Darshan Thoogudeepa: ದರ್ಶನ್ ಅಭಿಮಾನಿಗಳಿಗೆ ಗುಡ್ನ್ಯೂಸ್; ರಿಲೀಸ್ ಆಗುವ ಡೇಟ್ ನುಡಿದ ದೈವ
ಬಳ್ಳಾರಿ, ಸೆಪ್ಟೆಂಬರ್ 05: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿರುವ ಪೋಟೋ ಸದ್ಯ ವೈರಲ್ ಆಗಿದ್ದು, ದರ್ಶನ್ ವಿರುದ್ಧ ಮತ್ತಷ್ಟು ತನಿಖೆ ಚುರುಕಾಗಿದೆ.
ನಟ ದರ್ಶನ್ ಹಾಗೂ ಅವರ ಗ್ಯಾಂಗ್ ನವರು ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಫೋಟೋಗಳನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವು ವೈರಲ್ ಆಗುತ್ತಿವೆ. ಹೀಗಾಗಿ ದರ್ಶನ್ ಅಂಡ್ ಗ್ಯಾಂಗ್ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ನಟ ದರ್ಶನ್ ಅವರ ಬಿಡುಗಡೆಗೆ ಕಾದುಕುಳಿತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ದರ್ಶನ್ ಅವರ ಬಿಡುಗಡೆ ಕುರಿತು ಸಾಕಷ್ಟು ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ಹರಕೆಗಳನ್ನ ಮಾಡಿಕೊಂಡಿದ್ದಾರೆ. ನಟ ದರ್ಶನ ಬಿಡುಗಡೆಗಾಗಿ ಫೋಟೋ ಹಿಡಿದು ದೈವದ ಮೊರೆ ಹೋದ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿ ಸಿಕ್ಕಿದೆ. ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದಲ್ಲಿರುವ ಬೀರಲಿಂಗೇಶ್ವರ ದೈವದ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ದೈವ ನುಡಿದ ಮಾತಿಗೆ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಆ ವೇಳೆ ಬೀರಲಿಂಗೇಶ್ವರ ದೈವದ ಬಳಿ ದರ್ಶನ ಬಿಡುಗಡೆ ದಿನಾಂಕವನ್ನು ಅಭಿಮಾನಿಗಳು ಕೇಳಿದ್ದಾರೆ. ಇದೀಗ ದರ್ಶನ್ ಭಾವಚಿತ್ರ ಮೇಲೆ ತಲೆಯಿಟ್ಟು ದೈವ್ ನುಡಿದ ಮಾತು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮೂರು ತಿಂಗಳ ಬಳಿಕ ದರ್ಶನ್ ಹೊರ ಬರ್ತಾನೆ ಎಂದು ಬೀರಲಿಂಗೇಶ್ವರ ದೈವ ನುಡಿದಿದೆ. ದರ್ಶನ್ ಬಿಡುಗಡೆ ಬಗ್ಗೆ ದೈವ ಹೇಳಿದ ಮಾತುಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.












Click it and Unblock the Notifications