'ಇಲ್ಲಿಂದಲೇ ಮನೆಗೆ ಕಳುಹಿಸುತ್ತೇನೆ': ಬಿಗ್ ಬಾಸ್ ಆರಂಭದಲ್ಲೇ ಧನರಾಜ್ ಆಚಾರ್‌ಗೆ ವಾರ್ನಿಂಗ್ ಯಾಕೆ..?
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿದ್ದು, ಹದಿನೇಳು ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಪೈಕಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಸೋಶಿಯಲ್ ಮೀಡಿಯಾ ಸ್ಟಾರ್ ಧನರಾಜ್ ಆಚಾರ್ ಕೂಡ ಒಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಧನರಾಜ್ ಆಚಾರ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೆಂಡತಿ ಹಾಗೂ ತನ್ನ ಕುಟುಂಬದ ಜೊತೆ ಕಾಮಿಡಿ ವಿಡಿಯೋಗಳನ್ನು ಮಾಡುವ ಮೂಲಕ ಜನಪ್ರಿಯತೆ ಪಡೆದ ಧನರಾಜ್ ಆಚಾರ್ ಗಿಚ್ಚಿ ಗಿಲಿ ಗಿಲಿ ಶೋನಲ್ಲೂ ಭಾಗಿಯಾಗಿದ್ದರು. ಅಲ್ಲದೇ ಅಬ್ಬಬ್ಬಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಸದಾ ನಗು ಮುಖದ ಧನರಾಜ್ ಆಚಾರ್ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನವೇ ವೇದಿಕೆ ಮೇಲೆ ಕಣ್ಣೀರಿಟ್ಟ ಸನ್ನಿವೇಶ ನಡೆದಿದೆ.

ಕಳೆದ ಬಿಗ್ ಬಾಸ್ ಸೀಜನ್ ವೇಳೆ ಧನರಾಜ್ ಬಿಗ್ ಬಾಸ್ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಜಗಳ ನಡೆಯುವುದು ಟಿಆರ್‌ಪಿಗಾಗಿ ಎಂದು ಹೇಳುವ ರೀತಿಯಲ್ಲಿ ಮಾಡಲಾಗಿತ್ತು. ಈ ವಿಡಿಯೋವನ್ನು ವೇದಿಕೆ ಮೇಲೆ ಪ್ಲೇ ಮಾಡಲಾಯಿತು. ವೇದಿಕೆಯಲ್ಲಿ ಈ ವಿಡಿಯೋ ನೋಡಿ ಶಾಕ್ ಆದ ಧನರಾಜ್ ಮೇಕಪ್ ವಿಷಯವಾಗಿ ಮಾಡಿರುವ ಕಟೆಂಟ್ ಇದು. ತಮಾಷೆಗಾಗಿ ಮಾಡಿದ್ದು ಎಂದು ಉತ್ತರ ಕೊಟ್ಟಿದ್ದಾರೆ.
ಈ ವೇಳೆ ಕಿಚ್ಚ ಸುದೀಪ್ ಮಾತನಾಡಿದ್ದು, ನಿಮ್ಮ ಕಣ್ಣಿಗೆ ನಾವು ಹೇಗೆ ಕಾಣಿಸುತ್ತೇವೆ. ನಾನು ತಮಾಷೆ ಮಾಡುವವನ ರೀತಿ ನಿಮಗೆ ಕಾಣಿಸುತ್ತೇನಾ..? ಹೆಂಗೆ ಕಾನಿಸುತ್ತಿದ್ದೇವೆ ನಾವು ನಿಮಗೆ? ಜಗಳ ಮಾಡುವುದು ಟಿಆರ್‌ಪಿಗಾ? ನಿಮಗೋಸ್ಕರ ನಾನು ನೋಡುವುದನ್ನು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ನೀವು ಮಾತನಾಡಿದ್ದು ನಮ್ಮ ಶೋ ಬಗ್ಗೆ ಎಂದು ಬಹಳ ಗರಂ ಫೇಸ್‌ನಲ್ಲಿ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಟಿಆರ್‌ಪಿಗಾಗಿ ಜಗಳ ಅಂದರೆ ವಿವರಿಸಿ, ಅಂದರೆ ಜಗಳ ಮಾಡಿಲ್ಲ ಅಂದರೆ ಟಿಆರ್‌ಪಿ ಬರಲ್ವಾ? ನಾಳೆ ಮನೆಗೆ ಹೋಗಿ ಜಗಳ ಬಂದರೆ ಏನು ಮಾಡುತ್ತೀರಿ. ನೀವ್ಯಾಕೆ ಹೋಗುತ್ತಿದ್ದೀರಿ ಈ ಶೋ ಒಳಗೆ ಮತ್ತೆ? ಈ ಬಗ್ಗೆ ನನಗೆ ಉದಾಹರಣೆ ಕೊಡಿ ಇಲ್ಲ ಅಂದರೆ ಇಲ್ಲಿಂದನೇ ಮನೆಗೆ ಕಳುಹಿಸುತ್ತೇನೆ ಎಂದು ಖಡಕ್ ಆಗಿ ಮಾತನಾಡಿದ್ದಾರೆ.
ಬಿಗ್ ಬಾಸ್‌ಗೆ ನನ್ನ ಒಂದು ಪ್ರಶ್ನೆ ಈ ಶೋ ಬಗ್ಗೆ ಗೌರವನೇ ಇಲ್ಲದಿರುವ ವ್ಯಕ್ತಿಯನ್ನು ಒಳಗೆ ಕಳುಹಿಸುತ್ತಿದ್ದೀರಾ ತಾವು ಎಂದಿರುವ ಕಿಚ್ಚ ಸುದೀಪ್ ವಿವರಿಸಿ ಎಂದು ಧನರಾಜ್‌ಗೆ ಸಮಯ ಕೊಟ್ಟಿದ್ದಾರೆ. ಈ ವೇಳೆ ಧನರಾಜ್ ನಾನೇನು ಹೇಳಲಿ ಸರ್ ಎಂದು ಕಣ್ಣು ತುಂಬಿಕೊಂಡಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಹೆಂಗೆ ಎನ್ನುವ ಮೂಲಕ ಇದು ನಾವು ಕೂಡ ಇದನ್ನು ತಮಾಷೆಗಾಗಿ ಮಾಡಿರುವುದು ಎನ್ನುವುದನ್ನು ತಿಳಿಸಿದ್ದು, ಧನರಾಜ್ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಭಾವುಕರಾಗಿ ಧನರಾಜ್ ಕಣ್ಣೀರು ಹಾಕಿದ್ದಾರೆ.












Click it and Unblock the Notifications