Actor Ganesh: ಹುಟ್ಟು ಹಬ್ಬದಂದು ಮನೆಗೆ ಬರದಂತೆ ಅಭಿಮಾನಿಗಳಿಗೆ ಕೋರಿದ ಗಣೇಶ್
Golden Star Ganesh Birthday: ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್, ಸರಳ ವ್ಯಕ್ತಿತ್ವದ ನಟ ಗಣೇಶ್ ಅವರು 47ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ನಟನೆಯ 'ಕೃಷ್ಣಂ ಪ್ರಯಣ ಸಖಿ' ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಹಾಡುಗಳು ಇಂದಿಗೂ ಗುನುಗುವಂತೆ ಮಾಡಿತು. ಇದೀಗ ಅವರ ನಟನೆಯ ಮುಂದಿನ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಇದೇ ವೇಳೆ ಅವರ ಹುಟ್ಟು ಹಬ್ಬವು ಎದುರಾಗಿದೆ. ಹೀಗಾಗಿ ನಟ ಗಣೇಶ್ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು, 'ಪಿನಾಕ' ಹಾಗೂ 'Yours Sincerely Ram' ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯೂಸಿ ಇದ್ದಾರೆ. ಈ ಮಧ್ಯೆ ಜುಲೈ 2ರಂದು ಅವರು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರವಾಗಿ ಸೋಮವಾರ ಬೆಳಗ್ಗೆ ಅವರು ಸಾಮಾಜಿಕ ಜಾಲತಾಣಗಳ ಅಭಿಮಾನಿಗಳ ಕುರಿತು ವಿಶೇಷ ಮನವಿ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಲ್ಲಿ ನಟ ಗಣೇಶ್ ಮನವಿ ಏನು?
ಗಣೇಶ್ ಅವರ ಈ ಪೋಸ್ಟ್ ನೋಡಿ ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರವಾಗಿದೆ. ಕಾರಣ ಅಭಿಮಾನಿಗಳು ಪ್ರತಿ ವರ್ಷ ಗಣೇಶ್ ಅವರ ಜನ್ಮದಿನದಂದು ಹೂಗುಚ್ಚ, ಗಿಫ್ಟ್, ಹಾರ, ತುರಾಯಿ ಹಿಡಿದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಗೆ ಬಳಿ ಬಂದು ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಪಟಾಕಿ ಸಿಡಿಸುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ಅವಕಾಶ ಸಿಗುವುದಿಲ್ಲ ಎಂಬುದನ್ನು ನೆನಸಿಕೊಂಡು ಬೇಸರಗೊಂಡಿದ್ದಾರೆ.
ಇದೇ ವಿಚಾರವಾಗಿ ಮನವಿ ಮಾಡಿರುವ ನಟ ಗಣೇಶ್ ಅವರು, ''ಆತ್ಮೀಯ ಅಭಿಮಾನಿ ಸ್ನೇಹಿತರೆ, ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗು ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ಣುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು 'ಪಿನಾಕ' ಹಾಗು Your sincerely ರಾಮ್' ಚಿತ್ರಗಳ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿರುವ ಕಾರಣ ಜುಲೈ 2 ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ''.
''ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿದಂಲೇ ನನಗೆ ಆಶಿಸಿ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ-ನಿಮ್ಮವ ಗಣೇಶ'' ಎಂದು ಬರೆದುಕೊಂಡು ಮನವಿ ಮಾಡಿದ್ದಾರೆ.
ಈ ಮೂಲಕ ತಾವು ಸಿನಿಮಾ ಶೂಟಿಂಗ್‌ನಲ್ಲಿದ್ದು, ಅಭಿಮಾನಿಗಳನ್ನು ಭೇಟಿ ಮಾಡುವುದು ಆಗುವುದಿಲ್ಲ. ಹೀಗಾಗಿ ದಯಮಾಡಿ ಹೂವು, ಹಾರ, ಕೇಕ್‌ಗೆ ಖರ್ಚು ಮಾಡುವ ಹಣದಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮರೆಯಬೇಕು. ಈ ಮೂಲಕ ಜನ್ಮದಿನವನ್ನು ಸರಳವಾಗಿ ಆಚರಿಸುವಂತೆ ಅವರು ತಿಳಿಸಿದ್ದಾರೆ.
❤️❤️❤️🤗🤗🤗🙏🙏🙏 pic.twitter.com/rt1WvtvKJU
— Ganesh (@Official_Ganesh) June 30, 2025
ಗಣೇಶರ ಹೊಸ ಸಿನಿಮಾಗಳು ಯಾವುವು?
ನಟ ಗಣೇಶ್ ಅವರು ಧನಂಜಯ್ ಅವರು ನಿರ್ದೇಶಿಸುತ್ತಿರುವ 'ಪಿನಾಕ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಅಭಿಮಾನಿಗಳು ಈ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದರೊಂದಿಗೆ ವಿಖ್ಯಾತ ಎ.ಆರ್. ಅವರು ನಿರ್ದೇಶಿಸುತ್ತಿರುವ 'Yours Sincerely Ram' ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ನಟ ಗಣೇಶ್ ಅವರು ನಟಿಸುತ್ತಿದ್ದಾರೆ. ಇದರಲ್ಲಿ ನಟ ರಮೇಶ್ ಅರವಿಂದ್ ಅವರು ಸಹ ಜೊತೆಯಾಗಿದ್ದಾರೆ. ಗಣೇಶ್ ಹುಟ್ಟುಹಬ್ಬದ ದಿನ ಮತ್ತಷ್ಟು ಹೊಸ ಪ್ರಾಜೆಕ್ಟ್‌ಗಳು ಘೋಷಣೆ ಆಗುವ ನಿರೀಕ್ಷೆ ಇದೆ.












Click it and Unblock the Notifications