National Film Awards: ಅಬ್ಬರಿಸಿದ RRR, ಆಲಿಯಾ ಭಟ್‌ಗೆ ಜಾಕ್‌ಪಾಟ್!
ಬಹುನಿರೀಕ್ಷಿತ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಪ್ರಕಟವಾಗಿವೆ. ಈ ಬಾರಿ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಹಲವು ಸಿನಿಮಾ ನಡುವೆ ಭಾರಿ ಪೈಪೋಟಿ ಇತ್ತು. ಆದರೆ ಆಯ್ಕೆಗಾರರು ಅಳೆದು ತೂಗಿ ಪ್ರಶಸ್ತಿ ಪಟ್ಟಿಗೆ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ತಮ್ಮ ಆರ್ಭಟ ಮುಂದುವರಿಸಿದ್ದು, ಪ್ರಶಸ್ತಿ ಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಯಿತು. ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದೆ. ಇನ್ನು ಈ ಪ್ರಶಸ್ತಿ ಪಟ್ಟಿಗೆ ಆಯ್ಕೆ ಮಾಡಲು ಕೆಲವು ಮಾನದಂಡ ಇತ್ತು. ಹಾಗೇ ಸೆಪ್ಟೆಂಬರ್ 1, 2021ರಿಂದ ಆಗಸ್ಟ್ 31, 2022ರ ನಡುವೆ ರಿಲೀಸ್ ಆಗಿರುವ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅದರಲ್ಲೂ ಕನ್ನಡಿಗರ ಕೆಜಿಎಫ್-2 ಕೂಡ ಪ್ರಶಸ್ತಿ ಕಣದಲ್ಲಿ ಅಬ್ಬರಿಸಿತ್ತು. ಹಾಗಾದರೆ ಯಾವ ಯಾವ ಸಿನಿಮಾಗೆ ಅವಾರ್ಡ್ ಸಿಕ್ಕಿದೆ? ಮುಂದೆ ಓದಿ.

ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳು...
ಕೊರೊನಾ ಕಾರಣಕ್ಕೆ 2020ರ ನಂತರ ಸಿನಿಮಾ ಇಂಡಸ್ಟ್ರಿ ನಲುಗಿ ಹೋಗಿತ್ತು. ಅದರಲ್ಲಿ ಬಾಲಿವುಡ್‌ಗೆ ಭಾರಿ ಪೆಟ್ಟು ಬಿದ್ದಿತ್ತು. ಹೀಗೆ ಸಾಲು ಸಾಲು ಸೋಲಿನ ಸುಳಿಯಲ್ಲಿ ಹಿಂದಿ ಚಿತ್ರೋದ್ಯಮ ನಲುಗಿತ್ತು. ಆದರೆ ಸೆಪ್ಟೆಂಬರ್ 1, 2021ರಿಂದ ಆಗಸ್ಟ್ 31, 2022ರ ನಡುವೆ ಎಲ್ಲಾ ಭಾಷೆಗಳಲ್ಲೂ ಅತ್ಯುತ್ತಮ ಚಿತ್ರಗಳೇ ರಿಲೀಸ್ ಆದವು. 'ಜೈ ಭೀಮ್', 'ಕೆಜಿಎಫ್ ಚಾಪ್ಟರ್- 2', 'ಗಂಗೂಬಾಯಿ ಕಥಿಯಾವಾಡ', 'ತಲೈವಿ', 'ಕರ್ಣನ್', 'ರಾಕೆಟ್ರಿ', 'ಪುಷ್ಪ', 'ಮಿನ್ನಲ್ ಮುರಳಿ', 'ನಾಯಟ್ಟು' ಮತ್ತಿತರ ಸಿನಿಮಾಗಳ ನಡುವೆ ಅವಾರ್ಡ್ ಕಾದಾಟ ಜೋರಾಗಿತ್ತು. ಇದೀಗ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಪ್ರಶಸ್ತಿ ಪಡೆದ ಚಿತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ ಮುಂದೆ ಓದಿ.
ಯಾವ ಯಾವ ಸಿನಿಮಾಗೆ ಪ್ರಶಸ್ತಿ?
'777 ಚಾರ್ಲಿ' ಅತ್ಯುತ್ತಮ ಕನ್ನಡ ಸಿನಿಮಾ
'ಸರ್ದಾರ್ ಉದಮ್' (ಅತ್ಯುತ್ತಮ ಹಿಂದಿ ಸಿನಿಮಾ)
ಚೆಲ್ಲೋ ಶೋ (ಅತ್ಯುತ್ತಮ ಗುಜರಾತಿ ಸಿನಿಮಾ)
ಏಕ್ದ ಕಾಯ್ ಜಾಲ (ಅತ್ಯುತ್ತಮ ಮರಾಠಿ ಸಿನಿಮಾ)
ಹೋಮ್ (ಅತ್ಯುತ್ತಮ ಮಲಯಾಳಂ ಸಿನಿಮಾ)
ಉಪ್ಪೆನಾ (ಅತ್ಯುತ್ತಮ ತೆಲುಗು ಸಿನಿಮಾ)
ಸಾಹಸ ನಿರ್ದೇಶಕ- RRR (ಅತ್ಯುತ್ತಮ ಸಾಹಸ ಸಂಯೋಜನೆ)
ಕೊರಿಯೋಗ್ರಫಿ- RRR (ಅತ್ಯುತ್ತಮ ನೃತ್ಯ ನಿರ್ದೇಶನ)
ಸ್ಪೆಷಲ್ ಎಫೆಕ್ಟ್- RRR (ಸ್ಪೆಷಲ್ ಎಫೆಕ್ಟ್)
ದೇವಿಶ್ರೀ ಪ್ರಸಾದ್- ಅತ್ಯುತ್ತಮ ಸಂಗೀತ ನಿರ್ದೇಶನ (ಪುಷ್ಪ)
ಎಂಎಂ ಕೀರವಾಣಿ- ಅತ್ಯುತ್ತಮ ಹಿನ್ನೆಲೆ ಸಂಗೀತ(RRR)
RRR- ಅತ್ಯುತ್ತಮ ಜನಪ್ರಿಯ ಚಿತ್ರ
ಅಲ್ಲು ಅರ್ಜುನ್- ಅತ್ಯುತ್ತಮ ನಟ (ಪುಷ್ಪ)
ಆಲಿಯಾ ಭಟ್- ಅತ್ಯುತ್ತಮ ನಟಿ (ಗಂಗೂಬಾಯಿ ಕಥಿಯಾವಾಡ)
ಕೃತಿ ಸನೂನ್- ಅತ್ಯುತ್ತಮ ನಟಿ (ಮಿಮಿ)
'ರಾಕೆಟ್ರಿ' - ಅತ್ಯುತ್ತಮ ಹಿಂದಿ ಸಿನಿಮಾ
ನಿಖಿಲ್ ಮಹಾಜನ್- ಅತ್ಯುತ್ತಮ ನಿರ್ದೇಶಕ, ಗೋಧಾವರಿ (ಮರಾಠಿ)
ಶ್ರೇಯಾ ಘೋಷಾಲ್- ಅತ್ಯುತ್ತಮ ಗಾಯಕಿ (ಇರವಿನ್ ನಿಜಾಲ್)
ಅನುನಾದ್- ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ(ಅಸ್ಸಾಮಿ)
ಗಂಗೂಬಾಯಿ ಕಥಿಯಾವಾಡಿ- ಅತ್ಯುತ್ತಮ ಸಂಕಲನ
ಅತ್ಯುತ್ತಮ ಸಂಭಾಷಣೆ- ಗಂಗೂಬಾಯಿ ಕಥಿಯಾವಾಡಿ
ಪಂಕಜ್ ತ್ರಿಪಾಠಿ- ಅತ್ಯುತ್ತಮ ಪೋಷಕ ನಟ (ಮಿಮಿ)
ಪಲ್ಲವಿ ಜೋಶಿ- ಅತ್ಯುತ್ತಮ ಪೋಷಕ ನಟಿ (ದಿ ಕಶ್ಮೀರ್ ಫೈಲ್ಸ್)
ಶೇರ್‌ಷಾ- ತೀರ್ಪುಗಾರರ ವಿಶೇಷ ಬಹುಮಾನ
ಮುಖ್ಯೋಫಾಧ್ಯಾಯ್- ಅತ್ಯುತ್ತಮ ಛಾಯಾಗ್ರಹಣ (ಸರ್ದಾರ್ ಉದ್ಧಮ್)
ಸಿಂಗ್ ಡಿಸೋಜಾ - ಅತ್ಯುತ್ತಮ ಮೇಕಪ್(ಗಂಗೂಬಾಯಿ ಕಥಿಯಾವಾಡಿ)
ವೀರಕಪೂರ್ ಇ- ಅತ್ಯುತ್ತಮ ವಸ್ತ್ರಾಲಂಕಾರ (ಸರ್ದಾರ್ ಉದ್ಧಮ್)
ಚಂದ್ರಭೋಸ್- ಅತ್ಯುತ್ತಮ ಸಾಹಿತ್ಯ (ಕೊಂಡಪೋಲಂ)
ದಿ ಕಾಶ್ಮೀರ್ ಫೈಲ್ಸ್- ನ್ಯಾಷನಲ್ ಇಂಟಿಗ್ರೇಷನ್

ನಾನ್ ಫೀಚರ್
'ಬಾಳೇ ಬಂಗಾರ'- ಸ್ಪೆಷನ್ ಮೆನ್ಷನ್
ಚಾಂದ್ ಸಾನ್‌ಸೆ- ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ
ಲುಕಿಂಗ್ ಫಾರ್ ಚಾಲನ್- ಅತ್ಯುತ್ತಮ ತನಿಖಾ ಸಿನಿಮಾ
ಸಿರ್ಪಂಗಲಿನ್ ಸಿರ್ಪಗಲಿಲ್- ಅತ್ಯುತ್ತಮ ಶೈಕ್ಷಣಿಕ ಸಿನಿಮಾ
ರೇಖಾ- ತೀರ್ಪುಗಾರರ ವಿಶೇಷ ಪ್ರಶಸ್ತಿ
ರುಕುಮಾತಿರ್ ದುಕುಮಾಜಿ -ಅತ್ಯುತ್ತಮ ಬಯೋಗ್ರಫಿ ಸಿನಿಮಾ (ಬಂಗಾಲಿ)
ಮುನ್ನಂ ವಲೈವ್- ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ (ಮಲಯಾಳಂ)
ಟಿಎನ್ ಕೃಷ್ಣನ್- ಕಲೆ ಸಂಸ್ಕೃತಿ ಬಗೆಗಿನ ಚಿತ್ರ
ಪುರುಷೋತ್ತಮ ಚಾರ್ಯಾಲು- ಅತ್ಯುತ್ತಮ ಚಿತ್ರ ವಿಮರ್ಶೆ (ತೆಲುಗು)
ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ- ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ
ಅಬ್ಬರಿಸಿ ಬೊಬ್ಬಿರಿದ RRR ಸಿನಿಮಾ
RRR ಸಿನಿಮಾ ಬಹುತೇಕ ಎಲ್ಲಾ ವಿಭಾಗದಲ್ಲೂ ಅಬ್ಬರಿಸಿದೆ. ಆಸ್ಕರ್ ರೀತಿಯೇ ದೇಶದ ಪ್ರಮುಖ ಸಿನಿಮಾ ಪ್ರಶಸ್ತಿ ವಿಭಾಗದಲ್ಲೂ RRR ಸದ್ದು ಮಾಡಿದೆ. ಅತ್ಯುತ್ತಮ ಸಾಹಸ ಸಂಯೋಜನೆ ವಿಭಾಗದಲ್ಲಿ RRR ಪ್ರಶಸ್ತಿ ಪಡೆದಿದೆ, ಹಾಗೇ ಅತ್ಯುತ್ತಮ ನೃತ್ಯ ನಿರ್ದೇಶನ ಸ್ಪೆಷಲ್ ಎಫೆಕ್ಟ್, ಅತ್ಯುತ್ತಮ ಹಿನ್ನೆಲೆ ಸಂಗೀತ ಸೇರಿದಂತೆ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗೆ ಸ್ಟಾರ್ ನಿರ್ದೇಶಕ ರಾಜಮೌಳಿ ಡೈರೆಕ್ಷನ್ ಮಾದ ಚಿತ್ರ ಸೌಂಡ್ ಮಾಡಿದೆ. ದಕ್ಷಿಣ ಸಿನಿಮಾ ಇಂಡಸ್ಟ್ರಿಯ ಈ ಆರಂಭ, ಮತ್ತೊಂದು ಮಹಾನ್ ಶಿಖರ ಏರುವ ಮುನ್ಸೂಚನೆ ಕೂಡ ಈ ಮೂಲಕ ಸಿಗುತ್ತಿದೆ.
ಆಸ್ಕರ್ ಕಣದಲ್ಲೂ RRR ಅಬ್ಬರ
ಒಟ್ಟಾರೆ ಹೇಳೋದಾದರೆ ಅತ್ಯುತ್ತಮ ಚಿತ್ರಗಳ ಪೈಪೋಟಿ ನಡುವೆ ಶ್ರೇಷ್ಠ ಸಿನಿಮಾಗಳನ್ನು ಆಯ್ಕೆ ಮಾಡಿ ಇದೀಗ ಪ್ರಶಸ್ತಿ ಪ್ರಕಟಿಸಲಾಗಿದೆ. ತೆಲುಗು ಇಂಡಸ್ಟ್ರಿ ಮತ್ತೆ RRR ಸಿನಿಮಾ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಸದ್ದು ಮಾಡಿದೆ. ಜಗ್ತಿನಾದ್ಯಂತ ಈ ಸಿನಿಮಾ ಅಬ್ಬರಿಸಿತ್ತು. ಹಾಗೇ ಗಲ್ಲಾ ಪೆಟ್ಟಿಗೆಯಲ್ಲೂ ಸಾವಿರ ಕೋಟಿ ಗಳಿಸಿ ನಿರ್ಮಾಪಕ ಮತ್ತು ವಿತರಕರಿಗೂ ಭಾರಿ ಲಾಭ ತಂದುಕೊಟ್ಟಿತ್ತು. ಖುದ್ದು ಅವತಾರ್ ಚಿತ್ರ ಖ್ಯಾತಿಯ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್, RRR ಸಿನಿಮಾ ಹೊಗಳಿದ್ದರು. RRR ಚಿತ್ರ ಆಸ್ಕರ್ ಪ್ರಶಸ್ತಿ ಕೂಡ ಪಡೆದಿತ್ತು. ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲೂ ಅಬ್ಬರಿಸಿದೆ.
ಮತ್ತೊಂದು ಕಡೆ RRR ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಸದ್ದು ಮಾಡಿವೆ. ಹೀಗಾಗಿ ಬಾಲಿವುಡ್ ಸಿನಿಮಾಗಳಿಗೆ ದಕ್ಷಿಣ ಸಿನಿಮಾ ರಂಗದ ಚಿತ್ರಗಳು ಫೈಟ್ ಕೊಡುತ್ತಿವೆ. ದಕ್ಷಿಣದ ಸಿನಿಮಾಗಳು ಅಂದ್ರೆ ಉತ್ತರ ಭಾರತದಲ್ಲಿ ಸಾಕಷ್ಟು ಹೆಸರು ಗಳಿಸಿವೆ ಹಾಗೂ ಜನರಿಗೂ ಅಚ್ಚುಮೆಚ್ಚು. ಇನ್ನು ಇದೇ ಟ್ರೆಂಡ್ ಹೀಗೆ ಮುಂದುವರಿದು, ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಕೂಡ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಆಶಯ.












Click it and Unblock the Notifications