Get Updates
Get notified of breaking news, exclusive insights, and must-see stories!

ನೀವೇ ನನ್ನ ಹೀರೋ ಅಪ್ಪ ಎಂದ ದರ್ಶನ್ ಮಗನಿಗೆ ನೆಟ್ಟಿಗರು ಹೇಳಿದ್ದೇನು? ಕಾಮೆಂಟ್ಸ್ ಇಲ್ಲಿದೆ ಓದಿ

ನಟ ದರ್ಶನ್ ಮಗ ಇಂದು ಅಪ್ಪಂದಿರ ದಿನದ ಪ್ರಯುಕ್ತ ಭಾವುಕರಾಗಿ ಪೋಸ್ಟ್ ಹಾಕಿದ್ದರು. ತನ್ನ ಅಪ್ಪ ಕೊಲೆ ಆರೋಪದಲ್ಲಿ ಜೈಲು ಸೇರಿದ ಸಮಯದಲ್ಲಿ ದರ್ಶನ್ ಮಗನ ಈ ಪೋಸ್ಟ್ ವೈರಲ್ ಆಗುತ್ತಿತ್ತು. ಮತ್ತೊಂದು ಕಡೆ ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಹೀಗೆ ದರ್ಶನ್ ಮಗನ ಪೋಸ್ಟ್ ಸೌಂಡ್ ಮಾಡುವಾಗ ಜನರು ಈ ಬಗ್ಗೆ ಹೇಳಿರುವುದು ಏನು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ನಟ ದರ್ಶನ್ ಬುದ್ಧಿ ಕಲಿಯುವುದಿಲ್ಲ, ಆತನಿಗೆ ಬುದ್ಧಿ ಬರಲ್ಲ ಅಂತಾ ಇದೀಗ ಕರ್ನಾಟಕದಲ್ಲಿ ಜನ ಡಿಸೈಡ್ ಮಾಡಿಕೊಂಡಿದ್ದಾರೆ. ಯಾಕಂದ್ರೆ ದರ್ಶನ್ ಮಾಡುತ್ತಿರುವ ಕೆಲಸಗಳು ಒಂದೆರಡಲ್ಲ ಬಿಡಿ. ಇಷ್ಟುದಿನ ಹೊಡೆದಾಟ, ಬಡಿದಾಟಕ್ಕೆ ಸೀಮಿತವಾಗಿದ್ದ ದರ್ಶನ್ & ಗ್ಯಾಂಗ್ ಈಗ ಕೊಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಅಮಾಯಕ ವ್ಯಕ್ತಿ ಮೇಲೆ ದರ್ಶನ್ ಹೀಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ದೊಡ್ಡ ಸದ್ದು ಮಾಡುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಮಗ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಪೋಸ್ಟ್ ವೈರಲ್ ಆಗಿದೆ. ಆದರೆ ದರ್ಶನ್ ಮಗನಿಗೆ ಈಗ ಜನರು ಹೇಳುತ್ತಿರುವುದು ಏನು ಗೊತ್ತಾ?

Explore What Karnataka People Saying To Darshan Thoogudeepa Son

ದರ್ಶನ್ ಮಗನಿಗೆ ಜನರ ರೀಪ್ಲೇ!

ನಟ ದರ್ಶನ್ ಪುತ್ರ 'ಹ್ಯಾಪಿ ಫಾದರ್ಸ್ ಡೇ ಅಪ್ಪ ನಾನು ನಿಮ್ಮನ್ನ ಬಹಳ ಮಿಸ್ ಮಾಡಿಕೊಳ್ಳುತ್ತಾ ಇದ್ದೀನಿ, ಐ ಲವ್ ಯು... ಯಾವಾಗಲೂ ನೀವೇ ನನ್ನ ಹೀರೋ' ಎಂದು ಪೋಸ್ಟ್ ಹಾಕಿದ್ದ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ಕೂಡ ರಿಯಾಕ್ಷನ್ ನೀಡಿ ಗಮನ ಸೆಳೆಯುತ್ತಿದ್ದಾರೆ. ಅದ್ರಲ್ಲೂ ದರ್ಶನ್ ಮಗ ಮಾಡಿರುವ ಪೋಸ್ಟ್ ಬಗ್ಗೆ ಹಾಕಿರುವ ನ್ಯೂಸ್‌ಗೆ ಜನ ಏನ್ ಹೇಳ್ತಿದ್ದಾರೆ ಗೊತ್ತಾ? ಮುಂದೆ ಓದಿ.

ಏನು ಹೇಳುತ್ತಿದ್ದಾರೆ ನೆಟ್ಟಿಗರು?

ಅಂದಹಾಗೆ ದರ್ಶನ್ ಪುತ್ರನ ನ್ಯೂಸ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿರುವ ಜನ, 'ನಿಮ್ ಅಪ್ಪ ನಿಂಗೆ ನಿಮ್ ಅಮ್ಮಂಗೆ ಹೀರೋ ಆಗೋ ಬದಲು ನಿಮ್ ಚಿಕ್ಕಮ್ಮನಿಗೆ ಹೀರೋ ಆಗೋಕ್ ಹೋಗಿ ಇವಾಗ ಜೀರೋ ಆಗಿರೋದು ಕಣಪ್ಪ' ಅಂತಾ ಒಬ್ಬರು ರೀಪ್ಲೇ ಕೊಟ್ಟಿದ್ದಾರೆ. ಹಾಗೇ ಮತ್ತೊಬ್ಬರು ದರ್ಶನ್ ಮಗನ ಮಾತಿಗೆ ಪ್ರತಿಕ್ರಿಯೆ ನೀಡಿ, '5 ತಿಂಗಳ ಗರ್ಭಿಣಿ. ಹೊಟ್ಟೆ ಇರುವ ಮಗುವಿನ ತಂದೆ. ಅಪ್ಪ. Very. ಇಂಪಾರ್ಟೆಂಟ್. ಗುಡ್ ಗುಡ್. ಮಾತು.' ಹೀಗೆಲ್ಲಾ ದರ್ಶನ್ ಮಗನ ಪೋಸ್ಟ್‌ಗೆ ವೆರೈಟಿ ವೆರೈಟಿ ಕಮೆಂಟ್ಸ್ ಬಂದಿವೆ.

ಕ್ಷುಲ್ಲಕ ಕಾರಣಕ್ಕೆ ದೋಸ್ತಿ ಢಮಾರ್?

ದರ್ಶನ್‌ಗೆ ಎಷ್ಟು ಮುಂಗೋಪ ಅಂದ್ರೆ ಮಾತು ಎತ್ತಿದರೆ ಸಾಕು ಕೈ ಮಾಡಲು ಬರುತ್ತಾರೆ ಎಂಬ ಆರೋಪ ಇದೆ. ಅದರಲ್ಲೂ ಗಾಂಧಿ ನಗರದಲ್ಲಿ ಇದೇ ರೀತಿ ಹಲವರ ಮೇಲೆ ನಟ ದರ್ಶನ್ & ಗ್ಯಾಂಗ್ ಹಲ್ಲೆ ಮಾಡಿರುವ ಆರೋಪ ಇದೆ. ಹೀಗಿದ್ದಾಗ ಕಿಚ್ಚ ಸುದೀಪ್ ಜೊತೆಗಿನ ದೋಸ್ತಿಯ ಕಡಿದುಕೊಳ್ಳಲು ದರ್ಶನ್‌ಗೆ ಇದ್ದ ಮುಂಗೋಪವೇ ಕಾರಣ ಎಂಬ ಆರೋಪ ಇದೆ. ಅದು ಹೇಗೆ ಗೊತ್ತಾ?

ಅಷ್ಟಕ್ಕೂ ಈ ಮಾತು ಹೇಳುತ್ತಿರುವುದು ಸ್ವತಃ ದರ್ಶನ್ & ಸುದೀಪ್ ಆಪ್ತರು ಯಾಕಂದ್ರೆ ಸಂದರ್ಶನ ಒಂದರಲ್ಲಿ ಇದೇ ದರ್ಶನ್ ಬಗ್ಗೆ ಸುದೀಪ್ ಅವರು ಮಾತನಾಡಿದ್ದರು. ಒಂದೇ ಒಂದು ಮಾತಿಗೆ ದರ್ಶನ್ ಆಕ್ರೋಶ ಹೊರಹಾಕಿ ನನ್ನ & ಸುದೀಪ್ ನಡುವೆ ಸ್ನೇಹ ಇಲ್ಲ ಅಂತಾ ಟ್ವೀಟ್ ಮಾಡೇ ಬಿಟ್ಟರು. ಅಲ್ಲದೆ ಹಲವು ವೇದಿಕೆಗಳಲ್ಲಿ ಇಬ್ಬರೂ ಒಂದೇ ಕಡೆ ಸಿಕ್ಕರೂ ಮುಖ ನೋಡದೆಯೇ ನಿಂತರು. ಈ ಮೂಲಕ ದಶಕಗಳ ಹಳೆಯ ದೋಸ್ತಿಗೆ ನೀರು ಬಿಟ್ಟರು!

ನಟ ಚಿಕ್ಕಣ್ಣಗೆ ಪೊಲೀಸರ ನೋಟಿಸ್!

ದರ್ಶನ್ ಸಹವಾಸ ಮಾಡಿದ್ದಕ್ಕೆ ನೂರಾರು ಜನ ಸಮಸ್ಯೆಗೆ ಸಿಲುಕಿದ್ದಾರೆ, ಅದರಲ್ಲೂ ಈಗ ತಾನೆ ಹೀರೋ ಆಗಿ ಜೀವನ ಕಟ್ಟಿಕೊಳ್ಳುತ್ತಿದ್ದ ನಟ ಚಿಕ್ಕಣ್ಣ ಕೂಡ ಮಾಜಿ ಡಿ-ಬಾಸ್ ಸಹವಾಸದಿಂದ ಪೊಲೀಸ್ ಠಾಣೆಗೆ ಹೋಗುವಂತಾಗಿದೆ. ಇಲ್ಲಿ ಆಗಿದ್ದು ಏನು ಅಂದ್ರೆ, ಜೂನ್‌ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ & ಕೊಲೆ ನಡೆಸುವ ಮೊದಲು ದರ್ಶನ್‌ & ಗ್ಯಾಂಗ್ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಎಂಬ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರಂತೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ರು ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆಯನ್ನ ನಡೆಸಿ ಈ ವಿಚಾರ ಕನ್ಫರ್ಮ್ ಮಾಡಿಕೊಂಡಿದ್ದು, ಇದೀಗ ನಟ ಚಿಕ್ಕಣ್ಣಗೆ ವಿಚಾರಣೆ ಬಾ ಎಂದು ನೋಟಿಸ್ ಕೂಡ ನೀಡಿದ್ದಾರೆ.

ನಟ ಚಿಕ್ಕಣ್ಣ ಕೂಡ ಅರೆಸ್ಟ್?

ಹೌದು, ಇದೀಗ ದರ್ಶನ್ ಅರೆಸ್ಟ್ ಆದ ನಂತರ ನಟ ಚಿಕ್ಕಣ್ಣ ಕೂಡ ಅರೆಸ್ಟ್ ಆಗುತ್ತಾರಾ? ಎಂಬ ಪ್ರಶ್ನೆ ಕಾಡತೊಡಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ವಿಚಾರಣೆಗೆ ಹಾಜರಾಗಲು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಚಿಕ್ಕಣ್ಣನಿಗೆ ನೋಟಿಸ್‌ ನೀಡಿದ್ದು ತಕ್ಷಣ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಲು ಸೂಚನೆ ಕೂಡ ನೀಡಿದ್ದಾರಂತೆ. ಹೀಗಾಗಿ ಚಿಕ್ಕಣ್ಣ ವಿಚಾರಣೆಗೆ ಓಡೋಡಿ ಬರುವ ಸಾಧ್ಯತೆ ಇದೆ.

ಆದರೆ ಸದ್ಯಕ್ಕೆ ನಟ ಚಿಕ್ಕಣ್ಣ ಅರೆಸ್ಟ್ ಆಗುವುದಿಲ್ಲ, ಆದರೆ ಪಾರ್ಟಿ ಮಾಡುವ ಸಮಯದಲ್ಲಿ. ಈ ಕೊಲೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಆಗಿತ್ತಾ? ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಏನಾದ್ರೂ ಹೇಳಿದ್ದರಾ? ಎಂಬ ಬಗ್ಗೆ ಚಿಕ್ಕಣ್ಣ ಅವರನ್ನ ವಿಚಾರಣೆ ಮಾಡಲಿದ್ದಾರೆ ಪೊಲೀಸರು ಎನ್ನಲಾಗಿದೆ. ಹಾಗೇ ಚಿಕ್ಕಣ್ಣ ಏನಾದ್ರೂ ಈ ವಿಚಾರಗಳನ್ನ ತಿಳಿಸಿದರೆ, ಚಿಕ್ಕಣ್ಣ ಹೇಳಿಕೆಯನ್ನ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಅಂತಿದ್ದಾರೆ ಪೊಲೀಸರು. ಹೀಗಾಗಿ ನಟ ಚಿಕ್ಕಣ್ಣಗೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ದರ್ಶನ್ ಮನುಷ್ಯನ ರಾಕ್ಷಸನಾ...

ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ದಾನೆ. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ದಾನೆ. ಇದೇ ಕಾರಣಕ್ಕೆ ದರ್ಶನ್‌ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಸರಿಯಾಗಿ ನಡೆದುಕೊಳ್ಳಬೇಕಿದ್ದ ಈತ ಕೆಟ್ಟದಾಗಿ ನಡೆದುಕೊಂಡು ಈಗ ಕಂಬಿ ಎಣಿಸುತ್ತಿದ್ದಾನೆ. ಅದರಲ್ಲೂ ನಟ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮೊದಲು, ಆತ ಮಾಡಿದ ಕೃತ್ಯದ ವಿಡಿಯೋಗಳನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವೀಕ್ಷಣೆ ಮಾಡಿದ್ದರಂತೆ. ಖುದ್ದು ಬೆಂಗಳೂರು ಕಮೀಷನರ್ ದರ್ಶನ್ ಅಟ್ಟಹಾಸದ ವಿಡಿಯೋ ತೋರಿಸಿ, ಸಿಎಂ ಬಳಿ ಅನುಮತಿ ಪಡೆದು ಕೊಲೆ ಆರೋಪಿ ದರ್ಶನ್ ಬಂಧಿಸಿದ್ದರಂತೆ.

118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?

ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ಈಗ ದರ್ಶನ್‌ಗೆ ಜೈಲೂಟ ಗ್ಯಾರಂಟಿ ಆಗಿದೆ.

ಡಿ-ಗ್ಯಾಂಗ್‌ಗೆ ಮಾನಸಿಕ ವಿಕೃತಿ?

ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ರೀತಿ ನೋಡಿದರೆ, ಈ ಗ್ಯಾಂಗ್ ಮಾನಸಿಕ ವಿಕೃತಿ ಹೊಂದಿದೆಯಾ? ಎಂಬ ಅನುಮಾನ ಮೂಡಿದೆ ಯಾಕಂದ್ರೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಸಂಗತಿ ಗೊತ್ತಾಗಿದೆ. ರೇಣುಕಾಸ್ವಾಮಿ ಚರ್ಮಕ್ಕೆ, ತಲೆಗೆ ಹಾಗೂ ಮರ್ಮಾಂಗಕ್ಕೆ ಭಾರಿ ಗಾಯ ಮಾಡಲಾಗಿದೆ. ಹಾಗೇ ಮರ್ಮಾಂಗದ ಚರ್ಮ ಸುಲಿದು ಟಾರ್ಚರ್ ಕೊಟ್ಟಿದ್ದಾರೆ. ಈ ಮೂಲಕ ವಿಕೃತವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಈ ವಿಕೃತರ ಗ್ಯಾಂಗ್. ಹೀಗಾಗಿಯೇ ಪೊಲೀಸರು ಈ ಗ್ಯಾಂಗ್‌ಗೆ ವಿಕೃತ ಮನಸ್ಥಿತಿ ಇದೆಯಾ? ಎಂಬ ಆಂಗಲ್ ಮೂಲಕವೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಇವರಿಂದ ಇನ್ನೂ ಯಾರು, ಯಾರೆಲ್ಲಾ ಸಮಸ್ಯೆ ಎದುರಿಸಿದ್ದಾರೆ? ಅನ್ನೋದನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ.

ಮುಂದೆ ಐತೆ ಮಾರಿ ಹಬ್ಬ?

ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.

ದರ್ಶನ್ ಅಲಿಯಾಸ್ ರೌಡಿ ದರ್ಶನ್?

2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?

ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.

ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?

ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+