D.Boss: ಫ್ಯಾನ್ಸ್ ನೀವು ಸರಿ ಇದ್ದಿದ್ರೆ ದರ್ಶನ್‌ನ ಕರೆಸ್ತಿದ್ವಿ!: ಡಿಕೆ ಸುರೇಶ್ ಹೇಳಿದ್ದೇನು
ಸ್ಯಾಂಡಲ್‌ವುಡ್ ದಾಸ, ಡಿ.ಬಾಸ್ ದರ್ಶನ್ ತೂಗುದೀಪ (Darshan Thoogudeepa) ಸದ್ಯ 'ಡೆವಿಲ್' (Devil Shooting) ಸಿನಿಮಾದ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರ ವಿರುದ್ಧದ ರೇಣುಕಾಸ್ವಾಮಿ ಪ್ರಕರಣದ ತನಿಖೆ, ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯುತ್ತಿದೆ. ರಾಮನಗರ ಕರಗ ಮಹೋತ್ಸವ 2025 ವೇಳೆ (Ramanagara Karaga 2025) ದರ್ಶನ್ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಅವರು ನೀಡಿದ್ದ ಹೇಳಿಕೆ ವೈರಲ್ ಆಗುತ್ತಿದೆ. ಡಿ.ಬಾಸ್ ಅಭಿಮಾನಿಗಳಿಗೆ 'ನೀವು ಸರಿಯಾಗಿದ್ದರೆ ಅವರನ್ನು ಕರೆಸಬಹುದಿತ್ತು..' ಎಂದು ನೇರವಾಗಿ ಹೇಳಿದ್ದಾರೆ. ಇದರಿಂದ ಡಿ.ಬಾಸ್ ಅಭಿಮಾನಿಗಳಿಗೆ ಬೇಸರವಾಯಿತಾ?, ಅಷ್ಟಕ್ಕೂ ಡಿಕೆ ಸುರೇಶ್ ಅವರ ಆ ಮಾತು ಯಾಕೆ ಹೇಳಿದರು? ಇಲ್ಲಿದೆ ವಿವರ.
ರಾಮನಗರದ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಐತಿಹಾಸಿಕ ಕರಗ ಮಹೋತ್ಸವ 2025 ಇತ್ತೀಚೆಗೆ ಜರುಗಿತು. ಈ ವೇಳೆ ಅನೇಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಅನೇಕ ಕಲಾವಿದರು, ಗಣ್ಯಮಾನ್ಯರು ಆಗಮಿಸಿದ್ದರು. ಹೀಗೆ ಕಾರ್ಯಕ್ರಮದ ವೇದಿಕೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಡಿ.ಬಾಸ್ ದರ್ಶನ್ ಮತ್ತು ಅವರ ಫ್ಯಾನ್ಸ್ ಕುರಿತು ನೀಡಿದ ಹೇಳಿಕೆ ಸದ್ದು ಮಾಡುತ್ತಿದೆ. ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.

ಡಿ.ಬಾಸ್...ಡಿ.ಬಾಸ್...
ನಟ ವಿ.ರವಿಚಂದ್ರನ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ರವಿಚಂದ್ರನ್ ಅವರು ಸನ್ಮಾನ ಸ್ವೀಕರಿಸಿದರು. ನೆರೆದಿದ್ದವರನ್ನು ರಂಜಿಸಲು ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಬಂದಿದ್ದರು. ಇದೇ ವೇಳೆ ವೇದಿಕೆ ಮೇಲೆ ಡಿಕೆ ಸುರೇಶ್ ಅವರು ಮೈಕ್ ಹಿಡಿದು ಮಾತನಾಡುವಾಗ ಕೆಲವರು ಡಿ.ಬಾಸ್...ಡಿ.ಬಾಸ್...ಎಂದು ಜೋರಾಗಿ ಕೂಗಿದರು.
ಕೂಡಲೇ ಪ್ರತಿಕ್ರಿಯಿಸಿದ ಡಿಕೆ ಸುರೇಶ್ ಅವರು, ''ನಾನು ಅವರನ್ನು (ದರ್ಶನ್) ಕರೆಯಬೇಕು ಎಂದು ಮಾತನಾಡಿದ್ದೆ. ಆದ್ರೆ ನೀವು ಸರಿ ಇಲ್ಲವಲ್ಲ. ನೀವ್ ಸರಿ ಇಲ್ಲ.. ಅದಕ್ಕೆ ಕರೆಸಿಲ್ಲ. ನೀವು ಸರಿ ಅಂದ್ರು, ಬೇರೆಯವರು ಸರಿ ಇಲ್ಲ ಅಂತಾರೆ. ಅವರು 24/7 ಅಂತಾ ರನ್ ಮಾಡಿ ಬಿಡ್ತಾರೆ. ನಿಮಗೆ ಗೊತ್ತಾಯ್ತಾ, ಗೊತ್ತಾಯ್ತಾ ಇಲ್ಲವಾ! ಅದಿಕ್ಕೆ ಹುಷಾರಾಗಿರಬೇಕು. ಮುಂದಿನ ವರ್ಷ ಎಲ್ಲ ತೀರ್ಮಾನ ಆದ ಬಳಿಕ ಕರೆದುಕೊಂಡು ಬರೋಣ'' ಎಂದು ಅವರು ಹೇಳಿದರು. ಕೆಲವು ಡಿ.ಬಾಸ್ ಅಭಿಮಾನಿಗಳು ಈ ಮಾತಿಗೂ ಕೇಕೆ ಹೊಡೆದದ್ದು ಕಂಡು ಬಂತು.
ಡಿಕೆ ಸುರೇಶ್ ಹೇಳಿದ್ದು ಯಾವ ಅರ್ಥದಲ್ಲಿ..?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿ. ದರ್ಶನ್ ಸೇರಿ 17 ಮಂದಿ ಸಹಚರರನ್ನು ಬಂಧಿಸಿದ್ದು, ಅವರೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ದರ್ಶನ್ ವಿದೇಶದಲ್ಲಿ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಕೊಲೆ ಆರೋಪ ಹೊತ್ತ ದರ್ಶನ್ ಅನ್ನು ಕರೆಸಿದರೆ ಮಾಧ್ಯಮದವರು ದಿನಪೂರ್ತಿ ಅದನ್ನೆ ಪ್ರಸಾರ ಮಾಡುತ್ತಾರೆ ಎಂಬರ್ಥದಲ್ಲಿ ಡಿಕೆ ಸುರೇಶ್ ಹೇಳಿದ್ದಾರೆ.
ಡಿ.ಬಾಸ್ ಫ್ಯಾನ್ಸ್‌ಗೆ ಗುನ್ನ ಕೊಟ್ರಾ!
ನೀವು (ಫ್ಯಾನ್ಸ್) ದರ್ಶನ್ ಇದಾರೆ ಅಂತ ಹೇಳಿದರು. ಬೇರೆಯವರು (ಮಾಧ್ಯಮ) ಸರಿ ಇಲ್ಲ ಅಂತಾರೆ. ಇದು ಸೂಕ್ತ ಸಮಯ ಅಲ್ಲ. ಅವರ ಪ್ರಕರಣ ಏನೆಂದು ಇತ್ಯರ್ಥ ಆದ ಬಳಿಕ, ದೋಷ ಮುಕ್ತವಾದರೆ ಮುಂದಿನ ವರ್ಷ ಕರೆದುಕೊಂಡು ಬರೋಣ. ಇಂತಹ ವೇಳೆ ಕರಗಮಹೋತ್ಸವ ಕರೆದುಕೊಂಡು ಬಂದರೆ ಸಾಕಷ್ಟು ಆರೋಪ ಎದುರಾಗಬಹುದು. 'ಕೊಲೆ ಆರೋಪಿ ದೇವರ ಕಾರ್ಯಕ್ರಮ ಅತಿಥಿ' ಹಾಗೇ ಹೀಗೆ ಎಂದು ದೂರಬಹುದು. ಅಲ್ಲದೇ ಅಭಿಮಾನಿಗಳು ದರ್ಶನ್ ಬಂಧನ ಬಳಿಕ ಹೇಗೆಲ್ಲ ನಡೆದುಕೊಂಡರು ಎಂಬದೆಲ್ಲ ಗಮನಿಸಿ ಡಿಕೆ ಸುರೇಶ್ ಅವರು ನೀವ್ ಸರಿ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಈ ಬಗ್ಗೆ ಡಿ.ಬಾಸ್ ಅಭಿಮಾನಿಗಳೇ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.











Click it and Unblock the Notifications