ಯಾವ ಡಿ ಬಾಸ್ ಇಲ್ಲ ಸುಮ್ನಿರ್ಬೇಕು: ನಟ ದರ್ಶನ್‌ ಅಭಿಮಾನಿಗಳಿಗೆ ಸಿಎಂ ಡಿಕೆಶಿ ವೇದಿಕೆಯಲ್ಲೇ ವಾರ್ನಿಂಗ್‌

Actor Darshan Fans: ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊಟ್ಟ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ವೇದಿಕೆ ಮೇಲೆ ನಿಂತು ಮಾತನಾಡುವಾಗ ಅಲ್ಲಿದ್ದ ದರ್ಶನ್ ಅಭಿಮಾನಿಗಳು ಡಿ ಬಾಸ್‌.. ಡಿ ಬಾಸ್‌ ಎಂದು ಜೋರಾಗಿ ಕೂಗಲಾರಂಭಿಸಿದರು. ಇದಕ್ಕೆ ಸಿಎಂ ನೀಡಿದ ರಿಯಾಕ್ಷನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದಾರೆ. ಈ ಹಿನ್ನೆಲೆ ಕನಕಪುರದಲ್ಲಿ ಅಭಿಮಾನಿಗಳು ನೂತನ ಸಿಎಂ ಡಿಕೆ ಶಿವಕುಮಾರ್ ಮುಂದೆ ನಮ್ಮ ಬಾಸ್‌ ಅನ್ನು ಬಿಡುಗಡೆ ಮಾಡಿಸಿ ಎಂದು ಹೇಳಿದರು. ಅಷ್ಟೇ ಅಲ್ಲದೆ ಡಿ..ಬಾಸ್‌ ಎನ್ನುವ ಪದವನ್ನು ಮತ್ತೆ ಕೂಗಲಾರಂಭಿಸಿದರು. ಇದರಿಂದ ಡಿಕೆಶಿ ಗರಂ ಆಗಿ ಗುಡುಗಿದರು.

DK Shivakumar Reacts to Darshan Fans D Boss Chants in Kanakapura Video Viral on Social media

ದರ್ಶನ್ ಅಭಿಮಾನಿಗಳಿಗೆ ಡಿಕೆಶಿ ಹೇಳಿದ್ದೇನು?

ಸಿಎಂ ಆದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಅವರು ಬೆಳಗ್ಗೆಯಿಂದ ರಾತ್ರಿಯವರೆಗೂ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ರೋಡ್ ಶೋ ಮಾಡಿ ಜನರಿಗೆ ಧನ್ಯವಾದ ಸಲ್ಲಿಸಿರು. ಭಾಷಣ ಮಾಡಿ ತಮ್ಮ ಸ್ವಕ್ಷೇತ್ರ ಜನರಿಗೆ ಹಲವು ಭರವಸೆಗಳನ್ನು ನೀಡಿದರು. ಇದೇ ವೇಳೆ ದರ್ಶನ್​ ಅಭಿಮಾನಿಗಳು ಕಾರ್ಯಕ್ರಮದ ವೇದಿಕೆ ಮುಂದೆ 'ಡಿ ಬಾಸ್.. ಡಿ ಬಾಸ್ ಎಂದು ಕೂಗಿ ದರ್ಶನ್​ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಿ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.

ವೇದಿಕೆಯಲ್ಲೇ ವಾರ್ನಿಂಗ್‌ ಕೊಟ್ಟ ಸಿಎಂ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್, 'ಏಯ್ ಯಾವ್ ಡಿ ಬಾಸೂ ಇಲ್ಲ, ಸುಮ್ನಿರಯ್ಯಾ' ಎಂದು ದರ್ಶನ್‌ ಅಭಿಮಾನಿಗಳಿಗೆ ವೇದಿಕೆಯಲ್ಲೇ ವಾರ್ನಿಂಗ್‌ ಮಾಡಿದ್ದಾರೆ. ಅಲ್ಲದೆ ಜೋರಾಗಿ ಕಿರುಚುತ್ತಿದ್ದವರನ್ನು ಗದರಿದ ಅವರು, 'ಗಲಾಟೆ ಮಾಡಿದ್ರೆ ಪೊಲೀಸರನ್ನ ಕರೆಸಿ ಲಾಠಿ ಏಟು ಕೊಡಿಸುತ್ತೇನೆ,' ಎಂದು ಗದರಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+