ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಬರ್ತ್‌ಡೇ ಪಾರ್ಟಿ, ನಟ ದರ್ಶನ್‌ಗೆ ಮತ್ತೆ ಆಘಾತ? Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ 1,00,00,00,000 ಕೋಟಿ ಸಿನಿಮಾ ಮಾಡಿ, 2,00,00,00,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಿನಿಮಾ ಹಿಟ್ ಮಾಡಿ ಸದ್ದು ಮಾಡಿದ್ದ ನಟ ದರ್ಶನ್ ತೂಗುದೀಪ್ ಅವರು ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ 2ನೇ ಆರೋಪಿ ಆಗಿ ಜೈಲಿಗೆ ಹೋಗಿರುವ ನಟ ದರ್ಶನ್ ತೂಗುದೀಪ್ ಅವರಿಗೆ, ಇದೀಗ ಮತ್ತೊಂದು ಆಘಾತವೇ ಎದುರಾಗಿದೆ!
ಹೌದು, ನಟ ದರ್ಶನ್ ತೂಗುದೀಪ್ ತಮ್ಮ ಗೆಳತಿ ಪವಿತ್ರಾ ಗೌಡ ತಂಟೆಗೆ ಬಂದ ಅಂತಾ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕಥೆಯನ್ನೇ ಮುಗಿಸಿದ ಆರೋಪ ಎದುರಿಸುತ್ತಾ ಇದ್ದಾರೆ. ಹೀಗಿದ್ದಾಗ 2024 ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಖುಷಿಯಾಗಿ ಇದ್ದರು. ಆದರೆ ಮತ್ತೆ ದಿಢೀರ್ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗಿ ಪರದಾಡುತ್ತಿದ್ದು, ಕನಿಷ್ಠ ಹೊಸ ಬಕೆಟ್ & ಚಂಬು ಹಾಗೂ ದಿಂಬು ಬೇಕು ಅಂತಾ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ!

ದಿಢೀರ್ ದರ್ಶನ್ ತೂಗುದೀಪ್‌ಗೆ ಆಘಾತ!
ಅಂದಹಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಕೇಕ್ ಕಟ್ ಮಾಡಿ ಭರ್ಜರಿಯಾಗಿ ಬರ್ತ್‌ಡೇ ಪಾರ್ಟಿ ಮಾಡಿರುವ ವಿಡಿಯೋ ಸಂಚಲನ ಸೃಷ್ಟಿ ಮಾಡಿದೆ. ಈ ಹಿಂದೆ ಅಂದರೆ 2024 ರಲ್ಲಿ ದರ್ಶನ್ ತೂಗುದೀಪ್ ತೂಗುದೀಪ್ ಜೈಲಿನ ಒಳಗೆ ಸಿಗರೇಟ್ ಸೇದುತ್ತಾ, ಕೈಯಲ್ಲಿ ಟೀ ಕಪ್ ಹಿಡಿದು ಕೂತಿದ್ದ ಫೋಟೋ ವೈರಲ್ ಆಗಿ ತಲ್ಲಣ ಸೃಷ್ಟಿಯಾಗಿತ್ತು. ಆ ನಂತರ ಅವರನ್ನು ದಿಢೀರ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಈ ಬಾರಿ ಅಭಿಮಾನಿಗಳ ಪಾಲಿನ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಸೌಲಭ್ಯ ಇಲ್ಲದೇ ನರಳುತ್ತಿದ್ದಾರೆ. ಹೀಗಿದ್ದಾಗಲೇ, ಮತ್ತೊಂದು ಭೀಕರ ಆಘಾತ ಇದೀಗ ಎದುರಾಗಿದೆ...
ಮತ್ತಷ್ಟು ಸಂಕಷ್ಟ ಎದುರಾಯ್ತಾ ಈಗ?
ಹೌದು, ಇದೀಗ ಮತ್ತೊಮ್ಮೆ ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್ ಪಾರ್ಟಿ ಮಾಡಿರುವ ಹಿನ್ನೆಲೆ ದೊಡ್ಡ ಚರ್ಚೆ ಶುರುವಾಗಿದ್ದು ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಯುತ್ತಿದೆ. ಈ ನಡುವೆ ನಟ ದರ್ಶನ್ ಅವರಿಗೆ ಮತ್ತಷ್ಟು ಸೌಲಭ್ಯಗಳು ಕಟ್ ಆಗುವ ಭಯ ಕೂಡ ಇದೀಗ ಕಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ. ಹೀಗಾಗಿ ಕಾದು ನೋಡಬೇಕಿದೆ.











Click it and Unblock the Notifications