Darshan Thoogudeepa: ದರ್ಶನ್ ಸುಮಲತಾ ಮಧ್ಯೆ ಬಿರುಕು: ಸುಮಲತಾರನ್ನ ಅನ್‌ಫಾಲೋ ಮಾಡಿದ ಡಿ-ಬಾಸ್

ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರು ಇಂದಿನಿಂದ ಮೈಸೂರಿನಲ್ಲಿ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಕಾನೂನು ಹೋರಾಟ ಹಾಗೂ ಅನಾರೋಗ್ಯದ ನಡುವೆ ಮತ್ತೆ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದ್ದಾರೆ ದಾಸ. ಆದರೆ ಈ ನಡುವೆ ದರ್ಶನ್ ಹಾಗೂ ಸುಮಲತಾ ಅಂಬರೀಷ್ ನಡುವೆ ಬಿರುಕು ಉಂಟಾಗಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹೌದು... ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಬಾಯಿ ತುಂಬಾ 'ಅಮ್ಮಾ...' ಎಂದು ಕರೆಯುತ್ತಿದ್ದ ಸುಮಲತಾ ಅಂಬರೀಶ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಹಲವಾರು ಇವೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದಾಗ ಒಂದು ಬಾರಿಯಾದರೂ ಸುಮಲತಾ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿಲ್ಲ.

darshan thoogudeepa sumalatha ambareesh bonding broken

ಇದೀಗ ದರ್ಶನ್ ಅವರು ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ದರ್ಶನ್ ಅವರು ಯಾರನ್ನು ಫಾಲೋ ಮಾಡದೇ ಇರೋದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ದರ್ಶನ್ ಅವರನ್ನು ಜೈಲಿನಲ್ಲಿ ಇರುವಾಗ ಸುಮಲತಾ ಅವರು ಬೆಂಬಲಿಸಿಲ್ಲ ಅನ್ನೋ ಮುನಿಸು ದರ್ಶನ್ ಅವರಿಗೆ ಇರಬಹುದು ಎಂಬ ಅನುಮಾನವಿದೆ.

ಸುಮಲತಾ ಅಂಬರೀಷ್ ದರ್ಶನ್ ಅವರು ಜೈಲಿನಿಂದ ಹೊರ ಬಂದ ಬಳಿಕವಾದರೂ ಭೇಟಿ ಮಾಡಿದರಾ ಇಲ್ವಾ ಅನ್ನೋದು ಕೂಡ ಯಾರಿಗೂ ಗೊತ್ತಿಲ್ಲ. ಹೀಗಾಗಿ ದರ್ಶನ್ ಹಾಗೂ ಸುಮಲತಾ ನಡುವೆ ಬಿರುಕು ಉಂಟಾಗಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

darshan thoogudeepa sumalatha ambareesh bonding broken

ಆದರೂ ಕೂಡ ಸುಮಲತಾ ಅಂಬರೀಷ್ ದರ್ಶನ್ ಯಾವಾಗಲಿದ್ದರೂ ನನ್ನ ಮಗನೇ ಎಂದು ಹೇಳಿದ್ದರು. ಅವರು ತಪ್ಪು ಮಾಡಿಲ್ಲ ಎಂದು ನನ್ನ ಮನಸ್ಸು ಹೇಳುತ್ತದೆ. ಸತ್ಯ ಒಂದಲ್ಲಾ ಒಂದು ದಿನ ಹೊರಬರಲಿದೆ ಎಂದು ಸುಮಲತಾ ಈ ಹಿಂದೆ ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದರು. ಆದರೆ ಈವರೆಗೂ ಅವರಿಬ್ಬರೂ ಕೂಡ ಭೇಟಿ ಮಾಡಿರುವ, ಮಾತಾಡಿರುವ ಸುಳಿವುಗಳು ಇಲ್ಲ. ಇದು ಅನುಮಾನವನ್ನು ಹೆಚ್ಚಿಸಿದೆ.

ಇನ್ನೂ ದರ್ಶನ್ ಸುಮಲತಾ ಅವರನ್ನು ಅನ್‌ಫಾಲೋ ಮಾಡುತ್ತಿದ್ದಂತೆ ಸುಮಲತಾ ಅವರು ಒಂದು ಪೋಸ್ಟ್ ಅನ್ನು ಹಾಕಿದ್ದಾರೆ. ಅದರಲ್ಲಿ 'ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತದೆ ಎಂದರೆ.. ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದಾಗ್ಯೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ' ಎಂದು ಸುಮಲತಾ ಬರೆದುಕೊಂಡಿದ್ದಾರೆ. ಇದು ಅನುಮಾನಗಳನ್ನು ಹೆಚ್ಚಿಸಿದೆ.

ಯಾಕೆಂದರೆ ದರ್ಶನ್ ಹಾಗೂ ಸುಮಲತಾ ಅಂಬರೀಷ್ ತಾಯಿ ಮಗನಂತೆ ಇದ್ದವರು. ಮಂಡ್ಯದಲ್ಲಿ ಸಮಲತಾ ಅವರಿಗೆ ದರ್ಶನ್ ಹೆಗಲಾಗಿ ನಿಂತು ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಸಹಾಯ ಮಾಡಿದ್ದರು. ಹೀಗಿದ್ದರೂ ಕೂಡ ಸುಮಲತಾ ಜೈಲಿಗೆ ಹೋಗಲಿಲ್ಲ. ಆದರೆ ಅಭಿಷೇಕ್ ಮಾತ್ರ ಜೈಲಿಗೆ ಹೋಗಿ ದರ್ಶನ್ ಅವರನ್ನ ಭೇಟಿ ಮಾಡಿ ಬಂದಿದ್ದರು.

ಇದೀಗ ನೇರವಾಗಿ ಮುನಿಸು ಕಾಣಿಸದೇ ಇದ್ದರೂ ದರ್ಶನ್ ಹಾಗೂ ಸುಮಲತಾ ಎಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಳ್ಳದೇ ಇರುವುದು ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿತ್ತು. ಇದೀಗ ದರ್ಶನ್ ಹಲವರನ್ನು ಅನ್‌ಫಾಲೋ ಮಾಡಿರುವುದು ಮನುಮಾನವನ್ನು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+