Bigg Boss: ಧನರಾಜ್ ಎಡವಟ್ಟಿನಿಂದ ಮಿಡ್‌ವೀಕ್ ಎಲಿಮಿನೇಷನ್ ಕ್ಯಾನ್ಸಲ್; ಡಬಲ್ ಶಾಕ್ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಫಿನಾಲೆಗೆ ಇನ್ನು ಎರಡು ವಾರಗಳು ಬಾಕಿಯಿದ್ದು ಮನೆಯಲ್ಲಿ ಫೈನಲ್ ತಲುಪಲು ಸ್ಪರ್ಧೆ ಜೋರಾಗಿದೆ. ಈ ವಾರ ನಡೆದ ಟಾಸ್ಕ್‌ನಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಧನರಾಜ್ ಟಾಸ್ಕ್‌ನಲ್ಲಿ ಗೆದ್ದು ಎಲಿಮಿನೇಷನ್‌ನಿಂದ ಪಾರಾಗಿದ್ದರು. ಮಿಡ್ ವೀಕ್ ಎಲಿಮಿನೇಷನ್ ನಡೆಸುವುದಾಗಿ ಬಾಗಿಲು ತೆಗೆದಿದ್ದ ಬಿಗ್ ಬಾಸ್, ಭವ್ಯಾ ಮತ್ತು ಗೌತಮಿಗೆ ಟೆನ್ಷನ್ ಕೊಟ್ಟು ಕೊನೆಗೆ ಯಾರೂ ಮನೆಯಿಂದ ಹೊರ ಹೋಗುತ್ತಿಲ್ಲ ಎಂದು ಟ್ವಿಸ್ಟ್ ನೀಡಲಾಗಿತ್ತು.
ಆದರೆ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತದೆ ಅದುವರೆಗೂ ಬಿಗ್ ಬಾಸ್ ಮನೆ ಬಾಗಿಲು ತೆರೆದೇ ಇರುತ್ತದೆ ಎಂದು ಬುಧವಾರದ ಸಂಚಿಕೆಯಲ್ಲಿ ಹೇಳಲಾಗಿತ್ತು, ಆದರೆ ಗುರುವಾರದ ಸಂಚಿಕೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇಲ್ಲ ಎನ್ನುವ ಮೂಲಕ ಮತ್ತೊಂದು ತಿರುವು ನೀಡಿದ್ದು, ಎಲ್ಲಾ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟರು.

ಈ ನಡುವೆ ಧನರಾಜ್ ಟಾಸ್ಕ್‌ನಲ್ಲಿ ಮೋಸ ಮಾಡಿ ಗೆದ್ದರು ಎನ್ನುವುದು ಬಿಗ್ ಬಾಸ್‌ಗೆ ಗೊತ್ತಾಗಿದ್ದು, ಗುರುವಾರ ಈ ಬಗ್ಗೆ ಪಂಚಾಯಿತಿ ನಡೆಸಲಾಯಿತು. ಕೀ ಹುಡುಕುವ ಸಂದರ್ಭದಲ್ಲಿ ಕನ್ನಡಿಯಲ್ಲಿ ಧನರಾಜ್ ನೋಡಿಕೊಂಡು ಆಟವಾಡಿದ್ದು ಸ್ಪಷ್ಟವಾಗಿತ್ತು ಇದನ್ನು ಧನರಾಜ್ ಅವರೇ ಹೇಳಿದ್ದರು.
ಗುರುವಾರದ ಸಂಚಿಕಯಲ್ಲ ಬಿಗ್ ಬಾಸ್ ಈ ಬಗ್ಗೆ ಧನರಾಜ್ ಬಳಿ ಪ್ರಶ್ನೆ ಮಾಡಿದ್ದು, ತಪ್ಪು ಒಪ್ಪಿಕೊಂಡಿರುವ ಧನರಾಜ್ ತನ್ನನ್ನು ಎಲಿಮಿನೇಷನ್ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಧನರಾಜ್ ಮಾಡಿದ ತಪ್ಪಿನಿಂದ ಇಡೀ ವಾರದ ಆಟದ ನಿಜವಾದ ಗೆಲುವು ಯಾರಿಗೆ ಎನ್ನುವುದೇ ಸರಿಯಾಗಿ ನಿರ್ಧಾರವಾಗಲಿಲ್ಲ.
ಈ ವಾರ ಡಬಲ್ ಶಾಕ್ ಪಕ್ಕಾ
ಇನ್ನು ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದರೂ ಈ ವಾರ ಇಬ್ಬರು ಮನೆಗೆ ಹೋಗುವುದು ಖಚಿತವಾಗಿದೆ. ಹನುಮಂತು ಮಾತ್ರ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದು ಉಳಿದ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಮೋಕ್ಷಿತಾ, ರಜತ್, ಭವ್ಯ, ತ್ರಿವಿಕ್ರಮ್, ಧನರಾಜ್, ಮಂಜು, ಮೋಕ್ಷಿತಾ ನಾಮಿನೇಟ್ ಆಗಿದ್ದು ಇವರಲ್ಲಿ ಇಬ್ಬರು ಹೊರಬರುವುದು ಖಚಿತವಾಗಿದೆ.
ಫಿನಾಲೆ ಹತ್ತಿರುವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ಜಗಳ ಜೋರಾಗಿದೆ. ಪರಸ್ಪರ ಆರೋಪ ಮಾಡಿಕೊಂಡು, ವಿವಿಧ ಕಾರಣ ನೀಡಿ ಎಲಿಮಿನೇಷನ್‌ಗೆ ಹೆಸರು ನೀಡಿದ್ದು ಸ್ಪರ್ಧಿಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ರಜತ್ ಮತ್ತು ಮಂಜು ನಡುವೆ ಜೋರಾಗಿ ವಾದ ವಿವಾದ ನಡೆಯಿತು. ತ್ರಿವಿಕ್ರಮ್ ಭವ್ಯ ಹೆಸರು ನಾಮಿನೇಟ್ ಮಾಡಿದ್ದು ಅಚ್ಚರಿ ಮೂಡಿಸಿತು. ಭವ್ಯ ಆಟದಲ್ಲಿ ಮೋಸ ಮಾಡಿದ್ದಾರೆ, ಹನುಮಂತು ಮೇಲೆ ಹಲ್ಲೆ ಮಾಡಿದ್ದನ್ನು ಕಾರಣ ನೀಡಿ ನಾಮಿನೇಟ್ ಮಾಡಿದರು.
ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಧನರಾಜ್‌ಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದ. ಹನುಮಂತು ಕೂಡ ಉಸ್ತುವಾರಿಯನ್ನು ನಿಭಾಯಿಸುವಲ್ಲಿ ಎಡವಿದ್ದು ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಳ್ಳಬಹುದು. ಮಿಡ್ ವೀಕ್ ಎಲಿಮಿನೇಷ್‌ನಿಂದ ಪಾರಾಗಿದ್ದರು ಇನ್ನು ಮೂರು ದಿನಗಳಲ್ಲಿ ಇಬ್ಬರು ಮನೆಯಿಂದ ಹೊರ ಬೀಳುವುದಂತೂ ಖಚಿತವಾಗಿದೆ.












Click it and Unblock the Notifications