Challenging Star: ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಾಲಿ ಧನಂಜಯ್ ಬಗ್ಗೆ ಹೇಳಿದ್ದೇನು?
ಕನ್ನಡ ಸಿನಿಮಾ ರಂಗದ ಪಾಲಿನ ನಟರಾಕ್ಷಸ ಮತ್ತು ಭಾರತೀಯ ಚಿತ್ರರಂಗದಲ್ಲಿ ಮಿಂಚು ಹರಿಸುತ್ತಿರುವ ಡಾಲಿ ಧನಂಜಯ್ ತನ್ನ ಜೊತೆ ಇರುವವರನ್ನೂ ಬೆಳೆಸುತ್ತಿದ್ದಾರೆ. ಹೀಗಾಗಿ ಅತ್ಯುತ್ತಮ ಕಥೆಗಳನ್ನ ಆಯ್ಕೆ ಮಾಡಿಕೊಂಡು, ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇದು ಕನ್ನಡ ಸಿನಿಮಾ ರಂಗಕ್ಕೆ ಮಾದರಿ ಆಗಿದ್ದು, ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ದರ್ಶನ್ ಕೂಡ ಡಾಲಿ ಧನಂಜಯ್‌ಗೆ ಸಾಥ್ ಕೊಟ್ಟಿದ್ದಾರೆ.
ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ 3ನೇ ಚಿತ್ರ 'ಟಗರು ಪಲ್ಯ'. ಹೀಗೆ ಫಸ್ಟ್ ಲುಕ್‌ನಿಂದಲೇ ಹವಾ ಎಬ್ಬಿಸಿರುವ 'ಟಗರು ಪಲ್ಯ' ಸಿನಿಮಾ ಈಗಾಗಲೇ ಕನ್ನಡಿಗರ ಕುತೂಹಲ ಕೆರಳಿಸಿದೆ. ಡಾಲಿ ಅಭಿನಯದ ಹೆಡ್ & ಬುಷ್ ರಿಲೀಸ್‌ಗೂ ಮೊದಲು ಟಗರು ಪಲ್ಯ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಈಗ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರು ಆಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಡಾಲಿಗೆ ಸಾಥ್ ನೀಡಿದ್ದಾರೆ. ಹಾಗಾದರೆ ಡಾಲಿ ಬಗ್ಗೆ ನಟ ದರ್ಶನ್ ಹೇಳಿದ್ದೇನು?

ಡಾಲಿ ಧನಂಜಯ್ ನಿರ್ಮಿಸಿರುವ 'ಟಗರು ಪಲ್ಯ' ಟ್ರೇಲರ್ ರಿಲೀಸ್ ಆಗಿದ್ದು, ನಟ ದರ್ಶನ್ ಕೂಡ ಸಾಥ್ ನೀಡಿದ್ದರು. ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ, ನಟ ದರ್ಶನ್ ಕೂಡ ಭಾಗಿಯಾಗಿದ್ದರು. ಡಾಲಿ ನಿರ್ಮಾಣದ ಟಗಲು ಪಲ್ಯ ಟ್ರೇಲರ್ ರಿಲೀಸ್ ಮಾಡಿದ ದಚ್ಚು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಹಾಗೇ ನಟಿ ತಾರಾ, ನಟ ರಂಗಾಯಣ ರಘು, ನಟಿ ಅಮೃತಾ, ನಾಗಭೂಷಣ್ ಸೇರಿ ನೀನಾಸಂ ಸತೀಶ್ ಹಾಗೂ ನೆನಪಿರಲಿ ಪ್ರೇಮ್ ಟಗರು ಪಲ್ಯ ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು?
ಸಮಾರಂಭದಲ್ಲಿ ಟ್ರೇಲರ್ ರಿಲೀಸ್ ಮಾಡಿದ ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್, ಸಿನಿಮಾ ತಂಡಕ್ಕೆ ಶುಭ ಕೋರಿದರು. ಟ್ರೇಲರ್ ನೋಡಿ ಖುಷಿ ಆಯಿತು. 7 ಸ್ಟಾರ್ ಸುಲ್ತಾನ್ ಚೆನ್ನಾಗಿ ಆಕ್ಟ್ ಮಾಡಿದೆ. ನಟಿ ಅಮೃತಾ ಅವರಿಗೆ ಸ್ವಾಗತ. ನಮ್ಮದು ಚಿಕ್ಕ ಇಂಡಸ್ಟ್ರಿ, ನೀಟ್ ಇಂಡಸ್ಟ್ರಿ. ಇದು ನಮ್ಮ ಮಣ್ಣಿನ ಸೊಗಡಿರುವ ಸಿನಿಮಾ. ಟ್ರೇಲರ್ ಮೂಲಕವೇ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಪ್ರತಿ ಒಂದು ಸೀನು, ನಗಲು ಏನು ಬೇಕು ಎಲ್ಲವೂ ಇದೆ ಎಂದರು ನಟ ದರ್ಶನ್.

ಡಾಲಿಗೆ ದಚ್ಚು ಫುಲ್ ಮಾರ್ಕ್ಸ್!
ಹೀರೋಗಳು ಏನು ಮಾಡುತ್ತಿದ್ದಾರಯ್ಯ ಅಂತಾ ತುಂಬಾ ಜನ ಕೇಳುತ್ತಾರೆ. ನಾವು ಪ್ರೊಡ್ಯೂಸ್ ಮಾಡ್ತಿದ್ದೀವಿ. ಈ ಸಾಲಲ್ಲಿ ಡಾಲಿ ಮೊದಲು ನಿಲ್ಲುತ್ತಾರೆ ಇದು ಧನಂಜಯ್ ನಿರ್ಮಾಣದ 3ನೇ ಸಿನಿಮಾ. ಆತ ಕಷ್ಟಪಟ್ಟು ಈಗ ಮೇಲೆ ಬಂದಿದ್ದು ಬಡವರ ಮಕ್ಕಳು ದೊಡ್ಡವರು ಆಗಬೇಕು. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾಗಭೂಷಣ್ ಫ್ಯಾನ್ ನಾನು. ನಾವು ಚಿಕ್ಕ ಕಲಾವಿದರು ನಿಮ್ಮ ಬ್ಯಾನರ್ ಅಡಿ ನನಗೂ ಅವಕಾಶ ಕೊಡಿ ಎಂದು ನಟ ಧನಂಜಯ್ ಅವರ ಕಾಲೆಳೆದರು ಚಾಲೆಂಜಿಂಗ್ ಸ್ಟಾರ್ ದರ್ಶನ್.
'ಟಗರು ಪಲ್ಯ' ಸಿನಿಮಾಗೆ ಯುವ ನಿರ್ದೇಶಕ ಉಮೇಶ್ ಕೃಪಾ ಡೈರೆಕ್ಷನ್ ಇದೆ. ಉಮೇಶ್‌ಗೆ ಇದು ಮೊದಲನೇ ಚಿತ್ರ. ಹಾಗೇ ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಈ ಸಿನಿಮಾ ಕಥೆ ಕೆತ್ತಿದ್ದಾರೆ ನಿರ್ದೇಶಕ ಉಮೇಶ್ ಕೃಪಾ. ಹೀಗಾಗಿ 'ಟಗರು ಪಲ್ಯ' ಸಿನಿಮಾ ತನ್ನ ಫಸ್ಟ್ ಲುಕ್‌ನಿಂದ ಕನ್ನಡಿಗರ ಗಮನ ಸೆಳೆದಿತ್ತು. ಅಕ್ಟೋಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.












Click it and Unblock the Notifications