Darshan Thoogudeepa: ಮನೆಯಲ್ಲಿ ಗಂಡನ ದರ್ಶನಕ್ಕಾಗಿ ಶಕ್ತಿದೇವತೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತೆ ದೇವರ ಮೊರೆ ಹೋಗಿದ್ದಾರೆ. ದರ್ಶನ್ ಜೈಲಿಗೆ ಹೋದ ಬಳಿಕ ಪತ್ನಿ ವಿಜಯಲಕ್ಷ್ಮಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಗೊತ್ತೇ ಇದೆ. ದರ್ಶನ್ ಜೈಲಿನಿಂದ ಬಿಡುಗಡೆಯಾಗಲೆಂದು ರಾಜ್ಯದಲ್ಲಿರುವ ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ವಿಜಯಲಕ್ಷ್ಮಿ ಈಗ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕೆ ಮತ್ತೆ ದೇವರ ಮೊರೆ ಹೋಗಿದ್ದಾರೆ.
ಹೌದು.. ಪತಿಯ ಶೀಘ್ರ ಬಿಡುಗಡೆಗೆ ವಿಜಯಲಕ್ಷ್ಮಿ ಶಕ್ತಿ ಪೀಠಗಳ ಮೊರೆ ಹೋಗಿದ್ದಾರೆ. ಅಸ್ಸಾಂನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಗುಲಗಳ ಭೇಟಿ ಬಗ್ಗೆ ತಮ್ಮ ಇನ್‌ಸ್ಟಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಕಾಮಾಕ್ಯ ದೇವಸ್ಥಾನ ಸಾಕಷ್ಟು ಶಕ್ತಿ ಪೀಠವಾಗಿದೆ. ಇಲ್ಲಿಗೆ ಭೇಟಿ ನೀಡಿ ದರ್ಶನ್ ಜೈಲಿನಿಂದ ಹೊರಬರಲೆಂದು ವಿಜಯಲಕ್ಷ್ಮಿ ಬೇಡಿಕೊಂಡಿದ್ದಾರೆ.

ಪಾರ್ಟಿ ಮಾಡಿದ ವಿಜಯಲಕ್ಷ್ಮಿ
ಒಂದು ಕಡೆ ದರ್ಶನ್ ಹಾಗೂ ಗ್ಯಾಂಗ್ ವಿಚಾರಣೆ ಪೂರ್ಣಗೊಳಿಸಿದ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಮತ್ತೊಂದೆಡೆ ವಿಜಯಲಕ್ಷ್ಮಿ ಪಾರ್ಟಿಗೆ ಹೋಗಿರುವುದು ಗೊತ್ತಾಗಿದೆ. ಇದರ ಕೆಲವೊಂದಿಷ್ಟು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ತಮ್ಮ ಗೆಳತಿ ಶ್ರುತಿ ರಮೇಶ್ ಅವರ ಬರ್ತಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮಿ ಪಾಲ್ಗೊಂಡಿದ್ದಾರೆ.
ಈ ಪಾರ್ಟಿಯಲ್ಲಿ ಸಿದ್ದರಾಮಯ್ಯ ಅವರ ಸೊಸೆ ಕೂಡ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಒಂದು ಕಡೆ ಪತಿಯ ಶೀಘ್ರ ಬಿಡುಗಡೆಗೆ ಟೆಂಪಲ್ ರನ್ ಮಾಡುತ್ತಿರುವ ವಿಜಯಲಕ್ಷ್ಮಿ ಪಾರ್ಟಿಯಲ್ಲಿ ಭಾಗಿಯಾಗಿರುವುದು ಅಚ್ಚರಿ ಮೂಡಿಸಿದೆ.

ಆತ್ಮೀಯ ಗೆಳತಿ ಬರ್ತಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮಿ ಭಾಗಿ
ವಿಜಯಲಕ್ಷ್ಮಿ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಹೌದು... ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಪೂಜೆ ಮಾಡಿದ ಪ್ರಸಾದವನ್ನು ದರ್ಶನ್ ಅವರಿಗೆ ಜೈಲಿಗೆ ಹೋದಾಗಲೆಲ್ಲ ನೀಡಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ನಡುವೆ ಕಳೆದ ದಿನ ವಿಜಯಲಕ್ಷ್ಮಿ ಪಾರ್ಟಿಯೊಂದರಲ್ಲಿ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ.
ಶ್ರುತಿ ರಮೇಶ್ ಅವರು ವಿಜಯಲಕ್ಷ್ಮಿಗೆ ತುಂಬಾ ಆತ್ಮಿಯ ಗೆಳತಿ. ಕಳೆದ ಬಾರಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವೆಡ್ಡಿಂಗ್ ಪಾರ್ಟಿಯನ್ನು ಶ್ರುತಿ ರಮೇಶ್ ಅವರೇ ಆರ್ಗನೈಝ್ ಮಾಡಿದ್ದರು ಎಂದು ಹೇಳಲಾಗುತ್ತದೆ. ಹೀಗಾಗಿ ಅವರ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಲು ವಿಜಯಲಕ್ಷ್ಮಿಗೆ ಆಹ್ಬಾನಿಸಿದ್ದರು. ತುಂಬಾ ಆತ್ಮೀಯರಾಗಿದ್ದರಿಂದ ವಿಜಯಲಕ್ಷ್ಮಿಗೆ ಭಾಗವಹಿಸಲು ಬಲವಂತ ಕೂಡ ಮಾಡಿದ್ದರು. ಹೀಗಾಗಿ ವಿಜಯಲಕ್ಷ್ಮಿ ಶ್ರುತಿ ರಮೇಶ್ ಅವರ ಬರ್ತಡೇ ಪಾರ್ಟಿಯಲ್ಲಿ ನಿನ್ನೆ ಭಾಗಿಯಾಗಿದ್ದಾರೆ ಎನ್ನಲಾಗುತ್ತದೆ. ಹೀಗಾಗಿ ಇಂಥಹ ಪರಿಸ್ಥಿತಿಯಲ್ಲೂ ನನ್ನ ಬರ್ತಡೆಗೆ ವಿಶ್ ಮಾಡಲು ವಿಜಯಲಕ್ಷ್ಮಿ ಬಂದಿದ್ದಾರೆ ಅಂತ ಶ್ರುತಿ ರಮೇಶ್ ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪವಿತ್ರಾ ಗೌಡಗೆ ದರ್ಶನ್‌ನಿಂದ ದುಬಾರಿ ಕಾರು
ಚಾರ್ಜ್‌ಶೀಟ್ ವಿಜಯಲಕ್ಷ್ಮಿ ಹೇಳಿಕೆಯಲ್ಲಿ ಪವಿತ್ರಾಗೌಡ ಬಗ್ಗೆ ಉಲ್ಲೇಖವಾಗಿದೆ. ಪವಿತ್ರಾಗೌಡಗೆ ರೇಂಜ್ ರೋವರ್ ಕಾರು ಕೊಡಲಾಗಿದೆ. ಇದನ್ನು ದರ್ಶನ್ ಖರೀದಿ ಮಾಡಿ ಪವಿತ್ರಾಗೆ ಕೊಟ್ಟಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿಜಯಲಕ್ಷ್ಮಿ ಹೇಳಿಕೆ ಕೊಟ್ಟಿದ್ದಾರೆ. ನನಗೆ ಆಪ್ತರಿಂದ ತಿಳಿದು ಬಂದಿರುವ ವಿಚಾರ ಇದು. ಈ ಬಗ್ಗೆ ನಾನು ದರ್ಶನ್‌ಗೆ ಕೇಳಿದ್ದೆ. ಆಗ ಅವರು ಅದು ನನ್ನ ದುಡ್ಡು ನನ್ನಿಷ್ಟ, ನಿನ್ಯಾರು ಕೇಳೋದಕ್ಕೆ ಅಂತ ದರ್ಶನ್ ನನಗೇ ಅವಾಜ್ ಹಾಕಿದ್ದರು ಅಂತ ವಿಜಯಲಕ್ಷ್ಮಿ ಹೇಳಿದ್ದಾರೆ.












Click it and Unblock the Notifications