ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಂಡ್‌ ಟೇಬಲ್‌ ಪಾರ್ಟಿ ವ್ಯವಸ್ಥೆ ಮಾಡಿದ್ಯಾರು.? ನಟ ದರ್ಶನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇದು

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿ ಎರಡು ತಿಂಗಳುಗಳು ಕಳೆದಿವೆ. ಇನ್ನೂ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಫೋಟೋಗಳು ವೈರಲ್‌ ಆಗಿದ್ದು, ಈ ಹಿನ್ನೆಲೆ ಇದೀಗ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಹಾಗಾದರೆ ಜೈಲಿನಲ್ಲೇ ರೌಂಡ್‌ ಟೇಬಲ್ ಪಾರ್ಟಿಯನ್ನು ಆಯೋಜನೆ ಮಾಡಿದ್ಯಾರು ಎನ್ನುವ ಬಗ್ಗೆ ದರ್ಶನ್‌ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ನಿಯಮ ಮೀರಿ ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಜೊತೆ ನಟ ದರ್ಶನ್‌ ರೌಂಡ್‌ ಟೇಬಲ್‌ ಟೀ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಷ್ಟೇ ಸಾಲದೆಂಬಂತೆ ನಟ ದರ್ಶನ್‌ ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದು ಹರಟೆ ಹೊಡೆಯುವ ಫೋಟೋಗಳು ಸಾಮಾಜಿಕ ವೈರಲ್‌ ಆಗಿದ್ದು, ಇದಕ್ಕೆ ಭಾರೀ ಆಕ್ರೋಶಗಳು ಭುಗಿಲೆದ್ದಿದ್ದವು.

Do you know what did Actor Darshan say on round table party organizing in Parappana Agrahara Jail

ಬಳಿಕ ಎಚ್ಚೆತ್ತ ಸರ್ಕಾರ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದು, ಹೊಸ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿತು. ಅಲ್ಲದೆ, ಇದೀಗ ಪೊಲೀಸರು ನಟ ದರ್ಶನ್‌ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬೇರೆ ಬೇರೆ ವಾಹನಗಳಲ್ಲಿ ಕರೆದೊಯ್ದು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿದ್ದಾರೆ.

ಇದಕ್ಕೂ ಮುನ್ನ ಜೈಲಿನಲ್ಲಿ ರಾಜಾತಿಥ್ಯದ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸಿದ ವೇಳೆ ನಟ ದರ್ಶನ್‌ ಸ್ಫೋಟಕ ಮಾಹತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಪಾರ್ಟಿ ಆಯೋಜನೆಯ ಮುಖ್ಯ ಸೂತ್ರದಾರರು ಯಾರು ಎಂದು ಹೇಳಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪಾರ್ಟಿ ನಡೆದ್ದು ಯಾವತ್ತು?: ದರ್ಶನ್‌ ತನಿಖಾಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. "ಆಗಸ್ಟ್‌ 22ರಂದು ಸಂಜೆ ನಾನಿದ್ದ ಬ್ಯಾರಕ್‌ಗೆ ವ್ಯಕ್ತಿಯೊಬ್ಬ ಬಂದು, ನಮ್ಮ ಬಾಸ್‌ ನಾಗ ಬರಲು ಹೇಳಿದ್ದಾರೆ ಎಂದರು. ಆಗ ನಾನು ಎದ್ದು ಹೋದೆ. ಆ ವೇಳೆ ಆವರಣದಲ್ಲಿ ನಾಲ್ಕು ಕುರ್ಚಿ, ಟೇಬಲ್‌ ವ್ಯವಸ್ಥೆ ಮಾಡಲಾಗಿತ್ತು," ಎಂದರು.

"ಆವರಣಕ್ಕೆ ನಾನು ಹೋಗುತ್ತಿದ್ದಂತೆಯೇ ನಾಗ ಪರಿಚಯಿಸಿಕೊಂಡು, ಕುಳಿತುಕೊಳ್ಳಲು ಹೇಳಿದ. ಬಳಿಕ ಟೀ ಹಾಗೂ ಸಿಗರೇಟ್‌ ತೆಗೆದುಕೊಳ್ಳುವಂತೆ ಕೊಟ್ಟ. ಅವರೊಂದಿಗೆ ಸ್ವಲ್ಪ ಸಮಯ ಮಾತನಾಡಿದ್ದೆ. ನಾನು ಯಾರಿಗೂ ಸಿಗರೇಟ್‌, ಟೀ ಬೇಕು ಎಂದು ಕೇಳಿಲ್ಲ," ಎಂದು ದರ್ಶನ್‌ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆ ಮೊಬೈಲ್‌ನಲ್ಲಿ ರೌಡಿ ಶೀಟರ್‌ ಪುತ್ರನ ಜೊತೆ ವಿಡಿಯೋ ಕಾಲ್‌ ಮಾಡಿರುವ ಬಗ್ಗೆ ಮಾತನಾಡಿ, "ಧರ್ಮ ಯಾರೆಂಬುದು ಗೊತ್ತಿಲ್ಲ. ನನ್ನ ಕೋಣೆಗೆ ಬಂದವರು ಯಾರು? ಕರೆ ಮಾಡಿದವರು ಯಾರು ಎಂದು ತಿಳಿದಿಲ್ಲ. ವಿಡಿಯೋ ಕಾಲ್‌ ಮಾಡಿಕೊಂಡು ವ್ಯಕ್ತಯೊಬ್ಬ ಬಂದು ದರ್ಶನ್‌ ಸರ್ ಇದ್ದಾರೆಂದು ಹೇಳಿ ಮೊಬೈಲ್‌ ನನ್ನ ಕಡೆ ತಿರುಗಿಸಿದ. ಅತ್ತ ಯುವಕ ಹಾಯ್‌ ಎಂದು ಹೇಳಿದ್ದಕ್ಕೆ ನಾನು ಪ್ರತಿಕ್ರಿಯಿಸಿದೆ," ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ವಿಡಿಯೋ ಕಾಲ್‌ ಮಾಡಿದ್ದ ಸತ್ಯ ಹಾಗೂ ಧರ್ಮ ಎಂಬುವವರನ್ನೂ ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ "ವಿಡಿಯೋ ಕಾಲ್‌ ಮಾಡಿದ್ದ ಮೊಬೈಲ್‌ ಫೋನ್‌ ಸಿಕ್ಕಿಲ್ಲ. ಅದನ್ನು ನಾಶಪಡಿಸಿರುವ ಸಾಧ್ಯತೆಯಿದೆ. ಯಾರ ಹೆಸರಿನ ಸಿಮ್‌ನಲ್ಲಿ ಕರೆ ಮಾಡಲಾಗುತ್ತಿದೆ ಎಂದು ಪರಿಶೀಲಿಸಬೇಕಿದೆ," ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+