Darshan Thoogudeepa: ನಟ ದರ್ಶನ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದೇಗೆ ಗೊತ್ತಾ.?-ಇಲ್ಲಿದೆ ಮಾಹಿತಿ
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದು, ಈಗಾಗಲೇ ಇವರ ವಿರುದ್ಧ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದಾರೆ. ಅಲ್ಲದೆ, ಈ ಗ್ಯಾಂಗ್‌ನ ಮಾಡಿದ ಗನಾಂಧಾರಿ ಕೆಲಸಗಳು ಒಂದೊಂದೇ ಹೊರಬರುತ್ತಿದ್ದು, ಇದೀಗ ದರ್ಶನ್ ತಗ್ಲಾಕೊಳ್ಳಲು ಪ್ರಮುಖ ಕಾರಣಕರ್ತ ಯಾರು ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ದರ್ಶನ್ & ಗ್ಯಾಂಗ್ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಭೀಕರವಾಹಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ, ಈ ಗ್ಯಾಂಗ್ ಭಯಾನಕ ಕೃತ್ಯಗಳು ಬಗೆದಷ್ಟು ಬಯಾಲಗುತ್ತಲೇ ಇವೆ.

ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ನಟ ದರ್ಶನ್ ಮನೆ ಸೇರಿಕೊಂಡ ಬಳಿಕ ಎ14 ಆರೋಪಿ ಪ್ರದೋಷ್ ಬಾಸ್ ನಾನು ಎಲ್ಲಾ ನೋಡಿಕೊಳ್ಳುತ್ತೇನೆ. ನೀವು ಆರಾಮಾಗಿರಿ, ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ತುಂಬಿದ್ದನಂತೆ. ಬಳಿಕ ಪ್ರದೋಷ್ ಬನಶಂಕರಿ ತಲುಪುತ್ತಿದ್ದಂತೆ ಎ3 ಆರೋಪಿ ಆಗಿರುವ ಪವನ್ ರೇಣುಕಾಸ್ವಾಮಿ ಮೃತಪಟ್ಟಿರುದಾಗಿ ತಿಳಿಸಿದ್ದಾನಂತೆ.
ನಟ ದರ್ಶನ್‌ಗೂ ಈ ವಿಚಾರ ಗೊತ್ತಾಗುತ್ತಿದ್ದಂತೆ ಪ್ರದೋಷ್‌ನನ್ನು ಮನೆಗೆ ಕರೆಸಿದ್ದು, ಈ ವೇಳೆ ಎಷ್ಟೇ ಹಣ ಖರ್ಚಾದರೂ ಪರ್ವಾಗಿಲ್ಲ ನನ್ನ ಹಾಗೂ ಪವಿತ್ರಾ ಗೌಡ ಹೆಸರು ಹೊರಬರದಂತೆ ನೋಡಿಕೊಳ್ಳಬೇಕು ಎಂದು ಪ್ರದೋಷ್‌ಗೆ ತಾಕೀತು ಮಾಡಿದ್ದಂತೆ ದರ್ಶನ್. ಇನ್ನು ಇದಕ್ಕೆ ಒಪ್ಪಿಕೊಂಡು ವಿನಯ್ & ಪ್ರದೋಷ್ ಲಕ್ಷ ಲಕ್ಷ ಹಣವನ್ನು ದರ್ಶನ್ ಮನೆಯಿಂದಲೇ ತೆಗೆದುಕೊಂಡು ಹೋಗಿದ್ದು, ಇವರಿಬ್ಬರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಬಳಿಕ ಪ್ರದೋಷ್ ನಮ್ಮ ಹುಡುಗರೇ ಇದ್ದಾರೆ. ಶವವನ್ನು ಎಸೆದು ಅವರನ್ನೇ ಪೊಲೀಸರಿಗೆ ಸೆರೆಂಡರ್ ಆಗುವಂತೆ ಹೇಳಿದ್ದಂತೆ. ಪೊಲೀಸರು ಸುಮ್ನೆ ಇರ್ತಾರ ಅವರಾಗಿಯೇ ಬಂದು ಬಂದು ಶರಣಾದ ಮೇಲೆ ಎಲ್ಲಾರನ್ನೂ ವಿಚಾರಣೆ ನಡೆಸಿದ್ದು, ಈ ವೇಳೆ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದಾರೆ. ಆಗ ಪೊಲೀಸರಿಗೆ ಅನುಮಾನ ಬಂದು ಇದು ವಿಚಾರಣೆತನ್ನು ಮತ್ತಷ್ಟು ಚುರುಕುಗೊಳಿಸಿ ಶರಣಾದ ಆರೋಪಿಗಳಿಂದಲೇ ಸತ್ಯವನ್ನು ಕಕ್ಕಿಸಿದ್ದಾರೆ.
ಒಟ್ಟಿನಲ್ಲಿ ಪ್ರದೋಷ್ ಕೊಟ್ಟ ಈ ಐಡಿಯಾದಿಂದ ನಟ ದರ್ಶನ್ ಕೊನೆಗೂ ಪೊಲೀಸರ ಕೈಗೆ ಸಿಕ್ಕಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇನ್ನು ಇತ್ತೀಚೆಗಷ್ಟೇ ಜೈಲಿನಲ್ಲೇ ರಾಜಾತಿಥ್ಯ ಹಿನ್ನೆಲೆ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶೀಫ್ಟ್ ಮಾಡಲಾಗಿದೆ. ಹಾಗಾದರೆ ಇನ್ನೆಷ್ಟು ಅಸಲಿ ಸತ್ಯಗಳು ಹೊರಬೀಳಲಿವೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications