ಬಿಗ್ ಬಜೆಟ್ ಸಿನಿಮಾಗೆ ಇಷ್ಟೆಲ್ಲ ಡಿಮ್ಯಾಂಡ್ ಇಡೋದಾ? ನಟಿ ದೀಪಿಕಾ ಪಡುಕೋಣೆಗೆ ಗೇಟ್‌ಪಾಸ್
ಮೂಲತಃ ಕನ್ನಡತಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರು ಬಾಲಿವುಡ್‌ನ ಟಾಪ್ ಹೀರೋಯನ್‌ಗಳಲ್ಲಿ ಒಬ್ಬರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಆಗಿದ್ದಾರೆ. ಒಂದು ಸಿನಿಮಾದಲ್ಲಿ ನಟಿಸಲು ಕೋಟಿ ಕೋಟಿ ಸಂಭಾವನೆ ಕೇಳ್ತಾರೆ ಅನ್ನೋದು ಗೊತ್ತಿರೋ ವಿಚಾರ. ಹೀಗಾಗಿ ಬಿಗ್ ಬಜೆಟ್‌ನ ಸಿನಿಮಾ ನಟಿಸುವ ಅವಕಾಶ ಒದಗಿ ಬಂದಿತ್ತು. ಆದ್ರೆ ಟಾಪ್ ಹೀರೋಯಿನ್ ಅಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡಿದ್ದಾರಂತೆ ದೀಪಿಕಾ. ಇದೆಲ್ಲ ನಮ್ಮಿಂದ ಆಗಲ್ಲ ಬಿಡಿ ಎಂದು ಕೊನೆಗೆ ದೀಪಿಕಾ ಅವರಿಗೆ ಸಿನಿಮಾದಿಂದ ಗೇಟ್‌ಪಾಸ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ದೀಪಿಕಾ ಪಡುಕೋಣೆ ಒಂದಲ್ಲ, ಇದೇ ರೀತಿಯ ಎರಡು ಸಿನಿಮಾಗಳಿಂದ ಹೊರನಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಸಂದೀಪ್ ರೆಡ್ಡಿ ವಂಗಾ ಅವರ ಬಹುನಿರೀಕ್ಷಿತ ಸ್ಪಿರಿಟ್ ಸಿನಿಮಾದಿಂದಲೂ ದೀಪಿಕಾ ಹೊರಬಂದಿದ್ದರು. ಈಗ ಅಧಿಕೃತವಾಗಿ ನಟ ಪ್ರಭಾಸ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವಾದ "ಕಲ್ಕಿ 2898 AD"ಯ ಸೀಕ್ವೆಲ್‌ನಿಂದಲೂ ಕೈಬಿಡಲಾಗಿದೆ .

ನಟ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಇದರ ಸೀಕ್ವೆಲ್‌ನಲ್ಲೂ ದೀಪಿಕಾ ಅವರ ಪಾತ್ರವೇ ಹೈಲೈಟ್ ಎಂಬ ಸುಳಿವು ನೀಡಿತ್ತು. ಆದರೆ ದಿಢೀರನೆ ದೀಪಿಕಾ ಅವರಿಗೆ ಗೇಟ್‌ಪಾಸ್ ನೀಡಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ಕಲ್ಕಿ ಮುಂಬರುವ ಭಾಗದಲ್ಲಿ ದೀಪಿಕಾ ಅವರು ನಟಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದೇವೆ. ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ನಾವು ಬೇರೆಯಾಗಲು ನಿರ್ಧರಿಸಿದ್ದೇವೆ. ಮೊದಲ ಚಿತ್ರ ಮಾಡುವ ದೀರ್ಘ ಪ್ರಯಾಣದ ಹೊರತಾಗಿಯೂ, ನಮಗೆ ಪಾಲುದಾರಿಕೆ ಮುಂದುವರಿಯುವುದಿಲ್ಲ. ಕಲ್ಕಿ ಸಿನಿಮಾ ಕಮಿಟ್‌ಮೆಂಟ್‌ಗೆ ಅರ್ಹವಾಗಿದೆ, ಇನ್ನೂ ಹೆಚ್ಚಿನದನ್ನು ಹೊಂದಿದೆ. ಅವರ ಭವಿಷ್ಯದ ಕೆಲಸಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

ಹೆಚ್ಚು ಸಂಭಾವನೆ, ಐಷಾರಾಮಿ ವಸತಿಗೆ ಬೇಡಿಕೆ
ವರದಿಗಳ ಪ್ರಕಾರ ದೀಪಿಕಾ ತನ್ನ ಸಂಭಾವನೆಯಲ್ಲಿ ಶೇಕಡಾ 25ರಷ್ಟು ಹೆಚ್ಚು ಬೇಡಿಕೆ ಇಟ್ಟಿದ್ದಾರೆ ಹಾಗೂ ದಿನಕ್ಕೆ 7 ಗಂಟೆ ಮಾತ್ರವೇ ಕಾಲ್‌ಶೀಟ್ ಕೊಡುವುದಾಗಿ ಬೇಡಿಕೆ ಇಟ್ಟಿದ್ದಾರಂತೆ. ಇದರಿಂದ ಕಲ್ಕಿ-2 ತಯಾರಕರು ದೀಪಿಕಾ ಅವರನ್ನು ಸಿನಿಮಾದಿಂದ ಕೈಬಿಡಲು ನಿರ್ಧರಿಸಿದ್ದಾರೆ. ಅಲ್ಲದೆ ದೀಪಿಕಾ ತನ್ನ ಟೀಂನ 25 ಮಂದಿಗೂ ಚಿತ್ರೀಕರಣದ ವೇಳೆ ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ ಹಾಗೂ ಐಷಾರಾಮಿ ಆಹಾರದ ವೆಚ್ಚವನ್ನು ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಲ್ಕಿ 2898 AD ಚಿತ್ರದ ಮುಂದಿನ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವೈಜಯಂತಿ ಮೂವೀಸ್ ಘೋಷಿಸಿದೆ. ಇದರಿಂದ ದೀಪಿಕಾ ಅವರ ಅಭಿಮಾನಿಗಳು ಶಾಕ್‌ನಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಮತ್ತು ಅಮಿತಾಬ್ ಬಚ್ಚನ್, ಪ್ರಭಾಸ್ ಮತ್ತು ಕಮಲ್ ಹಾಸನ್ ಅವರ ತಾರಾಬಳಗದ ಈ ಸಿನಿಮಾದಲ್ಲಿ ದೀಪಿಕಾ ಮುಂದುವರಿಯುವುದಿಲ್ಲ ಎಂದು ವೈಜಯಂತಿ ಮೂವೀಸ್ ಸ್ಪಷ್ಟಪಡಿಸಿದೆ.












Click it and Unblock the Notifications