Kabzaa 2: ಕಬ್ಜಾ 2 ಸೇರಿ 5 ಸಿನಿಮಾ ಘೋಷಣೆ ಮಾಡಿದ ಆರ್ ಚಂದ್ರು
ಕನ್ನಡ ಸಿನಿಮಾ ರಂಗದ ನಿರ್ದೇಶಕ ಆರ್ ಚಂದ್ರು ಸದ್ಯ ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಒಂದೇ ಬಾರಿಗೆ 5 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಕಬ್ಜಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಳ್ಳುವಷ್ಟು ಯಶಸ್ವಿಯಾಗದೇ ಇದ್ದರೂ, ಕಬ್ಜಾ 2 ಘೋಷಣೆ ಮಾಡಿದ್ದಾರೆ.
ಆರ್ ಸಿ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಪಕರಾಗಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ. ಘೋಷಣೆ ಮಾಡಿರುವ 5 ಸಿನಿಮಾಗಳಲ್ಲಿ 2 ಸಿನಿಮಾಗಳಿಗೆ ಆರ್ ಚಂದ್ರು ಅವರೇ ನಿರ್ದೇಶನ ಮಾಡಲಿದ್ದು, ಅಲಂಕಾರ್ ಪಾಂಡಿಯನ್ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಒಂದು ಸಿನಿಮಾಗೆ ರಾಜಮೋಹನ್ ಆಕ್ಷನ್ ಕಟ್ ಹೇಳಲಿದ್ದಾರೆ.

ಯಾವು ಆ 5 ಸಿನಿಮಾಗಳು?
ಕಬ್ಜಾ 2 ಸಿನಿಮಾ ನಿರ್ದೇಶನದ ಜೊತೆ ನಿರ್ಮಾಣಕ್ಕೆ ಕೂಡ ಆರ್ ಚಂದ್ರ ಕೈಹಾಕಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ ಇರುತ್ತಾರ, ಶಿವಣ್ಣ ಪಾತ್ರ ಮುಂದುವರೆಯುತ್ತಾ, ಸುದೀಪ್ ಮತ್ತೆ ಬರ್ತಾರ ಎನ್ನುವ ಅನೇಕ ಕುತೂಹಲಗಳಿವೆ. ಅತಿ ಶೀಘ್ರದಲ್ಲೇ ಕಬ್ಜಾ 2 ಸಿನಿಮಾ ತಾರಾಬಳಗದ ಬಗ್ಗೆ ಆರ್ ಚಂದ್ರು ಮಾಹಿತಿ ನೀಡುವ ಸಾಧ್ಯತೆ ಇದೆ.
Happy to announce my next 5 ventures through my new production house R C STUDIOS pic.twitter.com/iZnVhJSwdU
— R.Chandru (@rchandru_movies) January 23, 2024
ಪಿಒಕೆ ಎನ್ನುವ ಮತ್ತೊಂದು ಸಿನಿಮಾಗೆ ಕೂಡ ಆರ್ ಚಂದ್ರು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಕಿಚ್ಚ ಸುದೀಪ್ ನಾಯಕರಾಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಆರ್ ಚಂದ್ರು ಅವರೇ ಇದನ್ನು ಸ್ಪಷ್ಟಪಡಿಸಬೇಕಿದೆ. ಈ ಎರಡೂ ಸಿನಿಮಾಗಳು ಐದು ಭಾಷೆಗಳಲ್ಲಿ ತಯಾರಾಗಲಿದೆ.
ಶ್ರೀರಾಮಬಾಣ ಚರಿತ ಎನ್ನುವ ಮತ್ತೊಂದು ಸಿನಿಮಾ ಕೂಡ ಘೋಷಣೆಯಾಗಿದ್ದು. ಚಿತ್ರದ ನಿರ್ದೇಶಕರ ಹೆಸರನ್ನು ಇನ್ನು ಘೋಷಣೆ ಮಾಡಿಲ್ಲ. ಇದು ಪೌರಾಣಿಕ ಚಿತ್ರವಾಗಿದ್ದು ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿದೆ.
ಫಾದರ್ ಎನ್ನುವ ಚಿತ್ರಕ್ಕೆ ಆರ್ ಚಂದ್ರು ಬಂಡವಾಳ ಹೂಡಲಿದ್ದು, ರಾಜ ಮೋಹನ್ ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಡಾಗ್ ಎನ್ನುವ ಮತ್ತೊಂದು ಸಿನಿಮಾ ಕೂಡ ಘೋಷಣೆಯಾಗಿದ್ದು ಈ ಸಿನಿಮಾ ಬಗ್ಗೆ ಕೂಡ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ.












Click it and Unblock the Notifications