Deepika Padukone: ಮಗಳ ವಿಡಿಯೋ ರೆಕಾರ್ಡ್ ಮಾಡಿದ್ದಕ್ಕೆ ದೀಪಿಕಾ ಪಡುಕೋಣೆ ಹೀಗಾ ಮಾಡೋದು?
ಬಾಲಿವುಡ್ ಬ್ಯೂಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಅವರು ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ದೀಪಿಕಾ ಮತ್ತು ನಟ ರಣವೀರ್ ಸಿಂಗ್ ದಂಪತಿಗೆ ದುವಾ ಎನ್ನುವ ಮುದ್ದಾದ ಮಗಳು ಕೂಡ ಇದ್ದಾಳೆ. ಮಗುವಿನ ವಿಚಾರವಾಗಿ ಗೌಪ್ಯತೆ ಕಾಯ್ದುಕೊಂಡಿರುವ ದೀಪಿಕಾ ಜೋಡಿ ಪುತ್ರಿಯ ಮುಖ ರಿವೀಲ್ ಮಾಡದೆ ಜಾಗ್ರತೆ ವಹಿಸಿದ್ದರು. ಆದರೆ ಇದನ್ನೂ ಮೀರಿ ದೀಪಿಕಾ ಪುತ್ರಿಯ ವಿಡಿಯೋ ವೈರಲ್ ಮಾಡುವ ಮೂಲಕ ಮುಖ ರಿವೀಲ್ ಮಾಡಲಾಗಿದೆ. ಈ ವಿಚಾರ ತಿಳಿದು ದೀಪಿಕಾ ಪಡುಕೋಣೆ ಫುಲ್ ಗರಂ ಆಗಿದ್ದಾರೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಡಿಯೋ ತೆಗೆಯಲಾಗಿದ್ದು, ದುವಾ ಮುಖ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಒಪ್ಪಿಗೆಯಿಲ್ಲದೆ ಸೋರಿಕೆಯಾಗಿದೆ. ಈ ಕ್ಲಿಪ್‌ನಲ್ಲಿ ಒಂದು ವರ್ಷದ ಮಗು ದೀಪಿಕಾ ಅವರ ಮಡಿಲಲ್ಲಿ ಕುಳಿತಿರುವುದನ್ನು ಸ್ಪಷ್ಟವಾಗಿ ಸೆರೆಹಿಡಿದಿದೆ. ಇದು ಅವರ ಅಭಿಮಾನಿಗಳಲ್ಲಿ ಕೂಡ ಆಕ್ರೋಶ ಹುಟ್ಟುಹಾಕಿದೆ. ದೀಪಿಕಾ ಅವರ ಗೌಪ್ಯತೆಯ ಮೇಲೆ ನಾಚಿಕೆಗೇಡಿನ ಆಕ್ರಮಣ ಎಂದು ವಿಡಿಯೋ ಹಿಡಿದವನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ದೀಪಿಕಾ ಏನ್ ಮಾಡಿದ್ರು?
ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಆ ವ್ಯಕ್ತಿಯನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಕೋಪದಿಂದ ಹೇಳುತ್ತಿರುವುದು ಕಂಡುಬಂದಿದೆ. ದುವಾ ಅವರನ್ನು ಕ್ಯಾಮೆರಾಗಳಿಂದ ದೂರವಿಡುವಂತೆ ದೀಪಿಕಾ-ರಣವೀರ್ ಮನವಿ ಮಾಡಿದ್ದರು. ಇದನ್ನ ಪಾಪರಾಜಿಗಳು ಕೂಡ ಗೌರವಿಸಿದ್ದರು. ಆದರೂ ವ್ಯಕ್ತಿಯೊಬ್ಬ ಮಗುವಿನ ವಿಡಿಯೋ ತೆಗೆದು ಮುಖ ಕಾಣುವಂತೆ ಮಾಡಿದ್ದಾನೆ. ನೆಟ್ಟಿಗರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಆ ವಿಡಿಯೋ ತೆಗೆದುಹಾಕುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ದಯವಿಟ್ಟು ಈ ವಿಡಿಯೋವನ್ನು ತೆಗೆದುಹಾಕಿ, ದುವಾ ಅವರ ಫೋಟೋ ಹಂಚಿಕೊಳ್ಳಲು ದಂಪತಿ ಎಂದಿಗೂ ಬಯಸುವುದಿಲ್ಲ. ಪೋಷಕರು ಅನುಮತಿ ನೀಡದಿದ್ದರೆ ಇದನ್ನು ಪೋಸ್ಟ್ ಮಾಡುವುದು ಸರಿಯಲ್ಲ. ಇದು ಅವರ ಗೌಪ್ಯತೆಯ ಮೇಲೆ ಮಾಡಿರುವ ದಾಳಿ. ದೀಪಿಕಾ ತನ್ನ ಮಗುವಿನ ಮುಖವನ್ನು ತೋರಿಸಬೇಡಿ ಎಂದು ಜನರನ್ನು ಬಹಿರಂಗವಾಗಿ ಕೇಳಿಕೊಂಡಿದ್ದಾರೆ. ಆದರೂ ಯಾರೋ ಒಬ್ಬರು ಅದನ್ನು ಚಿತ್ರೀಕರಿಸಿದ್ದಾರೆ. ಇದು ನಿಜಕ್ಕೂ ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ.

ದೀಪಿಕಾ ಮತ್ತು ರಣವೀರ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಸೆಪ್ಟೆಂಬರ್ 8ರಂದು ದುವಾ ಅವರನ್ನು ಸ್ವಾಗತಿಸಿದ್ದರು. ದೀಪಾವಳಿಯ ಸಮಯದಲ್ಲಿ ಅವರು ತಮ್ಮ ಮಗಳ ಹೆಸರು ದುವಾ ಎಂದು ಪರಿಚಯಿಸಿದ್ದರು. ದುವಾ ಅಂದರೆ ಪ್ರಾರ್ಥನೆ, ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಎಂದು ಹೇಳಿಕೊಂಡಿದ್ದರು. ಒಮ್ಮೆ ತಮ್ಮ ಮಗಳನ್ನು ಭೇಟಿಯಾಗಲು ಪಾಪರಾಜಿಗಳನ್ನು ಮನೆಗೆ ಆಹ್ವಾನಿಸಿದ್ದರು. ಮಗಳ ಫೋಟೋ ರಿವೀಲ್ ಮಾಡಬೇಡಿ ಎಂದು ಮನವಿ ಮಾಡಿದ್ದರಿಂದ ಪಾಪರಾಜಿಗಳು ಅದನ್ನು ಗೌರವಿಸಿದ್ದರು.












Click it and Unblock the Notifications