ಮದುವೆ ಆದ ಮೇಲೆ ನಟಿ ಅದಿತಿ ಪ್ರಭುದೇವಗೆ ಅವಕಾಶಗಳು ಕಡಿಮೆ ಆಯ್ತಾ?

ನಟಿ ಅದಿತಿ ಪ್ರಭುದೇವ ಅವರು 2022ರಲ್ಲಿ ಉದ್ಯಮಿ ಯಶಸ್ ಪಟ್ಲ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಕೂಡ ಇದೆ. ನಟ ವಿನಯ್‌ ರಾಜ್‌ಕುಮಾರ್‌ ಅವರೊಂದಿಗೆ ಅದಿತಿ ನಟಿಸಿರುವ "ಅಂದೊಂದಿತ್ತು ಕಾಲ" ಸಿನಿಮಾ ಆಗಸ್ಟ್ 29ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದ ಮುಂಗಾರು ಮಳೆಯಲ್ಲಿ ಹಾಡು ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಇನ್ನು ಮದುವೆ ಆದ ಬಳಿಕ ಅವಕಾಶಗಳು ಕಡಿಮೆ ಆಗಿದೆಯಾ? ಎಂಬ ಬಗ್ಗೆ ನಟಿ ಅದಿತಿ ಪ್ರಭುದೇವ ಅವರೇ ಮುಕ್ತವಾಗಿ ಮಾತನಾಡಿದ್ದಾರೆ.

'ನನ್ನ ಮಗುವಿಗೆ ಮೂರು ತಿಂಗಳಿದ್ದಾಗಲೇ ನಾನು ರಾಜ-ರಾಣಿ ಶೋನಲ್ಲಿ ಜಡ್ಜ್‌ ಆಗಿ ಕೆಲಸ ಮಾಡಿದೆ. ಆದರೆ ಈಗ ಅದು ಆಗುತ್ತಿರಲಿಲ್ಲ. ಆಗ ಸೆಟ್‌ನಲ್ಲೇ ಮಗುವಿಗೆ ಹಾಲುಣಿಸಿ, ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದೆ. ಮಕ್ಕಳು ಕೂಡ ಆ ವಯಸ್ಸಲ್ಲಿ ಹಾಲು ಕುಡಿಯುತ್ತವೆ, ಮಲಗುತ್ತವೆ ಅಷ್ಟೇ. ಆದರೆ ಈಗಿನ ಪರಿಸ್ಥಿತಿ ರಿಸ್ಕ್‌ ಅನಿಸುತ್ತೆ' ಎಂದು ಅದಿತಿ ಅವರು ವಿಜಯ ಕರ್ನಾಟಕ ಸಂದರ್ಶನದಲ್ಲಿ ಹೇಳಿದ್ದಾರೆ.

did-actress-aditi-prabhudeva-film-opportunities-decrease-after-marriage

'ಮದುವೆ ಆದ ಮೇಲೆ ನಾವಾಗಿಯೇ ಸ್ವಲ್ಪ ನಿಧಾನವಾಗುತ್ತೇವೆ. ಆದರೆ ನಿಜವಾಗಿಯೂ ಕೆಲಸ ಮಾಡಲೇಬೇಕು ಅಂತಾದ್ರೆ ಅವಕಾಶಗಳು ಸಿಕ್ಕೇ ಸಿಗುತ್ತೆ. ಅವಕಾಶಗಳು ಬರುತ್ತಲೇ ಇರುತ್ತವೆ. ಅದನ್ನ ನಾವು ಯಾವ ಸಮಯದಲ್ಲಿ ಎಷ್ಟರಮಟ್ಟಿಗೆ ಬಳಸಿಕೊಳ್ಳಬೇಕು ಎನ್ನುವುದು ನಮ್ಮ ಜಾಣತನ ಎಂದಿದ್ದಾರೆ ಅದಿತಿ. ಮದುವೆ ಆದ ಮೇಲೆ ಅವಕಾಶಗಳು ಕಡಿಮೆ ಆಗುತ್ತೆ ಅನ್ನೋ ಮಾತನ್ನ ನಾನು ಒಪ್ಪಲ್ಲ' ಎಂದು ಹೇಳಿದ್ದಾರೆ.

'ನನ್ನ ಪ್ರಕಾರ ಈಗಿನ ಕಾಲದಲ್ಲಿ ಯಾರೂ ಆ ರೀತಿ ಯೋಚನೆ ಮಾಡಲ್ಲ. ಮದುವೆ ಆದ ಮೇಲೂ ಸಿಕ್ಕಾಪಟ್ಟೆ ನಟಿಯರು ಕೆಲಸ ಮಾಡ್ತಾರೆ. ಆದರೆ ಮಗು ಆದ ಮೇಲೆ ಅವರಾಗಿಯೇ ಸ್ಲೋ ಡೌನ್‌ ಆಗ್ತಾರೆ. ಏಕೆಂದರೆ ಮಗು ಆದ ತಕ್ಷಣ ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಬ್ರೇಕ್‌ಡೌನ್‌ ಆಗ್ತೀವಿ. ಮದುವೆ ನಂತರ ನಮ್ಮ ಬದುಕೇ ಸಂಪೂರ್ಣ ಬದಲಾಗುತ್ತೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಕಥೆ ಚೆನ್ನಾಗಿದ್ರೆ ಪ್ರಚಾರ, ಗಿಮಿಕ್‌ ಬೇಡ!'

'ಸಾಮಾನ್ಯವಾಗಿ 80 ಹಾಗೂ 90ರ ದಶಕದಲ್ಲಿ ಹುಟ್ಟಿದವರು ಎಲ್ಲ ರೀತಿಯ ಬದುಕನ್ನ ನೋಡಿದ್ದೀವಿ. ಮೊಬೈಲೇ ಇಲ್ಲದ ದಿನಗಳನ್ನು ನೋಡಿದ್ದೀವಿ. ಆ ಮೇಲೆ ಕೀಪ್ಯಾಡ್‌, ಟಚ್‌ ಪ್ಯಾಡ್‌ ಬಂತು. ಅದೇ ರೀತಿ ಅನುಭವ ಸಿನಿಮಾದಲ್ಲೂ ಸಿಗುತ್ತೆ. ಮೊದಲೆಲ್ಲ ನಾನು ಕನ್ನಡ ಸಿನಿಮಾ ನೋಡಿ, ನೋಡಿ ಅಂತ ಕೇಳಿಕೊಳ್ಳುತ್ತಿದ್ದೆ. ಸಿನಿಮಾ ಚೆನ್ನಾಗಿದ್ರೆ ಜನ ಖಂಡಿತವಾಗಿಯೂ ನೋಡ್ತಾರೆ. ಇಲ್ಲದಿದ್ದರೆ ನಮ್ಮನ್ನ ನಾವೇ ತಿದ್ದುಕೊಳ್ಳಬೇಕು. ಇದನ್ನ ನಾವು ಸರಿಪಡಿಸಿಕೊಳ್ಳಬೇಕು' ಎಂದು ಅದಿತಿ ಮಾತನಾಡಿದ್ದಾರೆ.

did-actress-aditi-prabhudeva-film-opportunities-decrease-after-marriage

'ಸಿನಿಮಾ ಚೆನ್ನಾಗಿದ್ರೆ ಭರ್ಜರಿ ಪ್ರಮೋಷನ್‌, ಗಿಮಿಕ್‌ಗಳು ಬೇಕಾಗಿಲ್ಲ. ಇದು ಹಲವು ಬಾರಿ ಸಾಬೀತಾಗಿದೆ. ನಾವು ಸಿನಿಮಾ ಬರ್ತಿದೆ ಅಂತ ಮಾಹಿತಿ ಅಷ್ಟೇ ಕೊಡಬೇಕು. ಆದರೆ ನೀವು ಖಂಡಿತ ಬರಲೇಬೇಕು ಅಂತ ಪ್ರೇಕ್ಷಕರಿಗೆ ಹೇಳಬಾರದು. ಅವರಿಗೆ ಇಷ್ಟವಿದ್ದರೆ ನಾವು ಕರೆಯುವುದೇ ಬೇಡ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+