Dhurandhar 2 vs Yash Toxic: "ಹಾಳಾಗುವ ಸಮಯ ಬಂದಿದೆ" ಎಂದ ಧುರಂಧರ್ ನಿರ್ದೇಶಕ ಆದಿತ್ಯ ಧರ್
Dhurandhar 2 vs Yash's Toxic: ಭಾರತದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ತೀವ್ರ ಸ್ಪರ್ಧೆ ಶುರುವಾಗಿದೆ. ನಟ ಯಶ್ ಅಭಿನಯಿಸಿರುವ ಟಾಕ್ಸಿಕ್ ಹಾಗೂ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾಗಳ ನಡುವೆ ಬಾಕ್ಸ್‌ಆಫೀಸ್ ಕ್ಲ್ಯಾಶ್ ಎದುರಾಗಿದೆ. ಧುರಂಧರ್ ದಿ ರಿವೆಂಜ್: ಚಲನಚಿತ್ರದ ನಿರ್ಮಾಪಕ ಆದಿತ್ಯ ಧರ್ ಅವರ ಮುಂಬರುವ ಧುರಂಧರ್ 2 ಮಾರ್ಚ್ 19, 2026 ರಂದು ಬಿಡುಗಡೆಗೆ ಸಿದ್ಧವಾಗಿದೆ. ರಣವೀರ್ ಸಿಂಗ್ ಅವರ ಧುರಂಧರ್ 2 ಹಾಗೂ ರಾಕಿಂಗ್ ಸ್ಟಾರ್ ನಟ ಯಶ್ ಅವರು ಅಭಿನಯಿಸಿರುವ ಟಾಕ್ಸಿಕ್ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿವೆ.
ಈ ಎರಡು ಸಿನಿಮಾಗಳು ಸಹ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿವೆ. ಧುರಂಧರ್ ದಿ ರಿವೆಂಜ್ ಸಿನಿಮಾದ ಚಿತ್ರ ನಿರ್ಮಾಪಕರು ಅಂತಿಮವಾಗಿ ಧುರಂಧರ್ 2ರ ಬಹುನಿರೀಕ್ಷಿತ ಟೀಸರ್ ಧುರಂಧರ್ ದಿ ರಿವೆಂಜ್ ಎಂದು ಬಿಡುಗಡೆ ಮಾಡಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಏಜೆಂಟ್ ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧುರಂಧರ್: ದಿ ರಿವೆಂಜ್ ಟೀಸರ್ ಯಾವುದೇ ಹೊಸ ದೃಶ್ಯಗಳನ್ನು ಸೇರಿಸಿಲ್ಲ. ಈಚೆಗೆ ಬಿಡುಗಡೆಯಾಗಿದ್ದ ಟಾಕ್ಸಿಕ್ ಟೀಸರ್ ಭಾರೀ ಸದ್ದು ಮಾಡಿತ್ತು.

ಧುರಂಧರ್ 2 ಟೀಸರ್ ಬಿಡುಗಡೆ
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ - 2 ಸಿನಿಮಾದ ಟೀಸರ್ ಫೆಬ್ರವರಿ 3ರಂದು ಬಿಡುಗಡೆಯಾಗಿದೆ. 2025ರಲ್ಲಿ ಬಿಡುಗಡೆಯಾದ ಧುರಂಧರ್ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಪಾರ್ಟ್ -2 ಭಾರೀ ಸಂಚಲನ ಮೂಡಿಸಿದೆ. ಆದರೆ ಧುರಂಧರ್ 2 ಟೀಸರ್‌ನ ಬಗ್ಗೆ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಈ ಸಿನಿಮಾದ ಟೀಸರ್‌ನ ಬಗ್ಗೆ ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದೆವು ಎಂದು ಸಿನಿ ಪ್ರಿಯರು ಹೇಳಿದ್ದಾರೆ.
Dhurandhar 2 vs Yash Toxic: ಧುರಂಧರ್ 2 vs ಟಾಕ್ಸಿಕ್
ಧುರಂಧರ್ 2 vs ಟಾಕ್ಸಿಕ್ ಭಾರತೀಯ ಸಿನಿಮಾ ರಂಗದಲ್ಲಿ ಎರಡು ಮದಗಜಗಳ ನಡುವಿನ ಸ್ಪರ್ಧೆ ಎನ್ನುವಂತೆ ಆಗಿದೆ. ಧುರಂಧರ್ 2 ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಯಶ್ ಅವರ ಮುಂಬರುವ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ನೊಂದಿಗೆ ಪೈಪೋಟಿಗೆ ಇಳಿದಿದೆ. ಉದ್ದೇಶಪೂರ್ವಕಾಗಿ ಟಾಕ್ಸಿಕ್ ಸಿನಿಮಾ ಬಿಡುಗಡೆಯ ದಿನದಂದೇ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.
ನಿರ್ದೇಶಕ ಆದಿತ್ಯ ಧರ್ ಪೋಸ್ಟ್‌ಗೆ ಕನ್ನಡಿಗರ ವ್ಯಂಗ್ಯ
ಇನ್ನು ಧುರಂಧರ್ ದಿ ರಿವೆಂಜ್: ಚಲನಚಿತ್ರದ ನಿರ್ಮಾಪಕ ಆದಿತ್ಯ ಧರ್ ಅವರು, "ಹಾಳಾಗುವ ಸಮಯ ಬಂದಿದೆ" ಎನ್ನುವ ಪೋಸ್ಟ್‌ಗೆ ಕನ್ನಡಿಗರು ನಕ್ಕಿದ್ದಾರೆ. ರವಿ ಕೀರ್ತಿಗೌಡ ಅವರು, ಹಾಳು ಮಾಡುವ ಸಮಯ* ಎಂದಾಗಬೇಕು ಎಂದಿದ್ದಾರೆ. ಪ್ರಜ್ವಲ್ ಎನ್ನುವವರು ಹಾಳಾಗುವ ಅಲ್ಲ.... ಹಾಳು ಮಾಡುವ ಸಮಯ ಬಂದಿದೆ. ಸಜಿತ್ ಎನ್ನುವವರು, ಕನ್ನಡದಲ್ಲಿ ನೋಡಿ ಸಂತೋಷವಾಯಿತು. ಸೂಪರ್.. ಪರಿಚಿತವಲ್ಲದ ಭಾಷೆಯಿಂದಾಗಿ ಮೊದಲ ಭಾಗವನ್ನು ತಪ್ಪಿಸಿಕೊಂಡೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರ್ಶ ಹೆಚ್.ಎಂ ಎನ್ನುವವರು ಇದು ಕೇವಲ ಪೋಸ್ಟರ್‌ಗೆ ಸೀಮಿತವಾಗಿದೆ. ಮೊದಲ ಭಾಗ OTTಯಲ್ಲಿ ಕನ್ನಡದಲ್ಲಿ ಬಿಡುಗಡೆಯಾಗಿಲ್ಲ. ಅದನ್ನು ಪರಿಶೀಲಿಸಿ ಮತ್ತು ಅನುವಾದವನ್ನು ಪರಿಶೀಲಿಸಿ. "ಹಾಳು ಮಾಡುವ ಸಮಯ ಬಂದಿದೆ" ಎಂದಿದ್ದಾರೆ.
ಹಾಳಾಗುವ ಸಮಯ ಬಂದಿದೆ
— Aditya Dhar (@AdityaDharFilms) February 3, 2026
Dhurandhar: The Revenge
Teaser Out Today at 12:12 PM#DhurandharTheRevenge Releasing In Cinemas Worldwide on 19th March 2026 in Hindi, Telugu, Tamil, Kannada & Malayalam@RanveerOfficial #AkshayeKhanna @duttsanjay @ActorMadhavan @rampalarjun #SaraArjun… pic.twitter.com/G6OLfFVMkV
ಯಶ್ ಅಭಿಮಾನಿಗಳಿಂದ ವಿರೋಧ
ಧುರಂಧರ್ 2 ಸಿನಿಮಾ ತಂಡವು ನಟ, ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿದೆ ಎಂದು ಯಶ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧುರಂಧರ್ 2 vs ಟಾಕ್ಸಿಕ್ ಟ್ರೆಂಡ್ ಸೃಷ್ಟಿ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಇದು ಸ್ಯಾಂಡಲ್ ವುಡ್ vs ಬಾಲಿವುಡ್ ಎಂಬಂತೆಯೂ ಚರ್ಚೆ ನಡೆದಿದೆ.












Click it and Unblock the Notifications