ಶ್ರೀರಾಮನ ಬಂಟ ‘ಹನುಮಾನ್’ ಬೆಂಗಳೂರಿಗೆ ಎಂಟ್ರಿ: ಯಾಕೆ ಗೊತ್ತಾ?
ಭಾರತದಲ್ಲಿ ಈಗ ಒಂದೇ ವಿಚಾರದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಆಗ್ತಿದೆ. ಹೀಗಿದ್ದಾಗಲೇ ಕನ್ನಡಿಗರ ರಾಜಧಾನಿ, ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಶ್ರೀರಾಮನ ಬಂಟ 'ಹನುಮಾನ್' ಸ್ಪೆಷಲ್ ಎಂಟ್ರಿ ಕೊಟ್ಟಾಗಿದೆ. ಈ ಬೆಳವಣಿಗೆ ಹಿಂದಿನ ಅಸಲಿ ಕಾರಣ ಏನು? 'ಹನುಮಾನ್' ಬೆಂಗಳೂರಿಗೆ ಬಂದಿದ್ದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
ಹೌದು, ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ & ತೇಜ ಸಜ್ಜ ನಟನೆ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ 'ಹನು-ಮಾನ್' ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಈಗಾಗಲೇ, ಟ್ರೇಲರ್ ಮೂಲಕ ಈ ಸಿನಿಮಾ ಸಖತ್ ಸದ್ದು ಮಾಡಿದೆ. ಚಿತ್ರತಂಡ ಭರದಿಂದ ಪ್ರಚಾರ ನಡೆಸುತ್ತಿದ್ದು ಹನುಮಾನ್ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ಚಿತ್ರ ತಂಡ ಮಾಧ್ಯಮದವರ ಎದುರು, ಸಾಕಷ್ಟು ವಿಷಯ ಹಂಚಿಕೊಂಡಿದೆ. ಹಾಗಾದರೆ 'ಹನುಮಾನ್' ನಟರು ಹೇಳಿದ್ದೇನು? ಮುಂದೆ ಓದಿ

ಅಸಲಿಗೆ ಸಿನಿಮಾ ಕಥೆ ಏನು?
ಇನ್ನು ಈ ಸಿನಿಮಾದ ನಾಯಕ ನಟ ತೇಜ್ ಸಜ್ಜಾ ಮಾತನಾಡಿ, ಇದು ಹನುಮಾನ್ ದೇವರ ಬಗ್ಗೆ ಇರುವ ಸಿನಿಮಾವಲ್ಲ. ಇದು ಒಬ್ಬ ವ್ಯಕ್ತಿಗೆ ಪವರ್ ಬಂದ್ರೆ ಆತ ಸೂಪರ್ ಹೀರೋ ಆಗ್ತಾನೆ ಅನ್ನೋ ಕಥೆ ಆಧಾರಿತ ಚಿತ್ರ. ಕಾಮಿಡಿ, ಆಕ್ಷನ್ & ಲವ್ ಎಲ್ಲವೂ ಇದೆ. ಮೊದಲ ಶಾಟ್ ಅಲ್ಲಿ ನಿಮಗೆ ಗೂಸ್ ಬಂಪ್ಸ್ ಮೂಮೆಂಟ್ ಬರುತ್ತದೆ ಅಂತ ಹೇಳಿದರು. ಹೀಗೆ ಸಿನಿಮಾ ಬಗ್ಗೆ ದೊಡ್ಡ ಹಿಂಟ್ ಕೊಟ್ಟಿದ್ದಾರೆ.
ಕರ್ನಾಟಕದಲ್ಲೂ 'ಹನುಮಾನ್' ಅಬ್ಬರ
ನಾಯಕಿ ಅಮೃತಾ ಅಯ್ಯರ್, ಹನುಮಾನ್ ನಮ್ಮ ದೇವರು ಇದು ಫ್ಯಾಂಟಸಿ ಸಿನಿಮಾ. ಇದು ಹನುಮಾನ್ ದೇವರ ಬಗ್ಗೆ ಮೂಡಿಬಂದ ಸಿನಿಮಾ ಅಲ್ಲ. ಒಂದು ಹುಡುಗನಿಗೆ ಹನುಮಾನ್ ಪವರ್ ಬಂದಾಗ ಏನಾಗುತ್ತೆ? ಅನ್ನೋದೆ ಈ ಸಿನಿಮಾದ ಕಥೆ. ಈ ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ. ಈ ರೀತಿಯ ಸಿನಿಮಾ ಥಿಯೇಟರ್‌ನಲ್ಲಿ ನೋಡಬೇಕು ಪ್ರಶಾಂತ್ ಕ್ರಿಯೇಟಿವ್ ಆಗಿ ಡೈರೆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ಕೆಆರ್‌ಜಿ ರಿಲೀಸ್ ಮಾಡುತ್ತಿದ್ದಾರೆ ಎಂದು ಮಾಹಿತಿಯನ ನೀಡಿದರು.
ಹಾಗೇ ನಿರ್ಮಾಪಕಿ ಚೈತನ್ಯ ರೆಡ್ಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ಸಿನಿಮಾದಲ್ಲಿ ಹನುಮಾನ್ ಪವರ್ ಬಗ್ಗೆ ತೋರಿಸಲಾಗಿದೆ. ಬಿಗ್ ಬಜೆಟ್‌ನಲ್ಲಿ ಈ ಸಿನಿಮಾನ ಮಾಡಲಾಗಿದೆ. ಜನವರಿ 22 ರಾಮ ಮಂದಿರ ಉದ್ಘಾಟನೆ ಆಗುತ್ತದೆ ನಮ್ಮ ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗ್ತಿದೆ. ಇದು ಕಾಕತಾಳೀಯ ಅಷ್ಟೇ ಅಂತಾ ವಿವರಿಸಿದರು.

ಸಿನಿಮಾದ ನಟರು ಯಾರು ಯಾರು?
ಇನ್ನೂ ವರಲಕ್ಷ್ಮೀ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗವು ಚಿತ್ರದಲ್ಲಿದೆ. ಯುವ & ಪ್ರತಿಭಾವಂತ ಸಂಗೀತ ನಿರ್ದೇಶಕ ಗೌರಹರಿ ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್ ಜತೆಗೆ, ರಾಜು ತಲರಿ ಸಂಕಲನ ಈ ಸಿನಿಮಾಗೆ ಇದೆ.
ಕಥೆ ಹೇಗೆ ಹೆಣೆಯಲಾಗಿದೆ
ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ 'ಹನು-ಮಾನ್' ಕುರಿತು ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ತೇಜ ಸಜ್ಜ ನಟಿಸುತ್ತಿದ್ದು, ನಾಯಕಿ ಆಗಿ ಅಮೃತಾ ಐಯ್ಯರ್ ನಟಿಸುತ್ತಿದ್ದಾರೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಹನುಮಾನ್ ಬಗ್ಗೆ ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಜನವರಿ 12ಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಈ ಸಿನಿಮಾ ಹನುಮಾನ್ ರಿಲೀಸ್ ಆಗ್ತಿದೆ.
ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಸಂಕ್ರಾಂತಿಗೆ ವಿಶ್ವಾದ್ಯಂತ ಹನುಮಾನ್ ದರ್ಶನ ಆಗಲಿದೆ. ಕನ್ನಡದಲ್ಲಿ ಚಿತ್ರವನ್ನು ಕೆಆರ್‌ಜಿ ಬಿಡುಗಡೆ ಮಾಡುತ್ತಿದೆ.












Click it and Unblock the Notifications