Darshan Thoogudeepa: ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಮಾಡಲು ಸಕಲ ಸಿದ್ಧತೆ?
ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರ ಬರ್ತಾರೆ ಅಂತಾ ಕಾಯುತ್ತಿರುವ, ಕೋಟಿ ಕೋಟಿ ಫ್ಯಾನ್ಸ್‌ಗೆ ಭರ್ಜರಿ ಸುದ್ದಿ ಸಿಕ್ಕಂತಗಿದೆ. ಬಳ್ಳಾರಿ ಜೈಲಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ಆಗಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಈಗ ಫ್ಯಾನ್ಸ್ ಪಾಲಿಗೆ ದೇವರ ರೀತಿಯೇ ಕಾಣುತ್ತಿದ್ದಾರೆ. ಹೀಗಿದ್ದಾಗ ಕೊಲೆ ಆರೋಪಿ ಆಗಿರುವ ನಟನ ವಿರುದ್ಧ ತನಿಖೆ & ವಿಚಾರಣೆ ಮುಂದುವರಿದಿದೆ. ಈ ಸಮಯದಲ್ಲೇ ದರ್ಶನ್‌ರ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ದಿಢೀರ್ ಸಿಕ್ಕಿದ್ದು, ನಟ ದರ್ಶನ್ ತೂಗುದೀಪ್‌ಗೆ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಅವಕಾಶ...
ದರ್ಶನ್ ತೂಗುದೀಪ್ ಜೀವನದಲ್ಲಿ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ಸದ್ದು ಮಾಡಿದ್ದ ವಿವಾದಾತ್ಮಕ ವ್ಯಕ್ತಿ. ಅದು ಅವರ ಪರ್ಸನಲ್ ಬಿಡು ಗುರೂ ಅಂತಾ ಜನ ಕೂಡ ಹೇಳ್ತಿದ್ರು, ಆದರೆ ಈಗ ನೋಡಿದರೆ ಭಯಾನಕವಾಗಿ ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿರುವ ಆರೋಪ ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿದೆ. ಈ ಸ್ಥಿತಿಯಲ್ಲಿ ದರ್ಶನ್‌ಗೆ ಬಳ್ಳಾರಿ ಜೈಲಿನಿಂದ ಮುಕ್ತಿ ಕೊಡಿಸಿ, ಜೈಲಿನಿಂದ ರಿಲೀಸ್ ಮಾಡಿಸಿಕೊಂಡು ಕರೆದುಕೊಂಡು ಬರುವ ಪ್ಲಾನ್ ಕೂಡ ನಡೆದಿದೆಯಂತೆ! ಹಾಗಾದ್ರೆ ದರ್ಶನ್ ತೂಗುದೀಪ್ ರಿಲೀಸ್ ಆಗುವುದು ಯಾವಾಗ? ಮುಂದೆ ಓದಿ.

ಅಭಿಮಾನಿಗಳ 'ಡಿ-ಬಾಸ್' ರಿಲೀಸ್?
ಅಷ್ಟಕ್ಕೂ ದರ್ಶನ್ ತೂಗುದೀಪ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಆರೋಪ ಕೇಳಿಬಂದಿದ್ದ ಹಿನ್ನೆಲೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರಿಗೆ ಈಗ ಜಾಮೀನು ಅಂದ್ರೆ ಬೇಲ್ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೂ ದರ್ಶನ್‌ರ ಬಳ್ಳಾರಿ ಜೈಲಿಂದ ರಿಲೀಸ್ ಮಾಡಿಸಿಕೊಂಡು ಹೊರಗೆ ಕರೆದುಕೊಂಡು ಬರಲು ಸಿದ್ಧತೆಗಳು ಸಾಗಿವೆಯಂತೆ. ಈ ಕುರಿತು ಮುನ್ಸೂಚನೆ ನೀಡಿರುವ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು ದರ್ಶನ್ ಅವರ ಫ್ಯಾನ್ಸ್‌ಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.
ದರ್ಶನ್ ತೂಗುದೀಪ್ ಜೈಲಿಂದ ರಿಲೀಸ್?
ಅಂದಹಾಗೆ ಅಕ್ಟೋಬರ್ 22 ರಂದು ಉಪೇಂದ್ರ ನಿರ್ದೇಶನ ಮಾಡಿದ್ದ 'ಉಪೇಂದ್ರ' ಸಿನಿಮಾಗೆ ಬರೋಬ್ಬರಿ 25 ವರ್ಷ ತುಂಬುತ್ತಿದೆ. ಹೀಗಾಗಿ 'ಉಪೇಂದ್ರ' ಸಿನಿಮಾದ ಬೆಳ್ಳಿಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ. ಇದೇ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಘಟಾನುಘಟಿ ನಟರನ್ನ ಕರೆದುಕೊಂಡು ಬರಲು ಪ್ಲಾನ್ ಮಾಡಿದ್ದಾರೆ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು.
ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಅವರು ಸೇರಿದಂತೆ ದೊಡ್ಡ ದೊಡ್ಡ ನಟರನ್ನೇ ಕರೆದುಕೊಂಡು ಬರುವ ಯೋಜನೆ ರೂಪಿಸಲಾಗಿದೆ. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರನ್ನು ಕೂಡ ಪೆರೋಲ್ ಮೇಲೆ ಬಳ್ಳಾರಿ ಜೈಲಿಂದ ರಿಲೀಸ್ ಮಾಡಿಸಿಕೊಂಡು ಬರಲು ಸಿದ್ಧತೆ ಸಾಗಿದೆ ಎನ್ನಲಾಗಿದೆ.












Click it and Unblock the Notifications