Bigg Boss: ರಜತ್ - ಸುರೇಶ್ ಗಲಾಟೆ; ಮನೆಯಿಂದ ಆಚೆ ಕಳಿಸಿ ಎಂದು ಕೂಗಾಡಿದ ಗೋಲ್ಡ್ ಸುರೇಶ್

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ದಿನಕ್ಕೊಂದು ಗಲಾಟೆ, ಜಗಳ ನಡೆಯುತ್ತಲೇ ಇರುತ್ತದೆ. ಅದರಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ಮೊದಲ ದಿನವೇ ತಮ್ಮ ನಿಜವಾದ ಆಟ ಶುರು ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ ಮತ್ತು ಉಗ್ರಂ ಮಂಜು ನಡುವೆ ಕಿರಿಕ್ ಆಗಿತ್ತು, ಶೋಭಾ ಅಬ್ಬರಕ್ಕೆ ಮಂಜು ಸೈಲೆಂಟ್ ಆಗಿದ್ದರು. ಹನುಮಂತು ಕೂಡ ಶೋಭಾ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದರು, 'ಏನ್ ಮಾತಾಡ್ತಳೋ ಯಪ್ಪಾ' ಎಂದು ಧನರಾಜ್ ಬಳಿ ಹೇಳಿಕೊಂಡಿದ್ದರು.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಕಿಶನ್ ಕೂಡ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳನ್ನು ಅರ್ಧ ಜನ ತಿಕ್ಲು ಇನ್ನರ್ಧ ಜನ ಪುಕ್ಲು ಎಂದು ಕಾಲೆಳೆದಿದ್ದರು. ಮೊದಲ ದಿನವೇ ತಾನೊಬ್ಬ ಕಠಿಣ ಸ್ಪರ್ಧಿ ಎನ್ನುವ ಸೂಚನೆಯನ್ನು ಕೊಟ್ಟಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಆಟವಾಡುವ ವೇಳೆ ರಜತ್ ಕಿಶನ್ ಮತ್ತು ಗೋಲ್ಡ್ ಸುರೇಶ್ ನಡುವೆ ಜಗಳವಾಗಿದ್ದು, ಸಂಘರ್ಷ ತಾರಕಕ್ಕೇರಿತ್ತು.

Gold suresh and rajat had an clash in bigg boss kannada

ಮನೆಯಿಂದ ಹೊರಕಳಿಸಿ ಎಂದ ಸುರೇಶ್

ಈ ವಾರ ಬಿಗ್‌ ಬಾಸ್‌ ಒಂದು ಟಾಕ್ಸ್ ನೀಡಿದ್ದು, ಕೊಳವೆ ಮೂಲಕ ಬರುವ ಚೆಂಡನ್ನು ತೆಗೆದುಕೊಂಡು ತಂಡಕ್ಕೆ ಮೀಸಲಾದ ಚೌಕಟ್ಟಿನಲ್ಲಿ ಇಡಬೇಕಾಗಿತ್ತು, ಈ ಆಟ ಆಡುವ ವೇಳೆ ಸುರೇಶ್ ಮತ್ತು ರಜತ್ ನಡುವೆ ಜಗಳ ಶುರುವಾಗಿದ್ದು ತಾರಕಕ್ಕೇರಿತು. ಇಬ್ಬರು ಅಶ್ಲೀಲ ಪದಗಳನ್ನು ಬಳಸಿ ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ವೇಳೆ ಗೋಲ್ಡ್ ಸುರೇಶ್ ಕೋಪ ನೆತ್ತಿಗೇರಿದ್ದು, ಬಿಗ್ ಬಾಸ್ ಮನೆಯ ಕದ ತಟ್ಟಿ ನಾನು ಇನ್ನು ಆಟ ಆಡಲ್ಲ ಮನೆಯಿಂದ ಹೊರಗೆ ಕಳಿಸಿ ಎಂದು ಕೂಗಾಡಿದ್ದಾರೆ.

ಇಂದಿನ ಎಪಿಸೋಡ್‌ನ ಪ್ರೋಮೊ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ಒಂದು ವರ್ಗದ ವೀಕ್ಷಕರಿಗೆ ಇಷ್ಟವಾಗಿದ್ದರೆ ಮತ್ತೊಂದ ವರ್ಗದ ನೋಡುಗರು ಇವರಿಬ್ಬರು ದೊಡ್ಡ ಕಿರಿಕಿರಿ ಎಂದು ಸಿಟ್ಟು ಮಾಡಿಕೊಂಡಿದ್ದಾರೆ.

ಈ ವಾರ 7 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಗೌತಮಿ ಜಾಧವ್, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ಧರ್ಮ ಕೀರ್ತಿರಾಜ್‌ ಚೈತ್ರಾ ಕುಂದಾಪುರ ಹಾಗೂ ಹನುಮಂತ ನಾಮಿನೇಟ್ ಆಗಿದ್ದು ಈ ವಾರ ಯಾರು ಹೊರಗೆ ಹೋಗ್ತಾರೆ ಎನ್ನುವ ಕುತೂಹಲವಿದೆ. ಶಿಶಿರ್, ಐಶ್ವರ್ಯಾ, ಗೋಲ್ಡ್ ಸುರೇಶ್‌, ಧನರಾಜ್ ಆಚಾರ್ ಮಾತ್ರ ಈ ಬಾರಿ ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+