಪ್ರೇಮವಾಗಿ ಬೆರತೈತಿ
ನನ್ನ ಮರೆತು ನೀ ಹ್ಯಾಂಗ ಇರತಿ
ಈ ಜೀವನ ಹೆಂಗ್ ಕಳೀತಿ
ಈ ಹಾಡು ಕೇಳಿ ಸುದೀಪ್ ಅವರಿಗೂ ಕೂಡ ಖುಷಿ ಆಗಿತ್ತು. ಹನುಮಂತ ಅವರ ಹಾಡುಗಾರಿಕೆ ಬಿಗ್‌ಬಾಸ್ ಸ್ಪರ್ಧಿಗಳಿಗೂ ಇಷ್ಟವಾಗಿದೆ. ಅವರು ಹಾಡಿನಿಂದ ಮಾತ್ರವಲ್ಲದೆ ಅವರ ಸರಳತೆ, ಮುಗ್ದತೆಯಿಂದಲೂ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಹನುಮಂತನ ಮಾತು, ಅವರ ಹಾಸ್ಯ, ಗೆಳತನ ಎಲ್ಲವೂ ಬಿಗ್‌ಬಾಸ್ ನೋಡುವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದರಿಂದ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತರ ಪಟ್ಟಿಯಲ್ಲಿ ಹೆಸರು ಮಾಡುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಹನುಮಂತನ ಹಾಡುಗಳಲ್ಲಿ ಹನುಮಂತನಿಗೆ ಪ್ರೇಯಸಿ ಇರುವುದು ಖಚಿತವಾಗಿ ಗೊತ್ತಾಗುತ್ತದೆ. ಆದರೆ ಆ ಹುಡುಗಿ ಯಾರು ಎನ್ನುವುದನ್ನು ಮಾತ್ರ ಹನುಮಂತ ಅವರು ಬಿಟ್ಟುಕೊಟ್ಟಿಲ್ಲ. ಬಿಗ್‌ಬಾಸ್ ಸೀಸನ್ 11 ಮುಗಿಯುವ ವೇಳೆಗೆ ಆ ಹುಡುಗಿ ಯಾರು ಎನ್ನುವುದು ಗೊತ್ತಾಗುವ ಸಾಧ್ಯತೆ ಇದೆ. ಇದಕ್ಕಾಗಿ ಹನುಮಂತನ ಅಭಿಮಾನಿಗಳು ಕಾದು ಕುಳಿತಿರುವುದು ಮಾತ್ರ ಸುಳ್ಳಲ್ಲ. ಈ ದಿನಕ್ಕಾಗಿ ಬಿಗ್‌ಬಾಸ್ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.












Click it and Unblock the Notifications