'ಸತ್ತರೂ..ಗಂಡನನ್ನು ಬಿಟ್ಟರೂ ಪರವಾಗಿಲ್ಲ..ನಾನು ರೀಲ್ಸ್‌ ಬಿಡಲ್ಲ'

ನನ್ನ ಗಂಡ ಬೈದರೂ, ಹೊಡೆದರೂ, ನಾನು ರೀಲ್ಸ್‌ ಬಿಡಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದ ಹಾಯ್ ಫ್ರೆಂಡ್ಸ್‌ ಖ್ಯಾತಿಯ ರೇಷ್ಮಾ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಸೀಸನ್ 3 ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದರು. ಸದ್ಯ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ರೇಷ್ಮಾ ರೀಲ್ಸ್‌ನಿಂದ ಹೇಗೆ ಫೇಮಸ್‌ ಆದರು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ರೇಡಿಯೋ ಸಿಟಿ ಸಂದರ್ಶನಲ್ಲಿ ಮಾತನಾಡಿದ ರೇಷ್ಮಾ 'ನಾನು ಒಂದು ರೀಲ್ಸ್‌ ಮಾಡಿದ್ದೆ ಅದಕ್ಕೆ ಬಂದ ಕಮೆಂಟ್ಸ್‌ಗಳನ್ನು ಮಗಳು ಓದಿ ಹೇಳಿದಳು. ಆಗ ಕೆಟ್ಟ ಕಮೆಂಟ್‌ಗಳನ್ನು ಹಾಕಿದರೂ ಪರವಾಗಿಲ್ಲ ನನಗೆ ಲೈಕ್ಸ್‌ ಬರುತ್ತಿದೆಯಲ್ಲಾ ಅಷ್ಟೇ ಸಾಕು ಅಂತಾ ಖುಷಿ ಪಟ್ಟೆ. ಹೀಗೆ ನನ್ನ ಮನಸಿಗೆ ಬಂದ ರೀಲ್ಸ್‌ಗಳನ್ನು ಹಾಕಿಕೊಂಡು ಹೋಗುತ್ತಿದೆ. ಆಗ ಯಾರೋ ನನ್ನ ಗಂಡನ ಕಿವಿ ಚುಚ್ಚಿದರು, ಸೀರೆ ಹಾಕಿಕೊಂಡು ರಸ್ತೆಗಳಲ್ಲೆಲ್ಲಾ ಕುಣಿಯುತ್ತಾರೆ. ರೀಲ್ಸ್‌ ಮಾಡುತ್ತಾರೆ ಎಂದು ಹೇಳಿಕೊಟ್ಟರು'.

Gicchi GiliGili TV Show Fame Reshma Describes How She Became Known To People As A Troll

'ಒಂದು ದಿನ ನನ್ನ ಗಂಡನ ಫ್ರೆಂಡ್ಸ್‌ ಅತ್ತಿಗೆ ಯಾಕೆ ಹೀಗೆಲ್ಲಾ ಕುಣಿಯುತ್ತಾರೆ. ಎಲ್ಲರೂ ಬೈಯುತ್ತಿದ್ದಾರೆ ಅವರಿಗೆ ಅಂತಾ ಹೇಳಿಕೊಟ್ಟರು. ಅದನ್ನು ಕೇಳಿಸಿಕೊಂಡ ನಮ್ಮ ಯಜಮಾನರು ಕುಡಿದು ನನಗೆ ಕ್ಲಾಸ್‌ ತೆಗೆದುಕೊಂಡರು. ನೀನು ರೀಲ್ಸ್‌ ಮಾಡುವ ಹಾಗಿಲ್ಲ. ನಮಗೆ ರೀಲ್ಸ್‌ ಮಾಡುವ ಅವಶ್ಯಕತೆ ಇಲ್ಲ. ಅದರಲ್ಲಿ ಏನು ಬರುತ್ತದೆ. ಬೇಡ ನೀನು ರೀಲ್ಸ್‌ ಮಾಡಬೇಡ. ಜನ ಎಲ್ಲಾ ಬೈಯುತ್ತಿದ್ದಾರೆ ಅಂತಾ ಚೆನ್ನಾಗಿ ನನಗೆ ಬೈದು ಹೊಡೆದು ಹೋಗಿಬಿಟ್ಟರು'.

'ನಾನು ಅದನ್ನೇ ರೀಲ್ಸ್‌ ಮಾಡಿದೆ. ಅತ್ತುಕೊಂಡು ಫ್ರೆಂಡ್ಸ್‌ ನಮ್ಮ ಯಜಮಾನರು ಹೊಡೆದರು ಅಂತಾ ವಿಡಿಯೋ ಮಾಡಿದೆ. ಅದೇ ಫಸ್ಟ್‌ ವಿಡಿಯೋ ನನ್ನದು ಟ್ರೋಲ್‌ ಆಗಿದ್ದು, ನಮ್ಮ ಯಜಮಾನರು ಹೊಡೆದರು, ರೀಲ್ಸ್‌ ಮಾಡಬೇಡ ಎನ್ನುತ್ತಿದ್ದಾರೆ. ಯಾರೋ ಹೇಳಿಕೊಟ್ಟಿದ್ದಾರೆ. ನಾನಿನ್ನು ರೀಲ್ಸ್‌ ಮಾಡಲ್ಲ. ಅಂತಾ ಹೇಳಿ ಕಟ್‌ ಮಾಡಿ ಒಂದು ರೀಲ್ಸ್ ಹಾಕಿದೆ'.

Gicchi GiliGili TV Show Fame Reshma Describes How She Became Known To People As A Troll

'ಆಮೇಲೆ ಮತ್ತೆ ಹತ್ತು ನಿಮಿಷನೂ ಆಗಿಲ್ಲ ಮತ್ತೆ ರೀಲ್ಸ್‌ ಮಾಡಿ ನಾನು ಸತ್ತು ಹೋದರೂ ಪರವಾಗಿಲ್ಲ, ನಾನು ನೇಣು ಹಾಕಿಕೊಂಡು ಸತ್ತು ಹೋದರೂ ಪರವಾಗಿಲ್ಲ. ನನ್ನ ಹೊಡೆದರೂ ಪರವಾಗಿಲ್ಲ. ನಾನು ರೀಲ್ಸ್‌ ಮಾತ್ರ ಬಿಡಲ್ಲ, ಗಂಡನನ್ನು ಬಿಟ್ಟರೂ ಪರವಾಗಿಲ್ಲ. ನಾನು ರೀಲ್ಸ್‌ ಬಿಡಲ್ಲ ಅಂತಾ ಮತ್ತೆ ಹಾಕಿದೆ. ಅದು ತುಂಬಾ ಜಾಸ್ತಿ ಟ್ರೋಲ್‌ ಆಯ್ತು. ಅದಾದ ಮೇಲೆ ಕೆಲವರು ಬೈಯುತ್ತಿದ್ದರು. ಕೆಲವರು ಇಷ್ಟಪಡುತ್ತಿದ್ದರು. ಸ್ವಲ್ಪ ಜನ ಹಂಗೆ ಸ್ವಲ್ಪ ಜನ ಹೀಗೆ ಹೇಳುತ್ತಿದ್ದರು' ಎಂದು ರೇಷ್ಮಾ ತಾವು ಮೊದಲು ಬಾರಿಗೆ ಟ್ರೋಲ್‌ ಆಗಿ ಜನರಿಗೆ ಪರಿಚಯವಾದ ಪರಿಯನ್ನು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+