Darshan Thoogudeepa: ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್‌ಗೆ ಚಾಮುಂಡೇಶ್ವರಿ ದೇವಿ ಶಾಪ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಾ ಇದೆ. ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್ ಇದೀಗ ಪರದಾಡುತ್ತಾ ಒಂಟಿಯಾಗಿ ಕೂಗಾಡುತ್ತಿದ್ದಾರೆ. ದರ್ಶನ್ ತೂಗುದೀಪ್ ಜೀವನದಲ್ಲಿ ದೊಡ್ಡ ಕಂಟಕ ಎದುರಾಗಿದ್ದು, ಈ ಸಮಯದಲ್ಲಿ ಅವರಿಗೆ ಬೆಂಬಲ ನೀಡುವವರು ಬೇಕಾಗಿದೆ. ದರ್ಶನ್ ತೂಗುದೀಪ್ ಪರವಾಗಿ ಹೆಂಡತಿ ವಿಜಲಕ್ಷ್ಮೀ ದರ್ಶನ್ ದೊಡ್ಡ ಹೋರಾಟ ನಡೆಸುವಾಗಲೇ, ದಸರಾ ಹಬ್ಬದ ದಿನವೇ ಸ್ಫೋಟಕ ಆರೋಪ ಕೇಳಿಬಂದಿದೆ. ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್‌ಗೆ ಚಾಮುಂಡೇಶ್ವರಿ ದೇವಿ ಶಾಪ...
ದರ್ಶನ್ ತೂಗುದೀಪ ಹೊರಗೆ ಇದ್ದಾಗ ರಾಜನ ರೀತಿ ಮೆರೆಯುತ್ತಿದ್ದರು, ಆದರೆ ಈಗ ಅವರ ಪರದಾಟ ನೋಡಿದರೆ ಕಣ್ಣೀರು ಬರುತ್ತೆ ಅಂತಾ ದರ್ಶನ್ ತೂಗುದೀಪ್ ಫ್ಯಾನ್ಸ್ ಹೇಳ್ತಿದ್ದಾರೆ. ಇದೇ ಕಾರಣಕ್ಕೆ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲನ್ನು ಬಿಟ್ಟು ಹೊರಗೆ ಬರಬೇಕು ಅಂತಾ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್‌ಗೆ ಇಷ್ಟೆಲ್ಲಾ ಕಷ್ಟ ಎದುರಾಗಲು ನಾಡ ದೇವತೆ ಚಾಮುಂಡೇಶ್ವರಿ ದೇವಿ ಕಾರಣ ಎಂಬ ಮಾತು ಇದೀಗ ಕೇಳಿಬಂದಿದ್ದು, ಸಂಚಲನ ಸೃಷ್ಟಿಯಾಗಿದೆ. ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್‌ಗೆ ಚಾಮುಂಡೇಶ್ವರಿ ದೇವಿ ಶಾಪ...

ಚಾಮುಂಡೇಶ್ವರಿ ದೇವಿ ಶಾಪ...
ದರ್ಶನ್ ತೂಗುದೀಪ ಅವರ ಜೀವನದಲ್ಲಿ ಹಿಂಗೆಲ್ಲಾ ಆಗುತ್ತಿರಲು ಕಾರಣ ದೇವಿಯ ಶಾಪ ಎನ್ನಲಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ದೊಡ್ಡ ಸಮಸ್ಯೆ ಶುರು ಆಗಿದ್ದು 2008 ರಿಂದ. ಅಂದಹಾಗೆ ಅದೇ ವರ್ಷ ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರ 'ನವಗ್ರಹ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಮಾಡಿದ್ದೇ ನಟ ದರ್ಶನ್ ತೂಗುದೀಪ್ ಜೀವನ ಹಿಂಗೆಲ್ಲಾ ಆಗಲು ಕಾರಣವಾಗಿದ್ದು ಎಂಬ ಆರೋಪ ಇದೀಗ ಕೇಳಿಬರುತ್ತಿದೆ. ಯಾಕೆ ಗೊತ್ತಾ? ಮುಂದೆ ಓದಿ.
ದರ್ಶನ್ ತೂಗುದೀಪ್‌ಗೆ 2011ರಲ್ಲಿ ಜೈಲು
ಹೌದು, 2008 ರಲ್ಲಿ ರಿಲೀಸ್ ಆಗಿದ್ದ 'ನವಗ್ರಹ' ಸಿನಿಮಾದಲ್ಲಿ ದಸರಾ ಅಂಬಾರಿ ಕದಿಯುವ ಕಥೆ ಇತ್ತು ಮೈಸೂರು ಅರಮನೆ ಮೂಲಕ ದಸರಾ ಅಂಬಾರಿ ಕದ್ದು ತೆಗೆದುಕೊಂಡು ಹೋಗುವ ಸ್ಟೋರಿ ಇದ್ದ ಸಿನಿಮಾ 'ನವಗ್ರಹ'. ಹೀಗೆ 2008 ರಲ್ಲಿ ರಿಲೀಸ್ ಆಗಿದ್ದ 'ನವಗ್ರಹ' ಸಿನಿಮಾ ನಂತರ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ನಿಧಾನವಾಗಿ ದೊಡ್ಡ ದೊಡ್ಡ ಸಮಸ್ಯೆ ಎದುರಾದವು. ಮೊದಲಿಗೆ 2011 ರಲ್ಲೇ ದರ್ಶನ್ ತೂಗುದೀಪ್ ತಮ್ಮ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಆ ನಂತರ ಹಲವು ಸಮಸ್ಯೆಗಳು ದರ್ಶನ್ ತೂಗುದೀಪ್ ಬೆನ್ನು ಹತ್ತಿದ್ದವು. ಈಗ ನೋಡಿದರೆ 2024 ರಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ದಸರಾ ಹಬ್ಬ ಆಚರಿಸುವ ಪರಿಸ್ಥಿತಿ ಬಂದಿದೆ.
'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..'
ಅಂದಹಾಗೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಲಿವಿನ್ ರಿಲೇಷನ್‌ಶಿಪ್ ಇತ್ತು ಎಂಬ ವಿಚಾರ ಬಟಾ ಬಯಲಾಗಿದೆ. ಲಿವಿನ್ ರಿಲೇಷನ್‌ಶಿಪ್ ಅಂದ್ರೆ ಮದುವೆ ಆಗದೆಯೇ, ಗಂಡ & ಹೆಂಡತಿ ರೀತಿ ಬಾಳುವುದು ಮತ್ತು ಜೀವನ ನಡೆಸುವುದು. ಈ ರೀತಿ ಇದ್ದಾಗಲೇ, ದರ್ಶನ್ ತೂಗುದೀಪ್ ಅವರಿಗೆ ಪವಿತ್ರಾ ಗೌಡ ಅಂದ್ರೆ ಪಂಚ ಪ್ರಾಣ ಆಗಿದ್ದರು. ಹೀಗಾಗಿಯೇ ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡರನ್ನ 'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..' ಅಂತಾ ಕರೆಯುತ್ತಿದ್ದರು. ಇದೀಗ ಅದೇ ಮುದ್ದು ಹೆಂಡತಿಗಾಗಿ ದರ್ಶನ್ ತೂಗುದೀಪ್ ಅವರು ಜೈಲು ಸೇರಿದ್ದಾರೆ ಎಂಬ ಆರೋಪ ಕೂಡ ಇದೆ. ಇದರ ನಡುವೆ ಅಂಬಾರಿ ಕದಿಯುವಂತೆ ಸಿನಿಮಾ ಮಾಡಿದ್ದು ಕೂಡ ಸಮಸ್ಯೆ ತಂದಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications