Gauthami Jadav: ಆಪ್ತರ ಜೊತೆ ಗೌತಮಿ ಜಾಧವ್‌ ಹೋಳಿ ಹಬ್ಬ ಆಚರಣೆ: ಮಿಸ್‌ ಆಗಿದ್ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ನಟಿ ಗೌತಮಿ ಜಾಧವ್‌, ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ಸತ್ಯ ಎಂದೇ ಗುರುತಿಸಿಕೊಳ್ಳುತ್ತಿದ್ದ ಅವರು ಬಿಗ್‌ ಬಾಸ್‌ ಮೂಲಕ ತಮ್ಮ ನಿಜವಾದ ವ್ಯಕ್ತಿತ್ವದಿಂದ ಗೌತಮಿ ಜಾಧವ್ ಆಗಿ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು.

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಟ್ರಾಂಗ್‌ ಮಹಿಳಾ ಸ್ಪರ್ಧಿಯಾಗಿದ್ದ ಗೌತಮಿ ಜಾಧವ್ ಕೂದಲೆಳೆ ಅಂತರದಲ್ಲಿ ಫಿನಾಲೆ ಪ್ರವೇಶವನ್ನು ಕಳೆದುಕೊಂಡರು. ಬಿಗ್‌ ಬಾಸ್‌ ಟ್ರೋಫಿ ಗೆಲ್ಲದೇ ಇದ್ದರೂ ಗೌತಮಿ ಜಾಧವ್ ತಮ್ಮ ಪಾಸಿಟಿವಿಯಿಂದ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿರುವುದಂತೂ ಸತ್ಯ.

Gauthami Jadav Celebrates Holi Festival with Family and Friends

ಬಿಗ್ ಬಾಸ್ ಸೀಸನ್ 11 ಮುಕ್ತಾಯಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿ ಆಗಿಲ್ಲ. ಒಂದಲ್ಲಾ ಒಂದು ವಿಚಾರಕ್ಕೆ ಬಿಗ್ ಬಾಸ್‌ ಸ್ಪರ್ಧಿಗಳು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಸದ್ಯ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಸಮಯ ಕಳೆಯುತ್ತಿದ್ದಾರೆ. ಗೌತಮಿ ಜಾಧವ್ ಕೂಡ ತಮ್ಮ ಆಪ್ತರೊಂದಿಗೆ ಸಮಯ ಕಳೆಯುತ್ತಿದ್ದು, ಈ ಬಾರಿಯ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

Gauthami Jadav Celebrates Holi Festival with Family and Friends

ಗೌತಮಿ ಜಾಧವ್, ಪತಿ ಅಭಿಷೇಕ್ ಹಾಗೂ ಸ್ನೇಹಿತರ ಜೊತೆಗೆ ಈ ಬಾರಿಯ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಬಣ್ಣದಲ್ಲಿ ಮಿಂದೆದ್ದಿರುವ ಗೌತಮಿ ಜಾಧವ್ ಕಲರ್‌ಫುಲ್‌ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ನಟಿ ಗೌತಮಿ ಜಾಧವ್ ಹೋಳಿ ಹಬ್ಬದ ಆಚರಣೆ ಪೋಸ್ಟ್‌ಗೆ ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡಿದ್ದು, ಈ ಪೈಕಿ ಅಭಿಮಾನಿಯೊಬ್ಬರು ಗೌತವಿು ನಿಮ್ಮನ್ನು ಒಮ್ಮೆ ನೋಡು ಬೇಕು ಎನ್ನುವುದು ನನ್ನ ಒಂದು ಕನಸು ಎಂದು ಕಮೆಂಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+