Rakhi Sawant: ಅಂದರ್ ಆಗಿದ್ದ ಮಾಜಿ ಪತಿ ಬಾಹರ್: ರಾಖಿ ಸಾವಂತ್‌ಗೆ ಸಂಕಷ್ಟ ಶುರು!
ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ್ಗೆ ಮುಖ್ಯಾಂಶಗಳಲ್ಲಿ ಇರುತ್ತಾರೆ. ಈ ವರ್ಷದ ಆರಂಭದಲ್ಲಿ, ಅವರು ತಮ್ಮ ಮಾಜಿ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದರು. ಬಳಿಕ ಆದಿಲ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಜೈಲಿನಿಂದ ಹೊರಬಂದ ಆದಿಲ್ ಖಾನ್ ದುರಾನಿ
ರಾಖಿ ಸಾವಂತ್ ಆದಿಲ್ ಖಾನ್ ವಿರುದ್ಧ ಧಾರ್ಮಿಕ ಮತಾಂತರ ಮತ್ತು ಕೌಟುಂಬಿಕ ಹಿಂಸಾಚಾರದಂತಹ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದರು. ಆದಿಲ್ ತನಗೆ ಮೋಸ ಮಾಡಿದ್ದಾನೆ ಎಂದು ರಾಖಿ ಹೇಳಿದ್ದರು. ನಂತರ ಆಕೆಯ ಮಾಜಿ ಪತಿ ಆದಿಲ್ ಖಾನ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಇದೀಗ 6 ತಿಂಗಳ ಜೈಲುವಾಸ ಅನುಭವಿಸಿ ಆದಿಲ್ ಖಾನ್ ದುರಾನಿ ಜೈಲಿನಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳ ಮುಂದೆ ರಾಖಿಗೆ ಬೆದರಿಕೆ ಹಾಕಿದ್ದು, ಶೀಘ್ರವೇ ದೊಡ್ಡದಾಗಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ರಾಖಿ ಸಾವಂತ್‌ಗೆ ಸಾರ್ವಜನಿಕವಾಗಿ ಬೆದರಿಕೆ
ಆದಿಲ್ ಖಾನ್ ದುರಾನಿ ಸಾರ್ವಜನಿಕವಾಗಿ ಸುದ್ದಿಗಾರರೊಂದಿಗೆ ಮಾತನಾಡುವಾಗ ತಮ್ಮ ನೋವನ್ನು ವ್ಯಕ್ತಪಡಿಸಿದರು. ಇದೆಲ್ಲವೂ ನನ್ನ ಜೊತೆ ಸಂಭವಿಸಿದೆ. ಶೀಘ್ರದಲ್ಲೇ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಹೇಳಿದರು. 'ನನ್ನಿಂದ ಬಹಳಷ್ಟು ತಪ್ಪಾಗಿದೆ. ಕೆಲ ದಿನಗಳ ನಂತರ ಪತ್ರಿಕಾಗೋಷ್ಠಿ ನಡೆಸಿ ಎಲ್ಲರಿಗೂ ನನ್ನ ಬಗ್ಗೆ ಹೇಳುತ್ತೇನೆ. ಈಗ ಯಾರೂ ಬಂದು ನನ್ನನ್ನು ಜೈಲಿಗೆ ಕಳುಹಿಸಿ ಪ್ರಚಾರ ಪಡೆಯಲು ಸಾಧ್ಯವಿಲ್ಲ. ಇದು ಏಕೆ ಮತ್ತು ಯಾವ ಕಾರಣಕ್ಕಾಗಿ ಸಂಭವಿಸಿತು ಎಂದು ನಾನು ಎಲ್ಲರಿಗೂ ಹೇಳುತ್ತೇನೆ. ಇದರಲ್ಲಿ ರಾಖಿ ಜತೆಗೆ ಇನ್ನೂ ಕೆಲವರು ಭಾಗಿಯಾಗಿದ್ದಾರೆ. ನನಗೆ ಕೋಟಿ ಕೊಡಬೇಕು ಇಲ್ಲವೇ ನನ್ನ ಬಳಿ ಬರಬೇಕು. ಇದೆಲ್ಲವೂ ಬೇಗ ಎಲ್ಲರಿಗೂ ಗೊತ್ತಾಗುತ್ತದೆ' ಎಂದು ಸಾರ್ವಜನಿಕವಾಗಿ ರಾಖಿಗೆ ಮಾಜಿ ಪತಿ ಬೆದರಿಕೆ ಹಾಕಿದ್ದಾರೆ.
ಶೀಘ್ರದಲ್ಲೇ ಪತ್ರಿಕಾಗೋಷ್ಠಿ
ಸದ್ಯ ಆದಿಲ್ ಖಾನ್ ದುರಾನಿ ಅವರು ರಾಖಿ ಸಾವಂತ್ ಬಗ್ಗೆ ಮಾಧ್ಯಮಗಳಿಗೆ ಏನು ಹೇಳಬೇಕೆಂದುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ರಾಖಿ ಸಾವಂತ್ ಸಂಕಷ್ಟ ಸದ್ಯದಲ್ಲೇ ಹೆಚ್ಚಾಗಲಿದೆ ಎಂಬುದು ಆದಿಲ್ ಮಾತಿನಿಂದ ಸ್ಪಷ್ಟವಾಗಿದೆ. ಆದಿಲ್ ಖಾನ್ ಅವರ ಈ ವಿಡಿಯೋಗೆ ಅಭಿಮಾನಿಗಳು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
*ಒಬ್ಬ ಬಳಕೆದಾರರು ಬರೆದಿದ್ದು ಹೀಗಿದೆ- ಬಡ ಮನುಷ್ಯ ನಿಜವಾಗಿಯೂ ಸಿಕ್ಕಿಬಿದ್ದಿದ್ದಾನೆ.
*ಇನ್ನೊಬ್ಬ ಬಳಕೆದಾರ, 'ಇದು ಮೊದಲೇ ತಿಳಿದಿರಬೇಕು' ಎಂದು ಬರೆದಿದ್ದಾರೆ.

ರಾಖಿ ಗಂಭೀರ ಆರೋಪ
ಕೆಲ ತಿಂಗಳ ಹಿಂದೆ ಆದಿಲ್‌ಗೆ ಜೀವನದಲ್ಲಿ ಮತ್ತೊಬ್ಬ ಮಹಿಳೆ ಇದ್ದಾರೆ ಎಂದು ರಾಖಿ ಆರೋಪಿಸಿದ್ದರು. ಅವರು ತಮ್ಮ ಹೇಳಿಕೆಯೊಂದರಲ್ಲಿ, "ನೀವು ಮಾಧ್ಯಮಗಳಿಗೆ ಏಕೆ ಬರಬಾರದು, ವಿಷಯವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಅಥವಾ ಫ್ರಿಡ್ಜ್ ಅಲ್ಲಿ ಇಟ್ಟುಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಇದೆಲ್ಲವನ್ನೂ ಖಾಸಗಿಯಾಗಿರಿಸುವುದರಿಂದ ನನಗೆ ತೊಂದರೆಯೂ ಇಲ್ಲ. ಅದನ್ನು ಫ್ರಿಡ್ಜ್‌ನಲ್ಲಿ ಇರಿಸಬೇಕು ಅಷ್ಟೇ'' ಎಂದಿದ್ದರು.
6 ಫೆಬ್ರವರಿ 2023 ರಂದು, ರಾಖಿ ಸಾವಂತ್ ಆದಿಲ್ ವಿರುದ್ಧ ವಂಚನೆ, ಕೌಟುಂಬಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ಕೇಸ್ ದಾಖಲಿಸಿದ್ದರು.












Click it and Unblock the Notifications