Darshan vs Pratham: ಪ್ರಥಮ್ ನಿನಗೆ ಎಷ್ಟು ಜನ ಅಪ್ಪಂದಿರು? ಒಳ್ಳೆಯ ಹುಡುಗನಿಗೆ ಡಿ-ಬಾಸ್ ಫ್ಯಾನ್ಸ್ ಪ್ರಶ್ನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ಜೈ ಡಿ-ಬಾಸ್ ಎಂದು ಕೂಗಿದ್ದಕ್ಕೆ 'ನಿಮ್ಮ ಅಪ್ಪ-ಅಮ್ಮ ಮಾತ್ರ ನಿಮಗೆ ಬಾಸ್ ಆಗಬೇಕು. ಬೇರೆ ಯಾರೂ ಕೂಡ ನಿಮಗೆ ಬಾಸ್ ಅಲ್ಲ' ಎಂದು ಬುದ್ಧಿಮಾತು ಹೇಳಿದ್ದರು ನಟ ಪ್ರಥಮ್. ಇದಕ್ಕೆ ಈಗ ಡಿ-ಬಾಸ್‌ ಅಭಿಮಾನಿಗಳು ಕೌಂಟರ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ವಿರುದ್ಧ ಸಿಡಿದೆದ್ದಿದ್ದಾರೆ ದರ್ಶನ್ ಅಭಿಮಾನಿಗಳು. ಅಪ್ಪ-ಅಮ್ಮ ಮಾತ್ರ ಬಾಸ್ ಎಂದ ಒಳ್ಳೆ ಹುಡುಗು ಪ್ರಥಮ್‌ಗೆ ಎಷ್ಟು ಜನ ಅಪ್ಪಂದಿರು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಹೌದು... ಪ್ರಥಮ್‌ಗೆ ಈ ರೀತಿ ಪ್ರಶ್ನೆ ಮಾಡಲು ಕಾರಣ ಇದೆ. ನಟ ಡಾಲಿ ಧನಂಜಯ್ ಅವರ ಮದುವೆಯಲ್ಲಿ ಭಾಗಿಯಾಗಿದ್ದ ನಟ ಪ್ರಥಮ್ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಜನ 'ಜೈ ಡಿ-ಬಾಸ್' ಎಂದು ಕೂಗಿದ್ದರು. ಆಗ ಪ್ರಥಮ್ 'ನಿಮ್ಮ ಅಪ್ಪ-ಅಮ್ಮನಿಗೆ ಮಾತ್ರ ನೀವು ಬಾಸ್ ಅನ್ನಬೇಕು. ಅವರನ್ನು ಬಿಟ್ಟರೆ ನಿಮಗೆ ಬೇರೆ ಯಾರೂ ಕೂಡ ಬಾಸ್ ಅಲ್ಲ. ಇಲ್ಲಿ ಯಾರಿಗೆ ನಿಮ್ಮ ಅಪ್ಪ-ಅಮ್ಮ ಬಾಸ್ ಅಲ್ಲ ಮುಂದೆ ಬನ್ನಿ' ಎಂದು ಕರೆದಿದ್ದರು. ಈ ಮಾತು ಡಿ-ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕಾಗಿ ಪ್ರಥಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ ದಾಸನ ಅಭಿಮಾನಿಗಳು.

Darshan vs Pratham how many fathers does pratham have D-Boss fans have asked question

ಯಾರಿಗೂ ಬಾಸ್ ಎನ್ನಬೇಡಿ ಎಂದು ಬಾಸ್ ಎಂದು ಕರೆದ ಪ್ರಥಮ್

ಯಾರಿಗೂ ಬಾಸ್ ಎನ್ನಬೇಡಿ ಎಂದು ಬುದ್ಧಿ ಹೇಳಿದ ಪ್ರಥಮ್ ಈ ಹಿಂದೆ ಯಾರಿಗೆಲ್ಲಾ ಬಾಸ್ ಎಂದಿದ್ದಾರೆ ಎನ್ನುವ ವೀಡಿಯೋಗಳನ್ನು ಹಂಚಿಕೊಂಡು ದರ್ಶನ್ ಅಭಿಮಾನಿಗಳು ಪ್ರಥಮ್‌ರನ್ನ ಸರಿಯಾಗಿ ಗುಮ್ಮಿದ್ದಾರೆ. ಪ್ರಥಮ್ ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ. ನೀತಿ ಪಾಠ ಮಾಡುವ ಪ್ರಥಮ್ ಈಗಾಗಲೇ ಸಾಕಷ್ಟು ಜನ ಸ್ಟಾರ್‌ ನಟರಿಗೆ ಬಾಸ್ ಎಂದು ಕರೆದಿದ್ದಾರೆ. ಹೀಗಿದ್ದರೂ ಕೂಡ ಬಾಸ್ ಎನ್ನಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ ಎಂದು ಕೆಂಡಕಾರಿದ್ದಾರೆ.

ಪ್ರಥಮ್ ಪ್ರಕಾರ ಅಪ್ಪ-ಅಮ್ಮ ಮಾತ್ರ ಬಾಸ್ ಅನ್ನೋದಾದರೆ, ಅವರು ಈವರೆಗೂ ಬಾಸ್ ಎಂದು ಕರೆದವರೆಲ್ಲಾ ಇವರ ಅಪ್ಪಂದಿರಾ? ಎಂದು ಡಿ-ಬಾಸ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಪ್ರಥಮ್ ಬಾಸ್ ಎಂದು ಕರೆದವರೆಲ್ಲಾ ಅವರ ಅಪ್ಪ ಆದರೆ ಪ್ರಥಮ್‌ಗೆ ಎಷ್ಟು ಜನ ಅಪ್ಪಂದಿರು ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಪ್ರಥಮ್ ಯಾರಿಗೆಲ್ಲಾ ಬಾಸ್ ಎಂದು ಕರೆದಿದ್ದಾರೆ?

Darshan vs Pratham how many fathers does pratham have D-Boss fans have asked question

ಪ್ರಥಮ್ ಯಾರಿಗೆಲ್ಲಾ ಬಾಸ್ ಎಂದು ಕರೆದಿದ್ದಾರೆ?

ಪ್ರಥಮ್ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಗೆ ಸುಮಾರು ಬಾರಿ ಬಾಸ್ ಎಂದು ಕರೆದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲ ಕಿಚ್ಚ ಸುದೀಪ್ ಅವರಿಗೂ ಪ್ರಥಮ್ ಬಾಸ್ ಎಂದು ಕರೆದಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್‌ಗೂ ಕೂಡ ಪ್ರಥಮ್ ಬಾಸ್ ಎಂದು ಕರೆದಿದ್ದಾರೆ.

ಜೊತೆಗೆ ಪವರ್‌ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೂ ಬಾಸ್ ಎಂದು ಕರೆದು ಬರೆದಿರುವ ಎಕ್ಸ್‌ ಪೋಸ್ಟ್‌ ಕೂಡ ವೈರಲ್ ಆಗಿದೆ. ಈ ನಾಲ್ಕು ಜನ ಅಷ್ಟೇ ಅಲ್ಲ ಅಂಬರೀಷ್ ಅವರನ್ನು ಅಂಬಿ ಬಾಸ್, ಸಿಎಂ ಸಿದ್ದರಾಮಯ್ಯ ಅವರಿಗೂ ಸಹ ಸಿದ್ದು ಬಾಸ್ ಎಂದು ಪ್ರಥಮ್ ಕರೆದಿದ್ದಾರೆ. ಹೀಗೆ ಬಾಸ್ ಎಂದ ಪ್ರಥಮ್ ಈಗ ಯಾರಿಗೂ ಬಾಸ್ ಎನ್ನಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ಹೀಗಾಗಿ ಡಿ-ಬಾಸ್ ಅಭಿಮಾನಿಗಳು ಮೊದಲು ಪ್ರಥಮ್ ನಿಮಗೆ ಎಷ್ಟು ಜನ ಅಪ್ಪಂದಿರು ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.

ದರ್ಶನ್ ಅವರ ಮೇಲಿನ ಹೊಟ್ಟೆಹುರಿಗೆ ಅವರನ್ನು ಮಾತ್ರ ಬಾಸ್ ಎಂದು ಕರೆಯಬೇಡಿ ಎಂದು ಪ್ರಥಮ್ ಹೇಳಿದ್ದಾರೆ ಎಂದು ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗೊಂಡಿದ್ದಾರೆ. 'ಲೇ ಪ್ರಥಮ್ ನಾವು ಅಪ್ಪನನ್ನು ಅಪ್ಪ ಅಂತಲೇ ಕರೆಯುತ್ತೇವೆ. ಅಪ್ಪನನ್ನು ಬಾಸ್ ಎಂದು ಕರೆಯಲು ಆಗಲ್ಲ. ಅಪ್ಪನನ್ನು ದೇವರು ಅಂತಾರೆ ಬಾಸ್ ಅನ್ನಲ್ಲ. ಬಾಸ್ ಅಂತ ದರ್ಶನ್ ಅವರನ್ನು ಕರೆಯೋದು ಅಭಿಮಾನದಿಂದ. ಅದು ನಿನ್ನಂಥ ಕಿತ್ತೋದನಿಗೆ ಅರ್ಥ ಆಗಲ್ಲ' ಎಂದು ಕಿಡಿ ಕಾರಿದ್ದಾರೆ. ಒಟ್ಟಿನಲ್ಲಿ ಪ್ರಥಮ್ ಮಾತಿಗೆ ಸಿಡಿದೆದ್ದ ದರ್ಶನ್ ಅಭಿಮಾನಿಗಳು ಹಿಗ್ಗಾಮುಗ್ಗಾ ಉಗಿದು ಕೌಂಟರ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+