Shivanna Birthday: ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ ಅಂದ್ರು ಶಿವಣ್ಣ!

ಬೆಂಗಳೂರು, ಜುಲೈ. 11: ಕರುನಾಡ ಚಕ್ರವರ್ತಿ ಎಂದು ಕನ್ನಡಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ಡಾ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬ ನಾಳೆ (ಜುಲೈ 12) ಇದೆ. ಪ್ರತಿವರ್ಷ ತಮ್ಮ ಅಭಿಮಾನಿಗಳ ಜೊತೆಗೆ ಶಿವಣ್ಣ ತಮ್ಮ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಾರೆ.

ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಹಿ ಘಟನೆಗಳೆ ತುಂಬಿಕೊಂಡಿದ್ದು, ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು ಸ್ಟಾರ್ ನಟರು ನಿರ್ಧರಿಸಿದ್ದಾರೆ. ನಟ ದರ್ಶನ್ ಜೈಲು ಸೇರಿರುವುದು ಇದಕ್ಕೆ ಕಾರಣವಾದರೂ ಕೂಡ ಅನೇಕರು ಇದನ್ನು ಬಾಯಿ ಬಿಟ್ಟು ಹೇಳುತ್ತಿಲ್ಲ. ಬೇರೆ ಕಾರಣಗಳನ್ನು ನೀಡಿ ಹುಟ್ಟುಹಬ್ಬ ಸಂಭ್ರಮಾಚರಣೆಯನ್ನು ಕಟ್ ಮಾಡುತ್ತಿದ್ದಾರೆ. ಈಗ ನಟ ಶಿವಣ್ಣ ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Dr Shiva Rajkumar not celebrating birthday with fans but sending a treat with Bhairati Ranagal

ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ

ತಾನು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಕ್ಕ ಎಂದಿರುವ ಅವರು, " ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ" ಎಂದಿದ್ದಾರೆ.

ಮುಂದುವರಿದು, "ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು ಹುಟ್ಟುಹಬ್ಬದಂದು ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ. ಜುಲೈ 12ರ 10:10ಕ್ಕೆ. ನಿಮ್ಮ ಆಶೀರ್ವಾದ ಸದಾ ಇರಲಿ. ಶಿವಣ್ಣ" ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ಜುಲೈ 12ಕ್ಕೆ ಬಹುನಿರೀಕ್ಷಿತ ಭೈರತಿ ರಣಗಲ್ ಸಿನಿಮಾದ ಅಪ್‌ಡೇಟ್ ಸಿಗಲಿದೆ.

Dr Shiva Rajkumar not celebrating birthday with fans but sending a treat with Bhairati Ranagal

ಶಿವಣ್ಣ ಬಹು ನಿರೀಕ್ಷಿತ 'ಉತ್ತರಕಾಂಡ' ಲುಕ್ ಬಿಡುಗಡೆ

ಇನ್ನು, ಶಿವಣ್ಣ ಹುಟ್ಟುಹಬ್ಬದ ಹಿನ್ನೆಲೆ ಸಾಲು ಸಾಲು ಸಿನಿಮಾಗಳು ಘೋಷಣೆಯಾಗುತ್ತಿವೆ. ಈಗಾಗಲೇ ಘೋಷಣೆಯಾಗಿರುವ ಸಿನಿಮಾಗಳ ಪೋಸ್ಟರ್‌ಗಳು, ಟೀಸರ್, ಟ್ರೈಲರ್‌ಗಳು ಬಿಡುಗಡೆಯಾಗುತ್ತಿವೆ. ಸದ್ಯ ನಟ ರಾಕ್ಷಸ ಡಾಲಿ ಧನಂಜಯ್ ವರ ಜೊತೆಗೆ ನಟಿಸಿರುವ ಉತ್ತರಕಾಂಡ ಸಿನಿಮಾದಿಂದ ಶಿವಣ್ಣ ಅವರ ಲುಕ್ ಬಿಡುಗಡೆಯಾಗಿದೆ.

ಕರುನಾಡ ಡಾ.ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡಿದೆ. "ಮಾಲೀಕ" ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ತಮ್ಮ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 'ಉತ್ತರಕಾಂಡ' ಒಂದು ಆಕ್ಷನ್‌ ಡ್ರಾಮಾವಾಗಿದ್ದು, ಇದು ರೋಹಿತ್‌ ಪದಕಿ ನಿರ್ದೇಶನವಿದೆ. ಚಿತ್ರಕ್ಕೆ ಖ್ಯಾತ ಗಾಯಕ, ಸಂಯೋಜಕ ಅಮಿತ್‌ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+