ಚಿಕ್ಕಣ್ಣ ‘ಕೆಜಿಎಫ್-3’ ಅಖಾಡದಲ್ಲಿ ಯಶ್ ಜೊತೆ ಅಬ್ಬರಿಸೋದು ಗ್ಯಾರಂಟಿ?

ಚಿಕ್ಕಣ್ಣ ಯಾವುದೇ ಪಾತ್ರಕ್ಕೂ ಹೊಂದಿಕೊಳ್ಳುವ ನಟ. ಹೀಗಾಗಿಯೇ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ. ಇದೇ ಮೊದಲ ಬಾರಿಗೆ 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿದ್ದಾಗಲೇ ಚಿಕ್ಕಣ್ಣ ಅವರು ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್-3' ಸಿನಿಮಾದಲ್ಲಿ ನಟನೆ ಮಾಡುತ್ತಾರಾ? ಅಂತಾ ಅಭಿಮಾನಿಗಳು ಈಗ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು 'ಉಪಾಧ್ಯಕ್ಷ' ಸಿನಿಮಾದ ಅದೊಂದು ಸೀನ್.

ಹೌದು 'ಉಪಾಧ್ಯಕ್ಷ' ಸಿನಿಮಾ ಸಕ್ಸಸ್ ನೋಡಿ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾ ನೋಡಿದ ಅಭಿಮಾನಿಗಳು ಈಗ 'ಕೆಜಿಎಫ್-3' ಬಗ್ಗೆ ಯಾಕೆ ಚರ್ಚೆ ಮಾಡ್ತಿದ್ದಾರೆ ಗೊತ್ತಾ? ಈ ಚರ್ಚೆಯ ಹಿಂದೆ ಒಂದು ಬಲವಾದ ಕಾರಣ ಇದೆ, ಹಾಗೇ ಈ ಮೂಲಕ ಚಿಕ್ಕಣ್ಣ ಅವರು 'ಕೆಜಿಎಫ್-3' ಸಿನಿಮಾ ಸೀರಿಸ್‌ನಲ್ಲಿ ನಟನೆ ಮಾಡಲಿದ್ದಾರೆಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ರೀತಿ ಚಿಕ್ಕಣ್ಣ & ಯಶ್ ಅವರ ಕಾಂಬಿನೇಷನ್‌ನಲ್ಲಿ 'ಕೆಜಿಎಫ್-3' ಸಿನಿಮಾ ಬಗ್ಗೆ, ಜನರು ಚರ್ಚೆ ಮಾಡ್ತಾ ಇರೋದು ಯಾಕೆ? ಮುಂದೆ ಓದಿ.

Fans Are Expecting That Chikkanna To Act In Yash Starrer KGF 3 Movie

ಕನ್ನಡಿಗರ ಹೃದಯ ಗೆದ್ದ ಚಿಕ್ಕಣ್ಣ!

ಅಷ್ಟಕ್ಕೂ ಚಿಕ್ಕಣ್ಣ ಕಾಮಿಡಿ ಮಾಡ್ತಾ.. ಮಾಡ್ತಾ.. ಕೋಟಿ ಕೋಟಿ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಅದರಲ್ಲೂ ಈ ನಟನ ಎಂಟ್ರಿ ಇಲ್ಲದೆ ಬಹುತೇಕ ಸಿನಿಮಾಗಳು ಗೆಲ್ಲೋದಕ್ಕೆ ಸಾಧ್ಯ ಆಗಿಲ್ಲ ಎನ್ನಬಹುದು. ಕನ್ನಡ ಸಿನಿಮಾ ರಂಗಕ್ಕೆ ಚಿಕ್ಕಣ್ಣ ಅವರಂತಹ ಒಬ್ಬ ನಟರು ಬೇಕಿದ್ರು. ಆ ಸ್ಥಾನ ತುಂಬಿರುವ ಚಿಕ್ಕಣ್ಣ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಆದ್ರೆ ಈ ಸಮಯಕ್ಕೇ 'ಕೆಜಿಎಫ್' ರಾಕಿಂಗ್ ಸ್ಟಾರ್ ಯಶ್ & ಚಿಕ್ಕಣ್ಣ 'ಕೆಜಿಎಫ್-3' ಸಿನಿಮಾ ಮಾಡ್ತಾರಾ? ಎಂಬ ಪ್ರಶ್ನೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

ಚಿಕ್ಕಣ್ಣ + ಯಶ್ = 'ಕೆಜಿಎಫ್-3'?

ಅಂದಹಾಗೆ ಕೆಜಿಎಫ್ ಚಾಪ್ಟರ್-1 ಸಿನಿಮಾದ ಹೈಲೈಟ್ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರ ಸುತ್ತಿಗೆ. ಹೀಗೆ ಅವರ ಕೈಯಲ್ಲಿ ಸುತ್ತಿಗೆ ಹಿಡಿದು ವಿಲನ್‌ಗಳನ್ನೆಲ್ಲ ಹೊಡೆದು ಸಾವಿರಾರು ಜನರ ಜೀವ ಉಳಿಸುತ್ತಾರೆ. ಕಾರ್ಮಿಕರ ಜೀತದಿಂದ ಮುಕ್ತಗೊಳಿಸುತ್ತಾರೆ ಹೀಗೆ ಕೆಜಿಎಫ್ ಚಾಪ್ಟರ್-1 ಜಗತ್ತಿನಾದ್ಯಂತ ಅಬ್ಬರಿಸಿತ್ತು. ಹಾಗೇ ಕೆಜಿಎಫ್ ಚಾಪ್ಟರ್-2 ಸಾವಿರ ಕೋಟಿ ಕಲೆಕ್ಷನ್ ಮಾಡಿ, ಭಾರತೀಯ ಸಿನಿಮಾ ರಂಗವನ್ನೇ ಶೇಕ್ ಮಾಡಿತ್ತು. ಹೀಗೆ ಇಡೀ ಜಗತ್ತನ್ನೇ ಸೆಳೆದಿದ್ದ ಕೆಜಿಎಫ್ ಸಿನಿಮಾದ ಪಾತ್ರವನ್ನ ಇದೀಗ ಚಿಕ್ಕಣ್ಣ, ಉಪಾಧ್ಯಕ್ಷ ಸಿನಿಮಾದಲ್ಲಿ ಮಾಡಿದ್ದಾರೆ. ಹೀಗಾಗಿಯೇ ಚಿಕ್ಕಣ್ಣ 'ಕೆಜಿಎಫ್-3' ಸಿನಿಮಾ ಮಾಡ್ತಾರಾ? ಎಂಬ ಪ್ರಶ್ನೆ ಮೂಡಿದೆ.

Fans Are Expecting That Chikkanna To Act In Yash Starrer KGF 3 Movie

ಯಶ್ ರೀತಿಯೇ ಚಿಕ್ಕಣ್ಣ ಎಂಟ್ರಿ!

ಉಪಾಧ್ಯಕ್ಷ ಸಿನಿಮಾದಲ್ಲಿ ಯಶ್ ಅವರ ರೀತಿ ನಟ ಚಿಕ್ಕಣ್ಣ ಕೈಯಲ್ಲಿ ಸುತ್ತಿಗೆ ಹಿಡಿದು, ಹಣೆಗೆ ಬಟ್ಟೆಯ ಸುತ್ತಿಕೊಂಡು ವಿಲನ್‌ಗಳನ್ನೆಲ್ಲಾ ಬಾರಿಸಲು ಬರ್ತಾರೆ. ಇನ್ನ ಹೀಗೆ ಚಿಕ್ಕಣ್ಣ ಅವರು, ಯಶ್ ರೀತಿ ಕೆಜಿಎಫ್ ಕಾಸ್ಟ್ಯೂಮ್ ಹಾಕಿ ಉಪಾಧ್ಯಕ್ಷ ಸಿನಿಮಾದಲ್ಲಿ ಮಿಂಚಿದ್ದಾರೆ. ಆದರೆ ಈ ಸೀನ್ ಇರುವುದು, ಉಪಾಧ್ಯಕ್ಷ ಸಿನಿಮಾದ ಹೀರೋಯಿನ್ ಮಲೈಕಾ ಅವರ ಕನಸಿನಲ್ಲಿ. ಈ ರೀತಿ ಚಿತ್ರದ ನಾಯಕಿ ಕಣ್ಣಿನಲ್ಲಿ ಚಿಕ್ಕಣ್ಣ ಅವರು ಕೆಜಿಎಫ್ ಹೀರೋ ರೀತಿ ಕಾಣಿಸುತ್ತಾರೆ, ಇಷ್ಟನ್ನ ಬಿಟ್ಟರೆ ನಿಜವಾಗಿಯೂ ಚಿಕ್ಕಣ್ಣ 'ಕೆಜಿಎಫ್-3' ಸಿನಿಮಾದಲ್ಲಿ ನಟನೆ ಮಾಡ್ತಿಲ್ಲ. ಆದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ!

2014ರಲ್ಲಿ ಚಿಕ್ಕಣ್ಣ & ಶರಣ್ ಕಾಂಬಿನೇಷನ್ ಸಕ್ಸಸ್ ಕೊಟ್ಟಿತ್ತು 'ಅಧ್ಯಕ್ಷ' ಸಿನಿಮಾದ ಮೂಲಕ ಸಕ್ಸಸ್ ಪಡೆದಿದ್ದರು ಚಿಕ್ಕಣ್ಣ. ಅಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲೂ ಭರ್ಜರಿ ಸಕ್ಸಸ್ ಪಡೆದಿತ್ತು. ಹೀಗೆ 10 ವರ್ಷ ನಂತರ 'ಅಧ್ಯಕ್ಷ' ಸಿನಿಮಾ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿದೆ. ಈ ಬಾರಿ ಚಿಕ್ಕಣ್ಣ ಅವರನ್ನೇ, ಹೀರೋ ಮಾಡಲಾಗಿದೆ. ಇದೇ ವೇಳೆ ಚಿಕ್ಕಣ್ಣ ಅವರು 'ಕೆಜಿಎಫ್-3' ಸಿನಿಮಾದಲ್ಲಿ ನಟನೆ ಮಾಡ್ತಾರಾ? ಅನ್ನೋ ಪ್ರಶ್ನೆ ಕೂಡ ಈಗ ಎಲ್ಲೆಲ್ಲೂ ಹಬ್ಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+