ದರ್ಶನ್ & ಸುದೀಪ್ ಜೀವದ ಗೆಳೆಯರಂತೆ ಇದ್ದು ದೂರವಾಗಲು ಕಾರಣ ಏನು?
ದರ್ಶನ್ ತನ್ನ ದುರಹಂಕಾರ & ಹಲ್ಲೆ ಮಾಡುವ ಗುಣದಿಂದ ವಿಲನ್ ಆಗುತ್ತಿದ್ದಾನೆ. ಈಗ ಕೊಲೆ ಆರೋಪ ಹೊತ್ತಿರುವ ದರ್ಶನ್ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ನಿಶ್ಯಕ್ತ ರೇಣುಕಾಸ್ವಾಮಿ ಮೇಲೆ ಡಿ-ಗ್ಯಾಂಗ್ ಹಲ್ಲೆ ಮಾಡಿ ತಾವು ಎಷ್ಟು ಸೈಕೋಗಳು ಅನ್ನೋದನ್ನ ತೋರಿಸಿದ್ದಾರೆ ಎಂಬ ಆರೋಪ ಕೇಳಿಬರುವ ಸಮಯದಲ್ಲೇ, ಕಿಚ್ಚ ಸುದೀಪ್ & ಕೊಲೆ ಆರೋಪಿ ದರ್ಶನ್ ದೂರವಾಗಿದ್ದು ಏಕೆ? ಅನ್ನೋ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಹುಡುಕಲು ಮುಂದೆ ಓದಿ.
ಕಿಚ್ಚ ಸುದೀಪ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ, ಅದರಲ್ಲೂ ಪರಭಾಷೆಗೂ ಸುದೀಪ್ ಎಂಟ್ರಿ ಕೊಟ್ಟು ಅಬ್ಬರಿಸಿದ್ದಾರೆ. ಹೀಗಿದ್ದಾಗ ಸುದೀಪ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಕೂಡ. ಹೀಗೆ ಮತ್ತೊಂದು ಕಡೆ ನಟ ದರ್ಶನ್ ಕೂಡ ಹಲವು ಅವಕಾಶ & ವೇದಿಕೆ ಪಡೆದಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆರೆಯುವ ಅವಕಾಶ ಕೂಡ ಗಿಟ್ಟಿಸಿಕೊಂಡಿದ್ದ ನಟ ದರ್ಶನ್, ತಮ್ಮ ಕೈಯಾರೆ ತನ್ನ ಬಾಳು ಹಾಳು ಮಾಡಿಕೊಂಡ ರೀತಿಯೇ ಕಾಣುತ್ತಿದೆ. ಅದರಲ್ಲೂ ಕೊಲೆ ಆರೋಪ ದರ್ಶನ್ ಬೆನ್ನು ಹತ್ತಿರುವ ನಡುವೆ, ಕಿಚ್ಚ ಸುದೀಪ್ & ದರ್ಶನ್ ದೋಸ್ತಿ ಕಟ್ ಆಗಿದ್ದು ಏಕೆ..? ಎಂಬ ಪ್ರಶ್ನೆ ಅಭಿಮಾನಿಗಳ ಎದೆಯಲ್ಲಿ ಕಾಡುತ್ತಿದ್ದು, ಪ್ರಶ್ನೆಗೆ ಉತ್ತರ ಹುಡುಕಲು ಮುಂದೆ ಓದಿ.

ಕ್ಷುಲ್ಲಕ ಕಾರಣಕ್ಕೆ ದೋಸ್ತಿ ಢಮಾರ್?
ದರ್ಶನ್‌ಗೆ ಎಷ್ಟು ಮುಂಗೋಪ ಅಂದ್ರೆ ಮಾತು ಎತ್ತಿದರೆ ಸಾಕು ಕೈ ಮಾಡಲು ಬರುತ್ತಾರೆ ಎಂಬ ಆರೋಪ ಇದೆ. ಅದರಲ್ಲೂ ಗಾಂಧಿ ನಗರದಲ್ಲಿ ಇದೇ ರೀತಿ ಹಲವರ ಮೇಲೆ ನಟ ದರ್ಶನ್ & ಗ್ಯಾಂಗ್ ಹಲ್ಲೆ ಮಾಡಿರುವ ಆರೋಪ ಇದೆ. ಹೀಗಿದ್ದಾಗ ಕಿಚ್ಚ ಸುದೀಪ್ ಜೊತೆಗಿನ ದೋಸ್ತಿಯ ಕಡಿದುಕೊಳ್ಳಲು ದರ್ಶನ್‌ಗೆ ಇದ್ದ ಮುಂಗೋಪವೇ ಕಾರಣ ಎಂಬ ಆರೋಪ ಇದೆ. ಅದು ಹೇಗೆ ಗೊತ್ತಾ?
ಅಷ್ಟಕ್ಕೂ ಈ ಮಾತು ಹೇಳುತ್ತಿರುವುದು ಸ್ವತಃ ದರ್ಶನ್ & ಸುದೀಪ್ ಆಪ್ತರು ಯಾಕಂದ್ರೆ ಸಂದರ್ಶನ ಒಂದರಲ್ಲಿ ಇದೇ ದರ್ಶನ್ ಬಗ್ಗೆ ಸುದೀಪ್ ಅವರು ಮಾತನಾಡಿದ್ದರು. ಒಂದೇ ಒಂದು ಮಾತಿಗೆ ದರ್ಶನ್ ಆಕ್ರೋಶ ಹೊರಹಾಕಿ ನನ್ನ & ಸುದೀಪ್ ನಡುವೆ ಸ್ನೇಹ ಇಲ್ಲ ಅಂತಾ ಟ್ವೀಟ್ ಮಾಡೇ ಬಿಟ್ಟರು. ಅಲ್ಲದೆ ಹಲವು ವೇದಿಕೆಗಳಲ್ಲಿ ಇಬ್ಬರೂ ಒಂದೇ ಕಡೆ ಸಿಕ್ಕರೂ ಮುಖ ನೋಡದೆಯೇ ನಿಂತರು. ಈ ಮೂಲಕ ದಶಕಗಳ ಹಳೆಯ ದೋಸ್ತಿಗೆ ನೀರು ಬಿಟ್ಟರು!
7 ವರ್ಷದಿಂದ ಫುಲ್ ಫೈಟ್!
ಹೀಗೆ ದರ್ಶನ್ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದು ದೊಡ್ಡ ಕಿಚ್ಚು ಹೊತ್ತಿಸಿತ್ತು, ಆ ನಂತರ ಕಿಚ್ಚ ಸುದೀಪ್ ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ಸುಮ್ಮನಾದರು. ಇಬ್ಬರ ನಡುವೆ ಹೊತ್ತಿದ್ದ ಕಿಚ್ಚು ಹಾಗೆಯೇ ಉಳಿದುಬಿಟ್ಟಿದೆ. ಸುಮಾರು 7 ವರ್ಷದಿಂದ ಇಬ್ಬರ ನಡುವೆ ಮುನಿಸು ಇದ್ದು, ಇಬ್ಬರೂ ಒಂದಾಗಲಿ ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇದೀಗ ಕೊಲೆ ಆರೋಪ ಹೊತ್ತಿರುವ ದರ್ಶನ್ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ ನಟ ಸುದೀಪ್ ಅವರು. ಅಲ್ಲದೆ ಈ ಕೇಸ್‌ನಲ್ಲಿ ನ್ಯಾಯ ಸಿಗಬೇಕು ಅಂತಿದ್ದಾರೆ ಕಿಚ್ಚ ಸುದೀಪ್ ಅವರು.
ನಟ ಚಿಕ್ಕಣ್ಣಗೆ ಪೊಲೀಸರ ನೋಟಿಸ್!
ದರ್ಶನ್ ಸಹವಾಸ ಮಾಡಿದ್ದಕ್ಕೆ ನೂರಾರು ಜನ ಸಮಸ್ಯೆಗೆ ಸಿಲುಕಿದ್ದಾರೆ, ಅದರಲ್ಲೂ ಈಗ ತಾನೆ ಹೀರೋ ಆಗಿ ಜೀವನ ಕಟ್ಟಿಕೊಳ್ಳುತ್ತಿದ್ದ ನಟ ಚಿಕ್ಕಣ್ಣ ಕೂಡ ಮಾಜಿ ಡಿ-ಬಾಸ್ ಸಹವಾಸದಿಂದ ಪೊಲೀಸ್ ಠಾಣೆಗೆ ಹೋಗುವಂತಾಗಿದೆ. ಇಲ್ಲಿ ಆಗಿದ್ದು ಏನು ಅಂದ್ರೆ, ಜೂನ್ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ & ಕೊಲೆ ನಡೆಸುವ ಮೊದಲು ದರ್ಶನ್ & ಗ್ಯಾಂಗ್ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಎಂಬ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರಂತೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ರು ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆಯನ್ನ ನಡೆಸಿ ಈ ವಿಚಾರ ಕನ್ಫರ್ಮ್ ಮಾಡಿಕೊಂಡಿದ್ದು, ಇದೀಗ ನಟ ಚಿಕ್ಕಣ್ಣಗೆ ವಿಚಾರಣೆ ಬಾ ಎಂದು ನೋಟಿಸ್ ಕೂಡ ನೀಡಿದ್ದಾರೆ.
ನಟ ಚಿಕ್ಕಣ್ಣ ಕೂಡ ಅರೆಸ್ಟ್?
ಹೌದು, ಇದೀಗ ದರ್ಶನ್ ಅರೆಸ್ಟ್ ಆದ ನಂತರ ನಟ ಚಿಕ್ಕಣ್ಣ ಕೂಡ ಅರೆಸ್ಟ್ ಆಗುತ್ತಾರಾ? ಎಂಬ ಪ್ರಶ್ನೆ ಕಾಡತೊಡಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ವಿಚಾರಣೆಗೆ ಹಾಜರಾಗಲು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಚಿಕ್ಕಣ್ಣನಿಗೆ ನೋಟಿಸ್ ನೀಡಿದ್ದು ತಕ್ಷಣ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಲು ಸೂಚನೆ ಕೂಡ ನೀಡಿದ್ದಾರಂತೆ. ಹೀಗಾಗಿ ಚಿಕ್ಕಣ್ಣ ವಿಚಾರಣೆಗೆ ಓಡೋಡಿ ಬರುವ ಸಾಧ್ಯತೆ ಇದೆ.
ಆದರೆ ಸದ್ಯಕ್ಕೆ ನಟ ಚಿಕ್ಕಣ್ಣ ಅರೆಸ್ಟ್ ಆಗುವುದಿಲ್ಲ, ಆದರೆ ಪಾರ್ಟಿ ಮಾಡುವ ಸಮಯದಲ್ಲಿ. ಈ ಕೊಲೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಆಗಿತ್ತಾ? ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಏನಾದ್ರೂ ಹೇಳಿದ್ದರಾ? ಎಂಬ ಬಗ್ಗೆ ಚಿಕ್ಕಣ್ಣ ಅವರನ್ನ ವಿಚಾರಣೆ ಮಾಡಲಿದ್ದಾರೆ ಪೊಲೀಸರು ಎನ್ನಲಾಗಿದೆ. ಹಾಗೇ ಚಿಕ್ಕಣ್ಣ ಏನಾದ್ರೂ ಈ ವಿಚಾರಗಳನ್ನ ತಿಳಿಸಿದರೆ, ಚಿಕ್ಕಣ್ಣ ಹೇಳಿಕೆಯನ್ನ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಅಂತಿದ್ದಾರೆ ಪೊಲೀಸರು. ಹೀಗಾಗಿ ನಟ ಚಿಕ್ಕಣ್ಣಗೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.
ದರ್ಶನ್ ಮನುಷ್ಯನ ರಾಕ್ಷಸನಾ...
ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ದಾನೆ. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ದಾನೆ. ಇದೇ ಕಾರಣಕ್ಕೆ ದರ್ಶನ್‌ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಸರಿಯಾಗಿ ನಡೆದುಕೊಳ್ಳಬೇಕಿದ್ದ ಈತ ಕೆಟ್ಟದಾಗಿ ನಡೆದುಕೊಂಡು ಈಗ ಕಂಬಿ ಎಣಿಸುತ್ತಿದ್ದಾನೆ. ಅದರಲ್ಲೂ ನಟ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮೊದಲು, ಆತ ಮಾಡಿದ ಕೃತ್ಯದ ವಿಡಿಯೋಗಳನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವೀಕ್ಷಣೆ ಮಾಡಿದ್ದರಂತೆ. ಖುದ್ದು ಬೆಂಗಳೂರು ಕಮೀಷನರ್ ದರ್ಶನ್ ಅಟ್ಟಹಾಸದ ವಿಡಿಯೋ ತೋರಿಸಿ, ಸಿಎಂ ಬಳಿ ಅನುಮತಿ ಪಡೆದು ಕೊಲೆ ಆರೋಪಿ ದರ್ಶನ್ ಬಂಧಿಸಿದ್ದರಂತೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ಈಗ ದರ್ಶನ್‌ಗೆ ಜೈಲೂಟ ಗ್ಯಾರಂಟಿ ಆಗಿದೆ.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications