Darshan Thoogudeepa: ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಮಾಡಿಸಲು ಹೆಂಡತಿಯ ಹೋರಾಟ!
ದರ್ಶನ್ ತೂಗುದೀಪ್ ತಮ್ಮ ಪತ್ನಿಗೆ ಎಷ್ಟೇ ತೊಂದರೆ ನೀಡಿದರೂ, ತಮ್ಮ ಗಂಡನ ಪರ ಹೋರಾಡುತ್ತಿರುವ ವಿಜಯಲಕ್ಷ್ಮಿ ದರ್ಶನ್ ಮತ್ತೊಮ್ಮೆ ಸಮಾಜದ ಗಮನ ಸೆಳೆದಿದ್ದಾರೆ. ಈ ಹಿಂದೆ ಸ್ವತಃ ತಮ್ಮ ಗಂಡ ದರ್ಶನ್ ತೂಗುದೀಪ್ ಅವರಿಂದ ಮಾರಣಾಂತಿಕ ಏಟು ತಿಂದು ಆಸ್ಪತ್ರೆಗೆ ಸೇರಿದ್ದರು ವಿಜಯಲಕ್ಷ್ಮಿ ದರ್ಶನ್. ಹಾಗೇ ಪವಿತ್ರಾ ಗೌಡ ವಿಚಾರದಲ್ಲಿ ಕೂಡ ಈ ರೀತಿ ಸಮಾಜದ ಎದುರು ದರ್ಶನ್ ಅವರಿಂದಾಗಿ ಅವಮಾನ ಎದುರಿಸಿದ್ದರು ವಿಜಯಲಕ್ಷ್ಮಿ ದರ್ಶನ್.
ಇಷ್ಟೆಲ್ಲಾ ಆದರೂ ಇದೀಗ ಕೊಲೆ ಆರೋಪ ಎದುರಿಸಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ತಮ್ಮ ಗಂಡ ದರ್ಶನ್ ತೂಗುದೀಪ್ ಅವರನ್ನ ಜೈಲಿಂದ ರಿಲೀಸ್ ಮಾಡಿಸಲು ಹೋರಾಡ್ತಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರನ್ನು ಬಿಟ್ಟು, ನೇರ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಏಕೆ ವಿಜಯಲಕ್ಷ್ಮೀ ದರ್ಶನ್? ಸಿದ್ದರಾಮಯ್ಯ ಅವರ ಬಗ್ಗೆ ದರ್ಶನ್ ಕುಟುಂಬಕ್ಕೆ ಕೋಪ ಬಂದಿದೆಯಾ? ಸಂಪೂರ್ಣ ಮಾಹಿತಿಯು ಇಲ್ಲಿದೆ, ಮುಂದೆ ಓದಿ.

ಸಿಎಂ ಸಿದ್ದರಾಮಯ್ಯ VS ದರ್ಶನ್ ಫ್ಯಾಮಿಲಿ?
ದರ್ಶನ್ ತೂಗುದೀಪ್ ಪದೇ ಪದೇ ಅನಾಹುತ ಮಾಡುತ್ತಲೇ ಇರುತ್ತಾರೆಂಬ ಆರೋಪವಿದೆ. ದರ್ಶನ್ ತೂಗುದೀಪ್ ಬದುಕಿನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಅಚ್ಚುಕಟ್ಟಾದ ಸಂಸಾರ & ಒಬ್ಬ ಮುದ್ದಾದ ಮಗ ಕೂಡ ಜೊತೆಗೆ ಇದ್ದ. ಆದರೆ ದರ್ಶನ್ ತೂಗುದೀಪ್ ತಮ್ಮ ಕೋಪದ ಕೈಗೆ ಬುದ್ಧಿ ಕೊಟ್ಟು ಏನೇನೋ ಅನಾಹುತ ಮಾಡಿಕೊಂಡರು ಅನ್ನೋದು ದರ್ಶನ್ ಫ್ಯಾನ್ಸ್ ಕಣ್ಣೀರು.
ದರ್ಶನ್ ಜೈಲಿಗೆ ಹೋಗದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ್ ರಕ್ಷಣೆ ಮಾಡಲು ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳೇ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಈ ಒತ್ತಡಗಳಿಗೆ ಮಣಿಯದೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಆದೇಶವನ್ನ ನೀಡಿದ್ದರು. ದರ್ಶನ್ ತೂಗುದೀಪ್‌ಗೆ ಇದು ದೊಡ್ಡ ಆಘಾತ ನೀಡಿತ್ತು.
ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದರೆ ಪ್ರಯೋಜನ ಆಗಲ್ಲ, ದರ್ಶನ್ ತೂಗುದೀಪ್ ಅವರನ್ನ ಬಿಡುಗಡೆ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನೆರವು ನೀಡಬಹುದು ಎಂದು ದರ್ಶನ್ ತೂಗುದೀಪ್‌ರ ಪತ್ನಿ ವಿಜಯಲಕ್ಷ್ಮೀ ಅವರು ಇದೀಗ ಕುಟುಂಬ ಸಮೇತ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ನೆರವು ಸಿಗುವುದು ಅನುಮಾನ?
ಮತ್ತೊಂದು ಕಡೆ ದರ್ಶನ್ ಅವರು ಡಿ.ಕೆ. ಶಿವಕುಮಾರ್ & ಡಿ.ಕೆ. ಸುರೇಶ್ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಹಿಂದೆ ಕೂಡ ಡಿಕೆ ಶಿವಕುಮಾರ್ ಅವರು ಕಾನೂನು ಎಲ್ಲರಿಗೂ ಒಂದೇ ಎಂದಿದ್ದರು. ಹೀಗಾಗಿ ದರ್ಶನ್ ಅವರ ಕುಟುಂಬಕ್ಕೆ ಇಲ್ಲಿ ಕೂಡ ನೆರವು ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ದರ್ಶನ್ ಕೂಡ ಮದುವೆಗೆ ಬರ್ತಾರಾ?
ಸೋನಾಲ್ ಅವರಿಗೆ ದರ್ಶನ್ ತೂಗುದೀಪ್ ಅಣ್ಣನ ಸಮಾನ. ಅಲ್ಲದೆ ಖುದ್ದು ಸೋನಾಲ್ ಕೂಡ ದರ್ಶನ್ ಅವರನ್ನ ಅಣ್ಣಾ ಅಂತಾ ಕರೆಯುತ್ತಿದ್ದರು. ಹೀಗಾಗಿ ಇದೀಗ ಜೈಲಿನಲ್ಲಿ ಇರುವ ನಟಿ ಸೋನಾಲ್ ಅವರ ಅಣ್ಣ ದರ್ಶನ್ ತೂಗುದೀಪ್ ಮದುವೆಗೆ ಬರ್ತಾರಾ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನ ಕಾಡುತ್ತಿದೆ. ಈಗಾಗಲೇ ದರ್ಶನ್ ತೂಗುದೀಪ್ ಅವರಿಗೆ ಮದುವೆ ಆಮಂತ್ರಣ ಪತ್ರ ತಲುಪಿದೆ. ಖುದ್ದಾಗಿ ಜೈಲಿಗೆ ತೆರಳಿದ್ದ ನಿರ್ದೇಶಕ ತರುಣ್ ಸುಧೀರ್, ಈ ಮದುವೆ ಆಮಂತ್ರಣ ಪತ್ರ ತಲುಪಿಸಿದ್ದಾರೆ. ಹೀಗಾಗಿ ತೀವ್ರ ಕುತೂಹಲ ಕೆರಳಿದ್ದು, ಮುಂದೆ ಏನಾಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಮುಂದಿನ ತಿಂಗಳು ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಅಭಿಮಾನಿಗಳು ದರ್ಶನ್ ಬರ್ತಾರೆ ಅಂತಾ ಕಾಯುತ್ತಿದ್ದಾರೆ.
ದರ್ಶನ್ & ಜೊತೆಗಾರರಿಗೆ ಬಿರಿಯಾನಿ?
ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ, ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ, ಸಿಗರೇಟ್, ಲಿಕ್ಕರ್ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ, ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳಿಗೆಲ್ಲಾ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅದರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎಂಬ ಆರೋಪದ ನಡುವೆ, ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ ಸಪ್ಲೈ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿತ್ತು. ಆದರೆ ಇದಕ್ಕೆಲ್ಲ ಸೂಕ್ತ ಸಾಕ್ಷ್ಯಗಳು ಲಭ್ಯವಾಗಿಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗುತ್ತಿದೆ.












Click it and Unblock the Notifications