Dr Rajkumar: ಡಾ.ರಾಜ್‌ಕುಮಾರ್ ಮೊಮ್ಮಗ ಶೇರ್ ಮಾಡಿದ ಹಳೆಯ ಫೋಟೋ ವೈರಲ್!
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಹಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡಿಗರು ಈ ಫೋಟೋವನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ... ಅಭಿಮಾನಿ ದೇವರುಗಳೇ ಎನ್ನುತ್ತಿದ್ದರು. ಜನರೂ ಸಹ ಡಾ. ರಾಜ್‌ಕುಮಾರ್ ಅವರ ಬಗ್ಗೆ ಅಪಾರ ಗೌರವ ಹಾಗೂ ಅಭಿಮಾನವನ್ನು ಇರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ರಾಜ್‌ಕುಮಾರ್ ಅವರ ಯಾವುದೇ ವಿಷಯವಿದ್ದರೂ ಟ್ರೆಂಡ್ ಸೃಷ್ಟಿಯಾಗುತ್ತದೆ. ಇದೀಗ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಹಳೆಯ ಫೋಟೋ ವೈರಲ್ ಆಗಿದೆ. ಯಾವುದು ಫೋಟೋ ಹಾಗೂ ಶೇರ್ ಮಾಡಿಕೊಂಡು ಹೇಳಿರುವುದೇನು ಎನ್ನುವ ವಿವರ ಇಲ್ಲಿದೆ.
ಕನ್ನಡಿಗರ ಕಣ್ಮಣಿ, ಗಾನಗಂಧರ್ವ ಹಾಗೂ ಕನ್ನಡಿಗರ ಅಚ್ಚುಮೆಚ್ಚಿನ ನಟ ಡಾ.ರಾಜ್‌ಕುಮಾರ್ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿ ಇದ್ದಾರೆ. ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ಹಾಗೂ ಕನ್ನಡ ಹೋರಾಟಗಳಿಗೆ ಬೆಂಬಲ ತುಂಬಿ ಮುಂಚೂಣಿಯಲ್ಲಿ ನಿಂತಿದ್ದ ರಾಜ್‌ಕುಮಾರ್ ಅವರನ್ನು ಜನ ಮತ್ತೆ ಈಗ ನೆನಪು ಮಾಡಿಕೊಳ್ಳುವುದಕ್ಕೆ ಆ ಒಂದು ಫೋಟೋ ಕಾರಣ. ರಾಜ್ ಅವರು ಹಳೆಯ ಫೋಟೋವನ್ನು ಅವರ ಮೊಮ್ಮಗ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಏಪ್ರಿಲ್ 12ಕ್ಕೆ ಡಾ. ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿ 19 ವರ್ಷಗಳಾಗಿವೆ. ಆದರೆ ಅವರ ಅಭಿನಯ ಹಾಗೂ ಹಾಡುಗಳಿಂದ ಅವರು ಕನ್ನಡಿಗರಿಂದ ದೂರವಾಗಿದ್ದಾರೆ ಎನ್ನುವ ಭಾವವೇ ಇಲ್ಲ. ಇದೀಗ ಅವರ ಅಪರೂಪದಲ್ಲಿ ಅಪರೂಪದ ಫೋಟೋಗಳನ್ನು ಅವರ ಮೊಮ್ಮಗ ಹಾಗೂ ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಮ್‌ಕುಮಾರ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದು ಯಾವಾಗಿನ ಫೋಟೋ
ಈ ಫೋಟೋಗೆ ಧೀರೆನ್ ಅವರು, ಸಣ್ಣದಾಗಿ ಬರೆದುಕೊಂಡಿದ್ದಾರೆ. ರಾಜ್ ಅವರ ಅಪರೂಪದ ಚಿತ್ರವನ್ನು ಚಿಕ್ಕಮಾಮ ಅವರು ಅಜಯ್ ಸಿನಿಮಾದ ಸಮಯದಲ್ಲಿ ತೆಗೆದಿದ್ದರು. ಈ ಸಿನಿಮಾದ ವೇಷಭೂಷಣ ಪ್ರಯೋಗ ನಡೆಯುವ ಸಮಯದಲ್ಲಿ ಅಜ್ಜಿಯ ನೋಕಿಯಾ ಫೋನ್‌ನಲ್ಲಿ ಇದನ್ನು ತೆಗೆಯಲಾಗಿದೆ. ನನ್ನ ಅಜ್ಜನ ಅಪರೂಪದ ಫೋಟೋವನ್ನು ಹಂಚಿಕೊಳ್ಳುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ.
ಡಾ.ರಾಜ್‌ಕುಮಾರ್ ಫೋಟೋ ವೈರಲ್: ಇನ್ನು ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಿ ರಿಯಲ್ ಕನ್ನಡಿಗ 💛♥️ ಅಂತ ಕನ್ನಡಿಗರು ಕಮೆಂಟ್ ಮಾಡಿದ್ದಾರೆ. ಅಲ್ಲದೇ Have seen this earlier, Appaji 's charm never fades 😍, ಕೆಲವರು ಡಾ.ರಾಜ್‌ಕುಮಾರ್ ಅವರ ಸಂಭಾಷಣೆಗಳನ್ನೂ ನೆನಪಿಸಿಕೊಂಡಿದ್ದಾರೆ. ನಾವು ಕದಂಬರು ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು. ಕನ್ನಡಿಗರ ನೀತಿ ಕನ್ನಡಿಗರ ಸಂಸ್ಕೃತಿ ನಮ್ಮ ರಕ್ತದ ನರ ನಾಡಿಗಳಲ್ಲೂ ಹರಿದಾಡುತ್ತ ಇರುತ್ತದೆ.. ಇದು ನನ್ನ ಅಚ್ಚು ಮೆಚ್ಚಿನ ಸಂಭಾಷಣೆ ಮಯೂರ ಚಿತ್ರದ್ದು ಅಂತ ಹೇಳಿದ್ದಾರೆ.
-
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
‘ಲವ್ ಮಾಕ್ಟೇಲ್ 3’ ಕಥೆ ವಿವಾದ ಸುಖಾಂತ್ಯ: ಫಿಲ್ಮ್ ಚೇಂಬರ್ ಸಭೆಯಲ್ಲಿ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ ಸಂಧಾನ ಯಶಸ್ವಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.










Click it and Unblock the Notifications