Mrunal Thakur: ಮೃಣಾಲ್ & ಧನುಷ್ ವಿಡಿಯೋ ವೈರಲ್, ಸ್ಟಾರ್ ನಟ-ನಟಿ ಡೇಟಿಂಗ್ ಕನ್ಫರ್ಮ್
Mrunal Thakur: ಬಾಲಿವುಡ್‌ನಲ್ಲಿ ಇತ್ತೀಚೆಗೆ 'ಸನ್ ಆಫ್ ಸರ್ದಾರ್-2' ಚಿತ್ರ ಬಿಡುಗಡೆ ಆಗಿದೆ. ಇದರಲ್ಲಿ ಅಜಯ್ ದೇವಗನ್ ಜೊತೆಗೆ ನಟಿ ಮೃಣಾಲ್ ಠಾಕೂರ್ ಸಹ ಇದ್ದಾರೆ. ಚಿತ್ರದ ಪ್ರದರ್ಶನ ವೇಳೆ ನಟ ಕೆಲವೊಂದು ಸಂಗತಿಗಳು ಬೆಳಕಿಗೆ ಬಂದಿವೆ. ಈ ವೇಳೆ ಮೃಣಾಲ್ ಠಾಕೂರ್ ನಟ ಧನುಷ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅಸಲಿಗೆ ಇದು ವದಂತಿನಾ? ನಿಜವಾ? ಎಂಬ ಮಾಹಿತಿ ಇಲ್ಲಿದೆ.
ನಟಧನುಷ್ ಮತ್ತು ಮೃಣಾಲ್ ಠಾಕೂರ್ ಇಬ್ಬರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದು ಅವರಿಬ್ಬರ ಮಧ್ಯದ ಡೇಟಿಂಗ್ ವದಂತಿಗೆ ಕಾರಣವಾಗಿದೆ. ಈ ವೈರಲ್ ವಿಡಿಯೋದಲ್ಲಿ ಧನುಷ್ ಅವರು ಮೃಣಾಲ್ ಕೈ ಹಿಡಿದು ಸಂಭಾಷಣೆಯಲ್ಲಿ ತೊಡಗಿರುವುದ ಗೊತ್ತಾಗುತ್ತದೆ. ಮೃಣಾಲ್ ಸಹ ಕಿರು ನಗೆಯಿಂದ ವೈಯಕ್ತಿಕ ಸಂಭಾಷಣೆಗೆ ಮುಂದಾಗುತ್ತಾರೆ. ಧನುಷ್ ಕಡೆ ಬಾಗಿ ನಿಂತು ಮಾತನಾಡಿದ್ದಾರೆ..

ಹೌದು, ಮುಂಬೈನಲ್ಲಿ ಇತ್ತೀಚೆಗೆ ನಟ ಧನುಷ್ ಅವರು ಮೃಣಾಲ್ ಠಾಕೂರ್ ಅವರ ನಟನೆಯ 'ಸನ್ ಆಫ್ ಸರ್ದಾರ್ 2' ಪ್ರದರ್ಶನ ಆಗಮಿಸಿದ್ದರು. ಈ ವೇಳೆ ಅಜಯ್ ದೇವಗನ್ ಸಹ ಇದ್ದರು. ಇಲ್ಲಿಂದ "ಧನುಷ್ ಮತ್ತು ಮೃಣಾಲ್ ಠಾಕೂರ್ ಡೇಟಿಂಗ್ ಮಾಡುತ್ತಿದ್ದಾರೆಯೇ?" ಎಂಬ ಶೀರ್ಷಿಕೆ ಜೊತೆಗೆ ವಿಡಿಯೋ ಹೆಚ್ಚಿನ ಪ್ರಯಾಣದಲ್ಲಿ ಶೇರ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಿದೆ.
ಮೃಣಾಲ್-ಧನುಷ್ ಡೇಟಿಂಗ್ ನಿಜ..!
ಒಂದು ಕಡೆ ವದಂತಿ ಎಂದು ಚರ್ಚೆ ಆಗುತ್ತಿದ್ದರೂ ಸಹ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲವೊಂದು ದೃಢಪಡಿಸಿದೆ. ಮೃಣಾಲ್, ಧನುಷ್ ಅವರು ಡೇಟಿಂಗ್ ಮಾಡುತ್ತಿರುವುದು ನಿಜ ಎನ್ನಲಾಗಿದೆ. ಆದರೆ ಅವರು ಸಾರ್ವಜನಿಕರ ಮುಂದೆ ಅಥವಾ ಮಾಧ್ಯಮದ ಮುಂದೆ ತಮ್ಮ ಸಂಬಂಧ ಅಧಿಕೃತಗೊಳಿಸಿಲ್ಲ. ಬದಲಾಗಿ ಅವರು ಬಹಿರಂಗವಾಗಿ ಸ್ನೇಹಿತರಂತೆ ವರ್ತಿಸಿದ್ದಾರೆ. ಬಹಿರಂಗವಾಗಿ ಮಾತನಾಡಲು ಹಿಂಜರಿದಿಲ್ಲ. ಈ ವಿಡಿಯೋ ಅವರ ಡೇಟಿಂಗ್ ವದಂತಿಗೆ ನೈಜತೆ ಒದಗಿಸುತ್ತಿದೆ.

ಶೂಟಿಂಗ್ ವೇಳೆ ಧನುಷ್ ಭೇಟಿಯಾಗಿದ್ದ ಮೃಣಾಲ್
ಇತ್ತೀಚೆಗೆ ಶೂಟಿಂಗ್‌ಗಾಗಿ ಮೃಣಾಲ್ ಮುಂಬೈ, ಹೈದರಾಬಾದ್‌ಗೆ ಓಡಾಡುತ್ತಿದ್ದಾಗಲೂ ಧನುಷ್ ಅವರನ್ನು ಭೇಟಿ ಮಾಡಿದ್ದಾಗಿ ವರದಿ ಮಾಡಲಾಗಿದೆ. 'ಸೀತಾ ರಾಮಂ' ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ನೆಲೆಯೂರಿದ ನಟಿ ಮೃಣಾಲ್ ಠಾಕೂರ್ ಬೇಡಿಕೆಯ ನಟಿಯಾಗಿದ್ದಾರೆ. ಇತ್ತೀಚೆಗೆ ನಟ ಧನುಷ್ ಅವರ ಕುಬೇರ ಸಿನಿಮಾ ರಿಲೀಸ್ ಆಗಿದೆ. ತಮಿಳಿನಲ್ಲಿ ಸ್ಟಾರ್ ನಟರಾಗಿರುವ ಧನುಷ್ ಅವರು ಪತ್ನಿ ಐಶ್ವರ್ಯ ರಜನಿಕಾಂತ್ ಅವರಿಗೆ ವಿಚ್ಛೇಧನ ನೀಡಿದ್ದಾರೆ. ಇದೀಗ ಅವರು ಮೃಣಾಲ್ ಠಾಕೂರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ಮುಂಬೈನಲ್ಲಿ ಕಾಜೋಲ್ ಅವರ 'ಮಾ' ಚಿತ್ರದ ಪ್ರೀಮಿಯರ್‌ಗೆ ಮೃಣಾಲ್ ಇದ್ದಾಗಲೂ ನಟ ಧನುಷ್ ಅವರಿದ್ದದ್ದು ಕಂಡು ಬಂದಿತ್ತು. ಇದೀಗ 'ಸನ್ ಆಫ್ ಸರ್ದಾರ್ 2' ಸಿನಿಮಾದಲ್ಲೂ ಪ್ರದರ್ಶನ ವೇಳೆಯೂ ನಟ ಧನುಷ್ ಆಗಮಿಸಿರುವುದು ಇವರಿಬ್ಬರ ಡೇಟಿಂಗ್ ವಿಚಾರಕ್ಕೆ ಪುಷ್ಠಿ ನೀಡಿದಂತಾಗಿದೆ. ಇದೆಲ್ಲವು ನಿಜವೇ ಆದಲ್ಲಿ ರಶ್ಮಿಕಾ ಮಂದಣ್ಣಾ ಬೆನ್ನಲ್ಲೆ, ದನುಷ್-ಮೃಣಾಲ್ ಸಹ ತಾರಾ ಜೋಡಿಯಾಗಲಿದ್ದಾರೆ. ಸದ್ಯ ಅವರ ಫ್ಯಾನ್ಸ್ ಸಖತ್ ಖುಷಿ ಆಗಿದ್ದಾರೆ.












Click it and Unblock the Notifications