Deepika Padukone: ಧುರಂಧರ್-2 ಸಿನಿಮಾ ನಿಮ್ಮೆಲ್ಲರಿಗಿಂತ ಮೊದಲೇ ನೋಡಿದ್ದೇನೆ: ಟ್ರೋಲ್‌ಗಳಿಗೆ ದೀಪಿಕಾ ಪಡುಕೋಣೆ ಕೌಂಟರ್
ಪತಿ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದರೂ, ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ ಮತ್ತು ಪ್ರೀಮಿಯರ್ ಶೋಗೂ ಗೈರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. "ಇದು ಉದ್ದೇಶಪೂರ್ವಕ ಮೌನವೇ ಅಥವಾ ದಂಪತಿಗಳ ನಡುವೆ ಏನಾದರೂ ಸಮಸ್ಯೆಯಿದೆಯೇ?" ಎಂದು ಪ್ರಶ್ನಿಸಿದ್ದ ಟ್ರೋಲ್‌ಗಳಿಗೆ ದೀಪಿಕಾ ಈಗ ನೇರವಾಗಿಯೇ ಉತ್ತರಿಸಿದ್ದಾರೆ.
ಯಾರ ಮೇಲೆ ಜೋಕ್?
ವೈರಲ್ ಆಗಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ಕಾಮೆಂಟ್ ಮಾಡಿರುವ ದೀಪಿಕಾ, "ನಾನು ನಿಮ್ಮೆಲ್ಲರಿಗಿಂತ ಮೊದಲೇ ಆ ಸಿನಿಮಾವನ್ನು ನೋಡಿದ್ದೇನೆ. ಈಗ ಯಾರ ಮೇಲೆ ಜೋಕ್ ಮಾಡಿದಂತಾಯಿತು?" ಎಂದು ಹಾಸ್ಯಮಯವಾಗಿ ತಿರುಗೇಟು ನೀಡಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡುವುದು ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಮಾತ್ರವೇ ಬೆಂಬಲದ ಸಂಕೇತವಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ದೀಪಿಕಾ ಅವರ ಈ ಉತ್ತರವನ್ನ ಕಂಡು ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, "ಅವರು ರಣವೀರ್ ಜೊತೆಯೇ ಇರುತ್ತಾರೆ, ಅವರಿಗೆ ಸಿನಿಮಾ ತೋರಿಸಲು ಪ್ರೀಮಿಯರ್ ಶೋ ಬೇಕಿಲ್ಲ" ಎಂದು ಬೆಂಬಲ ಸೂಚಿಸಿದ್ದಾರೆ.

ದೀಪಿಕಾ ಪಡುಕೋಣೆ ಅವರು ಟ್ರೋಲ್‌ಗೆ ಒಳಗಾಗಲು ಮುಖ್ಯ ಕಾರಣ ಅವರ ಪತಿ ರಣವೀರ್ ಸಿಂಗ್ ನಟನೆಯ ಸೂಪರ್ ಹಿಟ್ ಸಿನಿಮಾ 'ಧುರಂಧರ್: ದಿ ರಿವೆಂಜ್' ಯಶಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಂಚಿಕೊಳ್ಳದಿರುವುದು. ಅಭಿಮಾನಿಗಳು ಮತ್ತು ನೆಟ್ಟಿಗರು ಇವರ ಮೌನವನ್ನು ಟೀಕಿಸಲು ಇದೇ ಕಾರಣವಾಗಿತ್ತು.
ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ದೀಪಿಕಾ ಯಾವುದೇ ಸಾರ್ವಜನಿಕ ಅಭಿನಂದನೆ ಸಲ್ಲಿಸಿಲ್ಲ ಎಂಬುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್‌ಸ್ಟಾಗ್ರಾಂನ ಕೆಲವು ಪುಟಗಳು ಇವರ ಮೌನವನ್ನು ಉದ್ದೇಶಪೂರ್ವಕ ನಿರ್ಲಕ್ಷ್ಯ ಎಂದು ಕರೆದಿದ್ದವು. ಇದು ದಂಪತಿಗಳ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯದ ಸಂಕೇತವಿರಬಹುದೇ ಎಂದೂ ಕೆಲವರು ಊಹಿಸಿದ್ದರು.
2025ರ ಡಿಸೆಂಬರ್‌ನಲ್ಲಿ 'ಧುರಂಧರ್' ಮೊದಲ ಭಾಗ ಬಿಡುಗಡೆಯಾದಾಗ ದೀಪಿಕಾ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿ ತಂಡವನ್ನು ಕೊಂಡಾಡಿದ್ದರು. ಈ ಬಾರಿ ಅಂತಹ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಟ್ರೋಲಿಗರಿಗೆ ಆಹಾರವಾಗಿತ್ತು. ಈ ಎಲ್ಲ ಟ್ರೋಲ್‌ಗಳಿಗೆ ಇನ್‌ಸ್ಟಾಗ್ರಾಂ ಕಮೆಂಟ್ ಮೂಲಕ ಉತ್ತರಿಸಿದ ದೀಪಿಕಾ, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳೇ ಪ್ರೀತಿ ಅಥವಾ ವೃತ್ತಿಪರ ಬೆಂಬಲದ ಸೂಚಕವಲ್ಲ ಎಂಬ ಸಂದೇಶ ನೀಡಿದ್ದಾರೆ. ನಾನು ನಿಮ್ಮೆಲ್ಲರಿಗಿಂತ ಮೊದಲೇ ಸಿನಿಮಾ ನೋಡಿದ್ದೇನೆ ಎಂದು ಹೇಳುವ ಮೂಲಕ, ಸಾರ್ವಜನಿಕ ಪ್ರದರ್ಶನಕ್ಕಿಂತ ವೈಯಕ್ತಿಕವಾಗಿ ಪತಿಗೆ ನೀಡುವ ಬೆಂಬಲವೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
₹1600 ಕೋಟಿ ಗಳಿಕೆ
ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಸಿನಿಮಾ ಜಾಗತಿಕವಾಗಿ ₹1600 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ರಣವೀರ್ ಸಿಂಗ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಈ ಚಿತ್ರವನ್ನು ನೋಡಿ ರಣವೀರ್ ಅಭಿನಯವನ್ನು ಕೊಂಡಾಡಿದ್ದರು.












Click it and Unblock the Notifications