Gold Suresh: ಗೋಲ್ಡ್‌ ಸುರೇಶ್ ಬಿಗ್‌ ಬಾಸ್‌ ವೇದಿಕೆಗೆ ಮತ್ತೆ ಎಂಟ್ರಿ

Gold Suresh: ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಹಾಕುತ್ತಲೇ ಇದೆ. ಇನ್ನೂ ಇತ್ತೀಚೆಗಷ್ಟೇ ವೈಯಕ್ತಿಕ ಕಾರಣಗಳ ಹಿನ್ನೆಲೆ ಗೋಲ್ಡ್‌ ಸುರೇಶ್‌ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಇದೀಗ ಭಾನುವಾರದ ಅಂದರೆ ಇಂದಿನ ಎಫಿಸೋಡ್‌ ಕಿಚ್ಚನ ಪಂಚಾಯ್ತಿಯ ಪ್ರೋಮೋದಲ್ಲಿ ಬಿಗ್‌ ಬಾಸ್‌ ವೇದಿಕೆ ಮೇಲೆ ಸುರೇಶ್‌ ಎಂಟ್ರಿ ಕೊಟ್ಟಿದ್ದು, ಕುತೂಹನ ಸೃಷ್ಟಿಸಿದೆ.

ಕೆಲವು ದಿನಗಳ ಹಿಂದಯಷ್ಟೇ ಗೋಲ್ಡ್ ಸುರೇಶ್‌ ಅವರನ್ನು ವೈಯಕ್ತಿಕ ಕಾರಣಗಳ ಹಿನ್ನೆಲೆ ಬಿಗ್ ಬಾಸ್‌ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ನಿಮಗೆ ಬಿಗ್ ಬಾಸ್ ಗಿಂತಲೂ ಮನೆಯವರಿಗೆ ನಿಮ್ಮ ಅಗತ್ಯ ತುಂಬಾ ಇದೆ ಎಂದು ಹೇಳಿ ಕಿಚ್ಚ ಸುದೀಪ್‌ ಅವರು ಗೋಲ್ಡ್‌ ಸುತರೇಶ್‌ ಅವರನ್ನು ಹೊರಡೆ ಕಳುಹಿಸಿದ್ದರು. ಆಗ ಅವರನ್ನು ಶೋನಿಂದ ಹೊರಗಡೆ ಕಳುಹಿಸದೇ ಬೇರೆ ಆಯ್ಕೆ ಇರಲಿಲ್ಲ. ಇದೀಗ ಸುರೇಶ್‌ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರಂತೆ. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದರು.

Gold Suresh Re-entry to Bigg Boss Stage Know details

ಹಾಗಾದರೆ ಗೋಲ್ಡ್ ಸುರೇಶ್‌ ಅವರು ಬಿಗ್ ಬಾಸ್‌ ಮನೆಗೆ ಮತ್ತೆ ಎಂಟ್ರಿ ಕೊಡುಲಿದ್ದಾರೆಯಾ ಎನ್ನುವ ಪ್ರಶ್ನೆ ಪ್ರೇಕ್ಷರಲ್ಲಿತ್ತು. ಇದೀಗ ಅದಕ್ಕೆ ಪೂರಕವೆಂಬಂತೆ ಬೆಳವಣಿಗೆಯೊಂದು ನಡೆದಿದೆ. ಭಾನುವಾರದ ಅಂದರೆ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಗೋಲ್ಡ್ ಸುರೇಶ್ ಅವರು ಕಿಚ್ಚ ಸುದೀಪ್‌ ಜೋತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಪ್ರೋಮೋದಲ್ಲಿ ಬಿಗ್‌ ಮನೆ ಸ್ಪರ್ಧಿಗಳಿಗೆ ನಿಮ್ಮ ಜೊತೆಯಲ್ಲಿ ಯಾರಿದ್ದಾರೆ ಅವರಿಗೆ ತಟ್ಟಿ ಬುದ್ಧಿ ಹೇಳಬೇಕೆನ್ನುವ ಅವಕಾಶ ನೀಡಲಾಗುತ್ತದೆ. ಈ ವೇಳೆ ಮೊದಲು ತ್ರಿವಿಕ್ರಮ್‌ ರಜತ್‌ ಹಾಗೂ ಮಂಜಣ್ಣಗೆ, ಗೌತಮಿ ಮಂಜಣ್ಣಗೆ, ಧನ್‌ರಾಜ್‌ ಹನುಮಂತುಗೆ, ರಜತ್‌ ಮಾತಾಡಿದ್ರೆ ಫೌಲ್‌ ಕೊಡ್ತೀತಾ ಕಾರಣ ಕೊಡುವ ಮೂಲಕ ಚೈತ್ರಾ ಕುಂದಾಪುರಗೆ ಕೈಯಿಂದ ಹೊಡೆದರೆ, ಹನುಮಂತು ಜ್ಞಾನೋದಯ ಹೇಳುತ್ತೇನೆ ಎಂದು ಇಡೀ ಮನೆ ಸುದ್ದಿನೇ ಹೇಳ್ತಾನೆ ಎಂದು ಕಾರಣ ಕೊಟ್ಟು ಧನ್‌ರಾಜ್‌ಗೆ ಹೊಡೆಯುತ್ತಾರೆ. ಇದೇ ವೇಳೆ ಮನೆಯ ಸ್ಪರ್ಧಿಗಳೆಲ್ಲ ನಗುವಿನಲ್ಲಿ ಮುಳುಗಿ ಹೋಗಿರುತ್ತಾರೆ.

ಇದೇ ವೇಳೆ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ವೇದಿಕೆಗೆ ಎಂಟ್ರಿ ಕೊಟ್ಟು ಕಿಚ್ಚ ಸುದೀಪ್‌ ಅವರನ್ನು ತಬ್ಬಿಕೊಳ್ಳುತ್ತಾರೆ. ಬಳಿಕ ಸುದೀಪ್‌ ಮನೆಯೊಳಗೆ ಅಲ್ಲೊಂದು ಜಾಗ ಖಾಲಿ ಹೊಡಿತಿದೆ ನೀವಿಲ್ಲದೆ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ನನಗೊಂದು ಚಾನ್ಸ್‌ ಕೊಟ್ಟರೆ, ಒಳಗಡೆ ಖುಷಿಯಾಗಿ ಹೋಗುತ್ರೇನೆ ಸರ್ ಎಂದು ಹೇಳುತ್ತಾರೆ. ಹಾಗಾದರೆ ಗೋಲ್ಡ್ ಸುರೇಶ್‌ ಅವರು ಮತ್ತೆ ಬಿಗ್‌ ಬಾಸ್‌ ಮೆನೆಗೆ ಎಂಟ್ರಿ ಕೊಡಲಿದ್ದಾರೆಯೋ ಅಥವಾ ವಾಪಸಾಗಲಿದ್ದರೆಯೋ ಎಂದು ಭಾನುವಾರದ ಅಂದರೆ ಇಂದು (ಡಿಸೆಂಬರ್ 22) ರಾತ್ರಿ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+