Get Updates
Get notified of breaking news, exclusive insights, and must-see stories!

Dwarakish: ದ್ವಾರಕೀಶ್‌ ನಿರ್ಮಾಪಕರಾಗಿ ಮಾಡಿದ ಹಿಟ್‌ ಸಿನಿಮಾಗಳಿವು

Dwarakish: ನಿರ್ಮಾಪಕನಾಗಿ, ನಿರ್ದೇಶಕನಾಗಿ, ಹಾಸ್ಯ ನಟ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಹಿರಿಯ ನಟ ದ್ವಾರಕೀಶ್‌ (81) ಅವರು ಇಂದು ಹೃದಯಾಘಾತದಿಂದ (ಏಪ್ರಿಲ್‌ 16) ನಿಧನರಾಗಿದ್ದಾರೆ. ಹಾಗಾದರೆ ನಿರ್ಮಾಪಕರಾಗಿ ಇವರು ಮಾಡಿದ ಹಿಟ್‌ ಸಿನಿಮಾಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಆಗಸ್ಟ್‌ 19, 1942ರಂದು ಜನಸಿದ್ದ ದ್ವಾರಕೀಶ್‌ ಅವರು, 1963ರಲ್ಲಿ ಕನ್ನಡ ಚಿತ್ರಗಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇನ್ನು ದ್ವಾರಕೀಶ್‌ ಬ್ಯಾನರ್‌ ಅಡಿಯಲ್ಲಿ 40ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ. ಈ ಪೈಕಿ ಹಿಟ್‌ ಸಿನಿಮಾಗಳು ಯಾವುವು ಎಂದು ಇಲ್ಲಿ ಗಮನಿಸಿ.

Do you know the top 15 Hit Sandalwood Movies Produced by Senior Actor Dwarakish

ದ್ವಾರಕೀಶ್‌ ನಿರ್ಮಾಣದ ಹಿಟ್‌ ಸಿನಿಮಾಗಳಿವು

* ಮಮತೆಯ ಬಂಧನ
* ಮೇಯರ್ ಮುತ್ತಣ್ಣ
* ಕುಳ್ಳ ಏಜೆಂಟ್ 000
* ಭಾಗ್ಯವಂತರು
* ಸಿಂಗಾಪುರ್‌ನಲ್ಲಿ ರಾಜಾಕುಳ್ಳ
* ಪ್ರೀತಿ ಮಾಡು ತಮಾಷೆ ನೋಡು
* ಗುರು ಶಿಷ್ಯರು
* ಪೆದ್ದ ಗೆದ್ದ
* ನ್ಯಾಯ ಎಲ್ಲಿದೆ
* ಪ್ರಚಂಡ ಕುಳ್ಳ
* ನೀ ಬರೆದ ಕಾದಂಬರಿ
* ನೀ ತಂದ ಕಾಣಿಕೆ
* ಡ್ಯಾನ್ಸ್ ರಾಜಾ ಡ್ಯಾನ್ಸ್
* ರಾಯರು ಬಂದರು ಮಾವನ ಮನೆಗೆ
* ಆಪ್ತಮಿತ್ರ
* ವಿಷ್ಣುವರ್ಧನ
* ಆಟಗಾರ
* ಚೌಕ
* ಅಮ್ಮ ಐ ಲವ್‌ ಯು

ಇನ್ನು ಅಡ್ಡ ವಾರಿಸು ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದದ್ದು, ಈ ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. 1983ರಲ್ಲಿ ಈ ಚಿತ್ರ ತೆರೆ ಕಂಡಿತ್ತು. ನಂತರ ನೀ ಬರೆದ ಕಾದಂಬರಿ, ಗುಂಗುವಾ ಸೇರಿದಂತೆ ಹಲವು ಚಿತ್ರಗಳಲ್ಲಿಇಬ್ಬರೂ ಕೆಲಸ ಮಾಡಿದ್ದಾರೆ.

ಇನ್ನು ಬಗ್ಗೆ ಟ್ವೀಟ್‌ ಮೂಲಕ ನಟ ರಜನಿಕಾಂತ್‌ ಪ್ರತಿಕ್ರಿಯಿಸಿ, ಈ ಸ್ನೇಹಕ್ಕೆ ಕುರುಹು ಎನ್ನುವಂತೆ ತಮ್ಮಿಬ್ಬರ ಸ್ನೇಹವನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. "ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು. ಅಲ್ಲದೆ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ," ಎಂದು ಬರೆದುಕೊಂಡಿದ್ದಾರೆ.

ಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಹಿರಿಯ ನಿರ್ದೇಶಕ ಭಾರ್ಗವ್ ಕೂಡ ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್ ಅವರ ಸಂಬಂಧಿಯೂ ಆಗಿರುವ ಭಾರ್ಗವ್, "ನಾನು ಮತ್ತು ದ್ವಾರಕೀಶ್ ಬಾಲ್ಯದ ಸ್ನೇಹಿತರು. ಶಾಲೇ-ಕಾಲೇಜು ಶಿಕ್ಷಣ ಒಟ್ಟಿಗೆ ಕಲಿತಿದ್ದೇವೆ. ಕಾಲೇಜು ದಿನಗಳಿಂದಲೇ ದ್ವಾರಕೀಶ್‌ಗೆ ನಟನೆಯಲ್ಲಿ ಆಸಕ್ತಿ ಇತ್ತು. ಅವರ ಅಣ್ಣ ಮೈಸೂರಲ್ಲಿ ಅಂಗಡಿ ಹಾಕಿ ಕೊಟ್ಟಿದ್ದರು. ಆದರೆ ಅವರು ಅಂಗಡಿ ಬಿಟ್ಟು ಬೆಂಗಳೂರಿಗೆ ನಟ ಆಗುವುದಕ್ಕೆ ಬಂದರು. ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನನಗೆ ಅವರು ಅನ್ನದಾತ, ಅವರಿಂದಲೇ ನಾನು ಚಿತ್ರರಂಗಕ್ಕೆ ಬಂದೆ. ದ್ವಾರಕೀಶ್ ನನ್ ಗುರು ಅನ್ನದಾತ," ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+