ಬಿಗ್ ಬಾಸ್‌ಗೆ ಬಿಗ್ ಶಾಕ್ ಕೊಟ್ಟ ಚೆಲುವೆ; ₹6 ಕೋಟಿ ಆಫರ್ ರಿಜೆಕ್ಟ್ ಮಾಡಿದ ನಟಿ ಯಾರು ಗೊತ್ತಾ?
ಬಿಗ್ ಬಾಸ್‌ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ಬಿಗ್ ಬಾಸ್‌ನ ನಿಯಮಾವಳಿಯೇ ಹಾಗೇ ಇದೆ. ಸದಾ ಕಾಲ ಕಾಲು ಕೆರೆದು ಜಗಳಕ್ಕೆ ನಿಲ್ಲುವ ವಿವಾದಿತ ವ್ಯಕ್ತಿಯಾಗಿರಬೇಕು.ಹೀಗಿದ್ದಾಗಲೇ ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುವುದು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬರುತ್ತಿದೆ.
ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕವೆಂದುಕೊಂಡವರು ಕೂಡ ಇದ್ದಾರೆ. ಈ ವರ್ಷ ಬಿಗ್ ಬಾಸ್ ಗೆ ತಮ್ಮ ತಮ್ಮ ಇಷ್ಟದ ನಟಿಯರು ಬರಬಹುದಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆವೆ. ಈಗಾಗಲೇ ಬಿಗ್ ಬಾಸ್ ಮನೆಗೆ ಯಾರ್ಯಾರು ಹೋಗುತ್ತಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ತಮ್ಮ ಇಷ್ಟದ ಸೆಲೆಬ್ರೆಟಿಗಳು ಬಂದ್ರೆ ಅವರ ದಿನ ನಿತ್ಯದ ಬದುಕು ಹೇಗಿರುತ್ತದೆ ಎಂಬುದನ್ನ ಹತ್ತಿರದಿಂದ ನೋಡುವ ಅವಕಾಶ ನಮ್ಮದಾಗುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇನ್ನು ಬಿಗ್ ಬಾಸ್ ಕಡೆಯಿಂದ ಕರೆ ಬಂದಿದ್ದೇ ತಡ ಹಲವು ತಾರೆಯರು ತಮ್ಮ ಕೆಲಸವನ್ನೆಲ್ಲಾ ಮರೆತು ಬಿಗ್ ಬಾಸ್ ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೆ. ಆದರೆ.. ಇಲ್ಲೊಬ್ಬ ನಟಿ ಆರು ಕೋಟಿಯ ಆಮಿಷವನ್ನು ಬಿಗ್ ಬಾಸ್ ನೀಡಿದರು ಸಹ ಕ್ಯಾರೇ ಎಂದಿಲ್ಲ. ಬಿಗ್ ಬಾಸ್ ನಿಂದ ಬಂದ ಆಫರ್‌ನ ಎಡಗಾಲಿನಿಂದ ಒದ್ದಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಬಿಗ್ ಶಾಕ್ ನೀಡಿದಂತಾಗಿದೆ.
ಈಗಾಗಲೇ ಮಲಯಾಳಂನಲ್ಲಿ ಬಿಗ್ ಬಾಸ್ ಶುರುವಾಗಿದೆ.ಇನ್ನೂ ಕನ್ನಡ ಬಿಗ್ ಬಾಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ದತೆ ನಡೆಯುತ್ತಿದೆ. ಇತ್ತ ಇದೇ ಆಗಸ್ಟ್ 24 ರಿಂದ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕೆ ಜರ್ಮನ್‌ನ ಚೆಲುವೆ ''ಎಲ್ನಾಜ್ ನೊರೌಜಿ'' ಅವರಿಗೆ ಕರೆಯಲಾಗಿತ್ತು. ಆರು ಕೋಟಿಯ ಸಂಭಾವನೆ ಕೂಡ ನಿಗದಿ ಮಾಡಲಾಗಿತ್ತು. ಆದರೆ ಎಲ್ನಾಜ್ ನೊರೌಜಿ ಮಾತ್ರ ಬಿಗ್ ಬಾಸ್ ಮನೆಗೆ ಹೋಗದಿರುವ ತೀರ್ಮಾನ ಮಾಡಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿಯನ್ನು ಮಾಡಿದೆ.
ಎಲ್ನಾಜ್ ನೊರೌಜಿ ಅವರು ಸದ್ಯ ಬಾಲಿವುಡ್‌ನ ಹಿಟ್ ಫ್ರಾಂಚೈಸಿಯಲ್ಲಿ ಒಂದಾದ ''ಮಸ್ತಿ'' ನಾಲ್ಕನೇ ಭಾಗದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಲಂಡನ್‌ನಲ್ಲಿ ನಡೆಯುತ್ತಿದೆ. ಹೀಗಿರುವಾಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದರೆ ಚಿತ್ರದ ಮೇಲೆ ಪರಿಣಾಮವಾಗುತ್ತದೆ ಹಾಗೂ ನಿರ್ಮಾಪಕರಿಗೆ ಹೊರೆಯಾಗುತ್ತೆ ಎಂದುಕೊಂಡು ಎಲ್ನಾಜ್ ನೋ ಎಂದು ಹೇಳಿದ್ದಾರೆ. ಈ ಮೂಲಕ ಹಣ ಮುಖ್ಯ ಅಲ್ಲ ವೃತ್ತಿ ಬದ್ದತೆ ಮುಖ್ಯವೆನ್ನುವ ಸಂದೇಶವನ್ನು ಎಲ್ನಾಜ್ ನೊರೌಜಿ ಅವರು ರವಾನೆ ಮಾಡಿದ್ದಾರೆ.












Click it and Unblock the Notifications