Bigg Boss: ಹೆಂಡತಿ ಇದ್ರೂ ಬೇರೆ ಮಹಿಳೆ ಜೊತೆ ಸಂಬಂಧದಲ್ಲಿರುವ ಖ್ಯಾತ ರಾಜಕಾರಣಿ ಈ ಬಾರಿ ಬಿಗ್‌ಬಾಸ್‌ಗೆ!
ಬಿಗ್‌ಬಾಸ್ ಪ್ರಿಯರ ನೆಚ್ಚಿನ ಸಮಯ ಸಮೀಪಿಸುತ್ತಿದೆ. ಕನ್ನಡ ಬಿಗ್‌ಬಾಸ್ ಸೀಸನ್-12 ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತಿದೆ. ಬಿಗ್‌ಬಾಸ್ ರಿಯಾಲಿಟಿ ಶೋ ವೀಕ್ಷಕರ ಸಂಖ್ಯೆ ಸಹ ಹೆಚ್ಚು. ಈ ಕಾರಣದಿಂದಲೇ ಟಿಆರ್‌ಪಿಯಲ್ಲೂ ಇದು ಬಾಸ್ ಆಗಿರುತ್ತದೆ. ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಲ್ಲಿ ವಿವಾದಾತ್ಮಕ ಜನರು, ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಹೆಚ್ಚಾಗಿರುತ್ತಾರೆ. ಇವರೆಲ್ಲರನ್ನು ಒಂದೇ ಮನೆಯಲ್ಲಿ ಕೂಡಿ ಹಾಕಿದಾಗ ನಡೆಯುವ ಕಾಮಿಡಿ, ಗಲಾಟೆ, ಮಾತುಕತೆಗಳು ವೀಕ್ಷಕರ ಗಮನ ಸೆಳೆಯುತ್ತವೆ. ಹಾಗಾಗಿ ಬಿಗ್‌ಬಾಸ್‌ಗೆ ಹೆಚ್ಚಾಗಿ ಇಂತಹ ಪ್ರತಿಭೆಗಳನ್ನೇ ಆಯ್ಕೆ ಮಾಡಲಾಗುತ್ತದೆ. ಪತ್ನಿ ಇದ್ದರೂ ಬೇರೊಬ್ಬರ ಜೊತೆ ಲಿವ್-ಇನ್ ಸಂಬಂಧದಲ್ಲಿ ಇರುವ ಫೇಮಸ್ ಆಗಿರುವ ಖ್ಯಾತ ರಾಜಕಾರಣಿಯೊಬ್ಬರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಬಿಗ್‌ಬಾಸ್ ಸ್ಪರ್ಧಿಗಳು ಯಾರೋ ಸಾಮಾನ್ಯ ಎನ್ನುವಂತಿರಲ್ಲ. ಎಲ್ಲರಿಗೂ ತಿಳಿದಿರುವ ಮುಖ, ಹೆಚ್ಚು ಅಭಿಮಾನಿಗಳನ್ನ ಹೊಂದಿರುವವರು, ಕಾಂಟ್ರವರ್ಸಿಗಳಲ್ಲಿ ಕಾಣಿಸಿಕೊಂಡವರು, ಕಿರುತೆರೆ, ಬೆಳ್ಳಿತೆರೆ ಸೆಲೆಬ್ರಿಟಿಗಳು, ಸ್ವಾಮೀಜಿಗಳು ಕೂಡ ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಮನರಂಜನೆಯ ರಸದೌತಣ ನೀಡಿದ್ದರು. ಆದರೆ ರಾಜಕಾರಣಿಗಳು ಬಿಗ್‌ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ವಿರಳ. ಇದೀಗ ಇಂತಹ ವಿಭಿನ್ನ ಸಾಹಸಕ್ಕೆ ಬಿಗ್‌ಬಾಸ್ ಕೈಹಾಕುತ್ತಿದೆ.

ಈ ರಾಜಕಾರಣಿ ರಾಜಕೀಯದಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಕೂಡ ಆದವರು. ಮದುವೆ ಆಗಿದ್ದರೂ ಬೇರೆ ಮಹಿಳೆ ಜೊತೆ ಲಿವ್‌ಇನ್ ರಿಲೇಷನ್‌ಶಿಪ್ ಹೊಂದಿದ್ದಾರೆ ಎಂದು ಈ ರಾಜಕಾರಣಿ ಬಗ್ಗೆ ಸುದ್ದಿ ಹರಿದಾಡಿತ್ತು. ನಂತರ ಅವರು ಅದೇ ಮಹಿಳೆ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ಹೆಚ್ಚು ಗಮನ ಸೆಳೆಯುತ್ತಿರುವ ಈ ಜೋಡಿಯನ್ನ ಒಟ್ಟಿಗೆ ಬಿಗ್‌ಬಾಸ್‌ಗೆ ಕರೆತರಲು ಪ್ಲ್ಯಾನ್ ನಡೆದಿದೆ.
ಈ ಬಾರಿ ತೆಲುಗು ಬಿಗ್‌ಬಾಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೋಷಿಯಲ್ ಮೀಡಿಯಾ ಟ್ರೆಂಡಿಂಗ್‌ನಲ್ಲಿರುವ ರಾಜಕಾರಣಿ ಹಾಗೂ ಅವರೊಂದಿಗೆ ಇರುವ ಮಹಿಳೆ ಹೆಸರಿದೆ. ಇವರು ಒಟ್ಟಿಗೆ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ವದಂತಿ ಇದೆ. ಇತ್ತೀಚೆಗೆ ಆಂಧ್ರಪ್ರದೇಶದ ರಾಜಕೀಯದಲ್ಲಿ ಸೆನ್ಸೇಷನ್ ಆಗಿರುವ ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ಹಾಗೂ ದಿವ್ವೇಲಾ ಮಾಧುರಿ ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧುರಿ ಅವರು ಖ್ಯಾತ ಡ್ಯಾನ್ಸರ್ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್.
ಆಂಧ್ರಪ್ರದೇಶದ ಎಂಎಲ್‌ಸಿ ಆಗಿರುವ ದುವ್ವಾಡ ಶ್ರೀನಿವಾಸ್ ಅವರಿಗೆ ಈಗಾಗಲೇ ಮದುವೆಯಾಗಿತ್ತು. ಆದರೆ 2024ರಲ್ಲಿ ತಮ್ಮ ಕುಟುಂಬವನ್ನು ತೊರೆದು ದಿವ್ವೇಲಾ ಮಾಧುರಿ ಎಂಬುವವರೊಂದಿಗೆ ವಾಸಿಸುತ್ತಿದ್ದಾರೆ. ಇವರು ಡಿ ಶ್ರೀನಿವಾಸ್ ಗ್ರಾನೈಟ್‌ನ ಮಾಲೀಕರು ಕೂಡ, ಕಳೆದ ವರ್ಷ ತಮ್ಮ ಪತ್ನಿ ವಾಣಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದ್ದರು. ಬಳಿಕ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಅವರನ್ನು ಶಿಸ್ತು ಕ್ರಮವಾಗಿ ಪಕ್ಷದಿಂದ ಅಮಾನತುಗೊಳಿಸಿದೆ.












Click it and Unblock the Notifications