Darshan Thoogudeepa: ಅಪ್ಪು ಅವರನ್ನು ಹೊಗಳಿ ದರ್ಶನ್‌ಗೆ ಗುನ್ನಾ ಇಟ್ಟ ದ್ರುವ ಸರ್ಜಾ: ಉರ್ಕೊಂಡ ‘ಡಿ-ಬಾಸ್’ ಫ್ಯಾನ್ಸ್?
ದರ್ಶನ್ ತೂಗುದೀಪ್ ಅಭಿಮಾನಿಗಳು ದ್ರುವ ಸರ್ಜಾ ವಿರುದ್ಧ ರೊಚ್ಚಿಗೆದ್ದು, ಎಲ್ಲೆಂದರಲ್ಲಿ & ಹೆಂಗೆ ಬೇಕೋ ಹಂಗೆಲ್ಲಾ ಬೈದಾಡಿಕೊಂಡು ಓಡಾಡುತ್ತಿದ್ದಾರೆ. ತಮ್ಮ ಪಾಲಿನ ಡಿ-ಬಾಸ್ ಬಗ್ಗೆ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ದ್ರುವ ಸರ್ಜಾಗೆ ದರ್ಶನ್ ತೂಗುದೀಪ್ ಅಭಿಮಾನಿ ಬಳಗ ಬೆದರಿಕೆ ಹಾಕುತ್ತಿದೆ ಎಂಬ ಆರೋಪ ಕೂಡ ಇದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋದ ಸಮಯದಲ್ಲೇ, ದ್ರುವ ಸರ್ಜಾ ಆಡಿರುವ ಅದೊಂದು ಮಾತು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಫ್ಯಾನ್ ವಾರ್ ಎಂಬ ಬೆಂಕಿಯನ್ನ ಮತ್ತೆ ಹಚ್ಚಿದೆ!
ಕನ್ನಡ ಸಿನಿಮಾ ರಂಗದಲ್ಲಿ, ದ್ರುವ ಸರ್ಜಾ ಈಗ ಬ್ಯುಸಿ ಇರುವ ನಟ ಎನಿಸಿಕೊಂಡಿದ್ದಾರೆ. ದ್ರುವ ಸರ್ಜಾ ತಮ್ಮ ಮುಂಬರುವ ಸಿನಿಮಾಗೆ ನ್ಯೂಸ್ ಚಾನೆಲ್‌ಗಳ ಬಳಿ ಇಂಟರ್ವ್ಯೂವ್‌ನ ಕೊಡುತ್ತಿದ್ದಾರೆ. ಹೀಗಿದ್ದಾಗ ದ್ರುವ ಸರ್ಜಾ ತಮ್ಮ ಜೀವನದ ಬಗ್ಗೆ & ಸಿನಿಮಾ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅಭಿಮಾನಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ ದ್ರುವ ಸರ್ಜಾ.

ದರ್ಶನ್ ತೂಗುದೀಪ್ ಕುರಿತು ಈ ಹಿಂದೆ ಕೂಡ ದ್ರುವ ಹೇಳಿಕೆ ನೀಡಿದ್ದು ವೈರಲ್ ಆಗಿತ್ತು. ಅದರಲ್ಲೂ ದರ್ಶನ್ ತೂಗುದೀಪ್ ಸೆಂಟ್ರಲ್ ಜೈಲು ಬಿಟ್ಟು ರಿಲೀಸ್ ಆಗಿ ಹೊರಗೆ ಬರುವ ತನಕ, ನಾವು ಕನ್ನಡ ಸಿನಿಮಾ ನೋಡಲ್ಲ ಎನ್ನುವ ಚಾಲೆಂಜ್ ಬೇರೆ ಹಾಕಿದ್ದಾರೆ ನಟ & ಈಗ ಕೊಲೆ ಆರೋಪಿ ಆಗಿರುವ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್. ಇಂತಹ ಪರಿಸ್ಥಿತಿ ಇದ್ದಾಗ ದ್ರುವ ಸರ್ಜಾ ನೀಡಿರುವ ಹೇಳಿಕೆ ಏನು ಗೊತ್ತಾ? ಸಂಪೂರ್ಣ ಮಾಹಿತಿಯ ತಿಳಿಯಲು ಮುಂದೆ ಓದಿ.
#Druvasarja opens up about how Appu helped his film Bahaddur by lending his voice for the movie!
— Smiling Assassin👑 (@ChanduGowdru07) September 7, 2024
What's more remarkable is that Appu's fans never took credit for the film's success,unlike others.
A true testament to their humility and love for their hero.#DrPuneethRajkumar👑 pic.twitter.com/1Lx1iW5izS
ಪುನೀತ್ ರಾಜ್‌ಕುಮಾರ್ ಬಗ್ಗೆ ದ್ರುವ...
ದ್ರುವ ಸರ್ಜಾ ಸಿನಿಮಾ ಕುಟುಂಬದಿಂದ ಬಂದ ವ್ಯಕ್ತಿ, ಅದರಲ್ಲೂ ದ್ರುವ ಸರ್ಜಾ ಮಾವ & ತಾತ ಕನ್ನಡ ಸಿನಿಮಾ ರಂಗದ ದೊಡ್ಡ ನಟರು. ಅರ್ಜುನ್ ಸರ್ಜಾ ಅವರು ಪ್ಯಾನ್ ಇಂಡಿಯಾ ಲೆವೆಲ್ ಹೀರೋ ಆಗಿದ್ದವರು. ಹೀಗೆ ಇಂತಹ ಕಲಾ ಕುಟುಂಬದ ಮೂಲದಿಂದ ಬಂದಿರುವ ದ್ರುವ ಸರ್ಜಾ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಹೀಗಿದ್ದಾಗ ದ್ರುವ ಸರ್ಜಾ ದಿಢೀರ್ ಸ್ಫೋಟಕ ಹೇಳಿಕೆ ಒಂದನ್ನ ನೀಡಿದ್ದಾರೆ. ದರ್ಶನ್ ತೂಗುದೀಪ್ ಫ್ಯಾನ್ಸ್ ಈ ಮಾತು ಕೇಳಿ ಇದೀಗ ಅರಗಿಸಿಕೊಳ್ಳಲು ಆಗದೆ ಒದ್ದಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ!
ತಾಳ್ಮೆಗೂ ಮಿತಿ ಇದೆ, ಅನವಶ್ಯಕವಾಗಿ "ಡಿ ಬಾಸ್" ಅವರ ಅಭಿಮಾನಿಗಳನ್ನು ಪ್ರಚೋದಿಸದಿರಿ 😊🙌#BossOfSandalwood #Dboss #DevilTheHero @dasadarshan pic.twitter.com/aNykLeptjT
— Thoogudeepa Team - R (@DTEAM7999) September 7, 2024
'ಅಪ್ಪು' ಹೊಗಳಿದ ದ್ರುವ ಸರ್ಜಾ
ಖಾಸಗಿ ನ್ಯೂಸ್ ಚಾನೆಲ್ ಒಂದರ ಸಂದರ್ಶನದ ವೇಳೆ ಮಾತನಾಡಿದ ಧ್ರುವ ಸರ್ಜಾ ಅವರು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬೆಂಬಲದ ಬಗ್ಗೆ ಮಾತನಾಡಿದರು. ತಾವು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಆದ ಸಮಯದಲ್ಲಿ ನಟ ದ್ರುವ ಸರ್ಜಾ ಅವರಿಗೆ ಪುನೀತ್ ರಾಜ್‌ಕುಮಾರ್ ಅವರು ಮಾಡಿದ ಸಹಾಯ ನೆನಪು ಮಾಡಿಕೊಂಡರು. ಬಹದ್ದೂರ್ ಸೇರಿ, ತಮ್ಮ ಆರಂಭಿಕ ಸಿನಿಮಾಗಳಿಗೆ ಪುನೀತ್ ರಾಜ್‌ಕುಮಾರ್ ಅವರೇ ಮುಂದೆ ಬಂದು ಕ್ಲಾಪ್ ಮಾಡಿ, ಧ್ವನಿ ನೀಡಿದ್ದ ಸಹಾಯ ನೆನಪು ಮಾಡಿಕೊಂಡರು. ಇದೇ ವೇಳೆ ದರ್ಶನ್ ಫ್ಯಾನ್ಸ್ ಕನ್ನಡ ಸಿನಿಮಾಗಳನ್ನ ನೋಡಲ್ಲ ಅಂತಾ ಹೇಳಿರುವ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ನಟ ದ್ರುವ ಸರ್ಜಾ?
ಸರ್ಜಾ ಹೇಳಿಕೆಗೆ ಡಿ-ಫ್ಯಾನ್ಸ್ ಶಾಕ್!
ಕನ್ನಡ ಸಿನಿಮಾ ರಂಗದಲ್ಲಿ ಫ್ಯಾನ್ಸ್ ವಾರ್ ಜೋರಾಗಿದ್ದು, ದ್ರುವ ಸರ್ಜಾ ಈ ಕುರಿತು ಈಗ ಮಾತನಾಡಿದ್ದಾರೆ. ಅದರಲ್ಲೂ ದ್ರುವ ಸರ್ಜಾ ಅವರ ಮುಂಬರುವ ಸಿನಿಮಾಗೆ ಪಾಠ ಕಲಿಸಿ ನಮ್ಮ ಶಕ್ತಿ ತೋರಿಸುತ್ತೇವೆ ಅಂತಾ ದರ್ಶನ್ ತೂಗುದೀಪ್ ಅಭಿಮಾನಿಗಳು ಚಾಲೆಂಜ್ ಹಾಕಿ ತೊಡೆ ತಟ್ಟುತ್ತಿದ್ದಾರೆ. ಹೀಗಿದ್ದಾಗ ಇದಕ್ಕೆಲ್ಲಾ ಪರೋಕ್ಷ ಉತ್ತರ ನೀಡಿರುವ ದ್ರುವ ಸರ್ಜಾ, ಯಾರು ಏನೇ ಮಾಡಿದ್ರು ಕನ್ನಡ ಸಿನಿಮಾ ಇಂಡಸ್ಟ್ರಿ ಇನ್ನೂ ಎತ್ತರಕ್ಕೆ ಹೋಗುತ್ತೆ ಎಂದಿದ್ದಾರೆ. ದ್ರುವ ನೀಡಿರುವ ಹೇಳಿಕೆಗೆ ನಿಜವಾದ ಕನ್ನಡಿಗರು ಬೆಂಬಲ ನೀಡುತ್ತಾರೆ ಅಂತಾ ಅಭಿಮಾನಿ ಬಳಗ ಹೇಳುತ್ತಿದೆ, ತಿಕ್ಕಾಟ ಕ್ಷಣಕ್ಷಣಕ್ಕೂ ಜೋರಾಗುತ್ತಿದೆ!












Click it and Unblock the Notifications