ಪ್ರಧಾನಿ ಮೋದಿ ಅವರಿಂದ ನಟಿ ಲೀಲಾವತಿ ಅವರ ನಿಧನಕ್ಕೆ ಸಂತಾಪ
ನಟಿ ಲೀಲಾವತಿ ಅವರು ಕನ್ನಡಿಗರನ್ನ ಅಗಲಿ ಹೋಗಿದ್ದಾರೆ, ತಮ್ಮ 86ನೇ ವಯಸ್ಸಿನಲ್ಲಿ ನಟಿ ಲೀಲಾವತಿ ಅವರು ಕೊನೆಯುಸಿರನ್ನ ಎಳೆದಿದ್ದಾರೆ. ನಟಿ ಲೀಲಾವತಿ ನಿಧನರಾದ ಸುದ್ದಿ ಕೇಳಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ಅವರು ಕೂಡ ಕನ್ನಡದ ನಟಿಯ ನಿಧನಕ್ಕೆ ಕನ್ನಡದಲ್ಲೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಹಾಗಾದರೆ ಈಗ ಲೀಲಾವತಿ ಅವರ ನಿಧನದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
1937 ರ ಡಿ. 24 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ್ದ ಲೀಲಾವತಿ ಅವರು ಸುಮಾರು, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹೀಗಾಗಿ ದೇಶಾದ್ಯಂತ ಅವರು ಹೆಸರು ಮಾಡಿದ್ದರು. ನಟಿಯ ನಿಧನಕ್ಕೆ ಈಗಾಗಲೇ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಈಗ ಪ್ರಧಾನಿ ಮೋದಿ ಅವರು ಕೂಡ ಸಂತಾಪ ಸೂಚಿಸಿದ್ದಾರೆ. ಕನ್ನಡ ಹಿರಿಯ ನಟಿ ಅಗಲಿಕೆ ಬಗ್ಗೆ ಭಾರತದ ಪ್ರಧಾನಿ ಮೋದಿ ಅವರು ಹೇಳಿದ್ದು ಏನು ಗೊತ್ತಾ? ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

ಕನ್ನಡದಲ್ಲೇ ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಟ್ವೀಟ್ ಮಾಡಿದ್ದು, 'ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.' ಎಂದಿದ್ದಾರೆ.
1958ರಲ್ಲಿ ಸಿನಿಮಾ ಜರ್ನಿ ಆರಂಭ
ಅಂದಹಾಗೆ 1958ರಲ್ಲಿ ಮಾಂಗಲ್ಯ ಯೋಗ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ರು. ಲೀಲಾವತಿ ಅವರು ಬಳಿಕ ಭಕ್ತ ಪ್ರಹ್ಲಾದ ಕನ್ನಡ, 1959ರಲ್ಲಿ ರಾಜ ಮಲಯ ಸಿಂಹ ಚಿತ್ರದ ಮೂಲಕ ವೃತ್ತಿ ಜೀವನದಲ್ಲಿ ಮುಂದೆ ಸಾಗಿದರು. ಅದೇ ವರ್ಷ ಅಬ್ಬಾ ಆ ಹುಡುಗಿ ಚಿತ್ರ ಕೂಡ ಬಿಡುಗಡೆ ಆಗಿತ್ತು. 1959ರಲ್ಲೇ ಧರ್ಮ ವಿಜಯ, 1960ರಲ್ಲಿ ದಶವತಾರ, ರಣಧೀರ ಕಂಠೀರವ, ರಾಣಿ ಹೊನ್ನಮ್ಮ, 1961ರಲ್ಲಿ ಕೈವಾರ ಮಹಾತ್ಮೆ ಮತ್ತು ಕಣ್ತೆರೆದು ನೋಡು, ಕಿತ್ತೂರು ಚೆನ್ನಮ್ಮ ಸಿನಿಮಾಗಳಲ್ಲಿ ನಟಿಸಿದ್ದರು.

ಒಟ್ನಲ್ಲಿ ನಟಿ ಲೀಲಾವತಿ ಅವರ ಅಗಲಿಕೆ ಈಗ ಕೋಟ್ಯಂತರ ಅಭಿಮಾನಿಗಳ ಜೊತೆಯಲ್ಲಿ ಗಣ್ಯರಿಗು ಕೂಡ ನೋವು ತರಿಸಿದೆ. ಅದ್ರಲ್ಲೂ ಇಡೀ ಭಾರತದಲ್ಲಿ ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದ ಹಿರಿಯ ನಟಿಯ ಅಗಲಿಕೆಗೆ ವಿವಿಧ ಭಾಷೆಯ ನಟ, ನಟಿಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.












Click it and Unblock the Notifications