Dolly Dhananjay: ಅಭಿಮಾನಿಗಳಿಗೆ ಸಣ್ಣ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!
Dolly Dhananjay: ನಟ ಡಾಲಿ ಧನಂಜಯ್ ಅವರ ಅಭಿಮಾನಿಗಳಿಗೆ ಸಣ್ಣದೊಂದು ಶಾಕ್ ಕೊಟ್ಟಿದ್ದಾರೆ. ಮದುವೆಯ ನಂತರ ಸಂಸಾರ ಹಾಗೂ ಸಿನಿಮಾ ವಿಚಾರಗಳಲ್ಲಿ ಬ್ಯೂಸಿ ಆಗಿರುವ ಅವರು ನಾನು ಈಗ ಮನೆಗೆ ಸರಿಯಾಗಿ (ಬೇಗ) ಹೋಗ್ತಿದ್ದೇನೆ. ಎಲ್ಲೆಲ್ಲೋ ಸುತ್ತೋದು ಸ್ವಲ್ಪ ಕಡಿಮೆಯಾಗಿದೆ ಅಂತಾ ಹೇಳಿದ್ದರು. ಅಲ್ಲದೇ ಹಲಗಲಿ ಚಿತ್ರದ ಟೀಸರ್ ಈಚೆಗೆ ರಿಲೀಸ್ ಆಗಿದ್ದು ಬೇಡರ ನಾಯಕನಾಗಿ ಡಾಲಿ ಅವರು ಕಾಣಿಸಿಕೊಂಡಿದ್ದಾರೆ. ಧನಂಜಯ್ ಅವರು ಈ ಮಾದರಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಈ ಹಿಂದೆಯೂ ಈ ಮಾದರಿಯ ಪ್ರಯೋಗಿಕ ಸಿನಿಮಾಗಳಲ್ಲಿ ಡಾಲಿ ಮಿಂಚಿರುವುದು ಇದೆ. ಇದೀಗ ಅವರ ಅಭಿಮಾನಿಗಳಿಗೆ ಪ್ರೀತಿಯಿಂದಲೇ ಡಾಲಿ ಪತ್ರವೊಂದನ್ನು ಬರೆದಿದ್ದಾರೆ.
ನನ್ನ ಪ್ರೀತಿಯ ಅಭಿಮಾನಿಗಳೇ, August 23, ಪ್ರತಿ ವರ್ಷ ನನ್ನ birthday ಅಂದ್ರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ ನಿಮ್ಮಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ - ಅದೇ ನನ್ನ ಶಕ್ತಿ. ಆದ್ರೆ ಈ ಸಲ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ.

Love you all ಪ್ರೀತಿಯಿಂದ, ಡಾಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಬೇಸರ: ಇನ್ನು ನಟ ಡಾಲಿ ಧನಂಜಯ್ ಅವರ ಈ ಪೋಸ್ಟ್‌ಗೆ ಅವರ ಅಭಿಮಾನಿಗಳು ಹಾಗೂ ಕನ್ನಡಿಗರು ಸಣ್ಣದೊಂದು ಅಸಾಮಾಧನ ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬದಂದು ಅವರನ್ನು ನೋಡಬೇಕು, ಕೇಕ್ ಕಟ್ ಮಾಡಬೇಕು, ಸೆಲ್ಫಿ ತೆಗೆದುಕೊಳ್ಳಬೇಕು ಹಾಗೂ ಸಣ್ಣದೊಂದು ಗಿಫ್ಟ್ ಕೊಡಬೇಕು ಎಂದು ಹಲವು ಅಭಿಮಾನಿಗಳು ಇಚ್ಛಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಕನ್ನಡ ನಟರೂ ಸಿಗದೆ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ರಘು ಎನ್.ಕೆ ಎನ್ನುವವರು, ಹುಟ್ಟುಹಬ್ಬದ ಶುಭಾಶಯಗಳು ಡಾಲಿ 🎂💐❤️ ಆದ್ರೂ ನೀವ್ ಸಿಗೋದೇ ಅಪರೂಪ ಅಣ್ಣ.. ಇತ್ತೀಚಿಗೆ ಇಲ್ಲಾ ಹೀರೋಗಳು ಕೂಡ ಹುಟ್ಟುಹಬ್ಬದ ದಿನ ಸಿಗೋಕೆ ಆಗಲ್ಲ ಅಂತ ಪೋಸ್ಟ್ ಹಾಕ್ತಾರೆ. ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ಹೇಳಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಸರ್... ಇವರು ಕನ್ನಡದ ಡಾಲಿ ಮುಂದಿನ ಹುಟ್ಟುಹಬ್ಬ ಅಭಿಮಾನಿಗಳ ಜೊತೆ ಮಾಡ್ತಾರೆ ಫುಲ್ ಜಾಲಿ...ಆದಷ್ಟು ಬೇಗ ಒಂದೊಳ್ಳೆ ಸಿನಿಮಾ ಬರ್ಲಿ Mr ಡಾಲಿ ಜೈ ಕನ್ನಡಾಂಬೆ .... Dhananjaya ❤️💛 ಎಂದು ಮತ್ತೊಬ್ಬ ಅಭಿಮಾನಿ ವಿಶ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ನಟರ ಮಾಮೂಲಿ ಪೋಸ್ಟ್ ಎಂದೂ ಕೆಲವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಹಲವು ನಟರು ಬರ್ತಡೆಗೆ ಎರಡು ಮೂರು ದಿನಗಳು ಇರುವಾಗ ಈ ಮಾದರಿಯ ಪೋಸ್ಟ್ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.












Click it and Unblock the Notifications